ವೇದವಾಕ್ಯ

ಗುರುದೇವ! ಕೃಪೆಯ ಒಂದು ಹನಿಯಿಂದ ಈ ನಿಮ್ಮ ಸೇವಕನನ್ನು ಹುಲ್ಲಿನ ಗರಿಗಿಂತಲೂ ಹೆಚ್ಚು ವಿನಮ್ರಗೊಳಿಸಿ. ಎಲ್ಲ ಸಂಕಷ್ಟಗಳನ್ನು ಹೊರುವ ಶಕ್ತಿ ಕೊಡಿ ಮತ್ತು ಗೌರವಕ್ಕಾಗಿನ ಎಲ್ಲ ಅಪೇಕ್ಷೆಗಳಿಂದ ಮುಕ್ತಗೊಳಿಸಿ. ಓ ಪ್ರಭುವೇ! ಜೀವಗಳನ್ನೆಲ್ಲ  ಸೂಕ್ತವಾಗಿ ಗೌರವಿಸಲು ನನಗೆ ಶಕ್ತಿ ಕೊಡಿ. ಆಗ ಮಾತ್ರ ನಾನು ಅಪರಾಧಗಳಿಂದ ಮುಕ್ತನಾಗಿ ಪರಮಾನಂದದಿಂದ ಪವಿತ್ರ ನಾಮವನ್ನು ಜಪಿಸಬಹುದು.

– ಶ್ರೀಲ ಭಕ್ತಿವಿನೋದ ಠಾಕುರ, ಗುರುದೇವ, ಶರಣಾಗತಿ

* * * *

ಓ ಹರಿಯೇ! ನಾನು ನನ್ನ ಬದುಕನ್ನು ವ್ಯರ್ಥಗೊಳಿಸಿಬಿಟ್ಟಿರುವೆ. ಈ ಅಪರೂಪದ ಮಾನವ ಜನ್ಮ ತಳೆದಿದ್ದರೂ ನಾನು ರಾಧಾ ಮತ್ತು ಕೃಷ್ಣರ ಸೇವೆ ಮಾಡಿಲ್ಲ. ಆದುದರಿಂದ ನಾನು ಅರಿತೇ ವಿಷ ಸೇವಿಸಿರುವೆ. ಶ್ರೀ ಹರಿಯ ಪವಿತ್ರನಾಮ ಸಂಕೀರ್ತನೆಯ ಪ್ರೇಮ ಸಂಪತ್ತು ಗೋಲೋಕ ವೃಂದಾವನದಿಂದ ಇಳಿದು ಬಂದಿದೆ. ಆ ಕೀರ್ತನೆಗಾಗಿ ನನ್ನ ಆಕರ್ಷಣೆ ಏಕೆ ಹೊರಹೊಮ್ಮಲಿಲ್ಲ?  ಹಗಲೂ ರಾತ್ರಿ ನನ್ನ ಹೃದಯವು ಲೌಕಿಕತೆಯ ವಿಷದ ಅಗ್ನಿಯಲ್ಲಿ ಸುಡುತ್ತಿದೆ. ಅದರಿಂದ ಮುಕ್ತನಾಗುವ ಬಗೆಯನ್ನು ನಾನು ಸ್ವೀಕರಿಸಿಲ್ಲ.

– ಶ್ರೀಲ ನರೋತ್ತಮ ದಾಸ ಠಾಕುರ, ಇಷ್ಟದೇವೇ ವಿಜ್ಞಾಪ್ತಿ, ಪ್ರಾರ್ಥನಾ

* * * *

ಓ ರಾಧಾ! ಮಾಧವನ ಪ್ರಿಯತಮೆ! ಗೋಕುಲದ ಎಲ್ಲ ಬಾಲಕಿಯರಿಂದ ಪೂಜಿಸಲ್ಪಡುವವಳೇ!  ನಿನಗೆ ಜಯವಾಗಲಿ! ಶ್ರೀ ದಾಮೋದರನು ನಿನ್ನನ್ನು ಹೆಚ್ಚು ಪ್ರೀತಿಸುವಂತೆ ಉಡುಪು ಧರಿಸುವವಳೇ! ಶ್ರೀಹರಿಯ ಆನಂದ ಬಿಂದುವೇ! ರಾಜ ವೃಷಭಾನುವಿನ ಸಾಗರದಿಂದ ಹೊಮ್ಮಿದ ಹೊಸ ಚಂದ್ರವೇ! ಲಲಿತೆಯ ಗೆಳತಿಯೇ! ವಿಶಾಖಾಳನ್ನು ಆನಂದ ಪಡಿಸುವ ಸದ್ಗುಣ ಉಳ್ಳವಳೇ! ಅತ್ಯಂತ ಕರಣಾಮಯಿ ದೇವಿ! ಸನಕ ಮತ್ತು ಸನಾತನ ಕುಮಾರರು ಹಾಡುವ ದೈವಿ ಗುಣಗಳು ಉಳ್ಳವಳೇ!  ಓ ರಾಧಾ! ನನ್ನ ಮೇಲೆ ಕೃಪೆ ತೋರು!

– ಶ್ರೀಲ ರೂಪ ಗೋಸ್ವಾಮಿ, ಶ್ರೀರಾಧಿಕಾ ಸ್ತವ, ಸ್ತವ ಮಾಲಾ

* * * *

`ನೀನೂ ನಾನೂ ಅನೇಕ ಜನ್ಮಗಳನ್ನು ಕಳೆದಿದ್ದೇವೆ. ನನಗೆ ಅವೆಲ್ಲ ಜನ್ಮಗಳ ನೆನಪಿದೆ.
ಆದರೆ ಶತ್ರು ದಮನನಾದವನೇ, ಆ ನೆನಪು ನಿನಗಿಲ್ಲ!’

– ಶ್ರೀ ಕೃಷ್ಣ, ಭಗವದ್ಗೀತೆ, 4.5

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi