ವೇದವಾಕ್ಯ

ಭಗವದ್ಗೀತೆಯಲ್ಲಿ ಸ್ವತಃ ಭಗವಂತನು ಹೇಳಿರುವಂತೆ ಅವನ ಜನ್ಮ, ಕರ್ಮ ಮತ್ತು ಲೀಲೆಗಳೆಲ್ಲ ಅಲೌಕಿಕ. ಅದೇ ರೀತಿ ಭಗವಂತನ ಸಂಗಾತಿಗಳ ಜನ್ಮ, ಕರ್ಮ ಮತ್ತು ಚಟುವಟಿಕೆಗಳು ಕೂಡ ಅಲೌಕಿಕ. ತಮ್ಮನ್ನು ತಾವು ಕೃಷ್ಣನೆಂದು ಕರೆದುಕೊಳ್ಳುವುದು ಹೇಗೆ ಅಪರಾಧವೋ ಅದೇ ರೀತಿ ಯಶೋದ, ನಂದ ಅಥವಾ ಭಗವಂತನ ಇನ್ನಿತರ ಸಂಗಾತಿಗಳೆಂದು ಭಾವಿಸಿಕೊಳ್ಳುವುದೂ ಅಪರಾಧ. ಅವರು ಅಲೌಕಿಕರು, ಎಂದೂ ಬದ್ಧ ಆತ್ಮಗಳಲ್ಲ ಎಂಬುವುದನ್ನು ನಾವು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

– ಶ್ರೀಲ ರೂಪ ಗೋಸ್ವಾಮಿ, ಭಕ್ತಿ ರಸಾಮೃತ ಸಿಂಧು

* * * *

ಆಧ್ಯಾತ್ಮಿಕ ಗುರುವಿನ ಕೃಪೆಯಿಂದ ವ್ಯಕ್ತಿಯು ಕೃಷ್ಣನ ದೈವಾನುಗ್ರಹವನ್ನು ಪಡೆಯುತ್ತಾನೆ. ಆಧ್ಯಾತ್ಮಿಕ ಗುರುವಿನ ಆಶೀರ್ವಾದವಿಲ್ಲದೆ ಯಾರೂ ಕೂಡ ಯಾವುದೇ ಮುನ್ನಡೆ ಸಾಧಿಸಲಾಗದು. ಆದುದರಿಂದ, ನಾನು ಸದಾ ಆಧ್ಯಾತ್ಮಿಕ ಗುರುವನ್ನು ನೆನಪುಮಾಡಿಕೊಳ್ಳುವೆ ಮತ್ತು ಕೊಂಡಾಡುವೆ. ದಿನಕ್ಕೆ ಮೂರು ಬಾರಿಯಾದರೂ ನನ್ನ ಆಧ್ಯಾತ್ಮಿಕ ಗುರುವಿನ ಚರಣ ಕಮಲಗಳಿಗೆ ನನ್ನ ಗೌರವಗಳನ್ನು ಅರ್ಪಿಸಬೇಕು.

– ಶ್ರೀಲ ವಿಶ್ವನಾಥ ಚಕ್ರವರ್ತಿ ಠಾಕುರ, ಶ್ರೀ ಗುರ್ವಾಷ್ಟಕ

* * * *

ಕೃಷ್ಣನ ಪ್ರೀತಿಪಾತ್ರಳಾದ ತುಳಸಿಯೇ, ನಾನು ಪುನಃ ಪುನಃ ನಿನಗೆ ನಮಿಸುವೆ. ಶ್ರೀ ಶ್ರೀ ರಾಧಾ ಮತ್ತು ಕೃಷ್ಣರ ಸೇವೆಗೈಯುವುದೇ ನನ್ನ ಅಪೇಕ್ಷೆ. ನಿನ್ನ ಆಶ್ರಯ ಪಡೆದವರ ಆಸೆ ನೆರವೇರುತ್ತದೆ. ಅವನ ಮೇಲೆ ನಿನ್ನ ಕೃಪೆ ತೋರಿ, ನೀನು ಅವನನ್ನು ವೃಂದಾವನದ ನಿವಾಸಿ ಮಾಡುವೆ.

– ಶ್ರೀ ತುಳಸಿ ಪೂಜಾ ಕೀರ್ತನ

* * * *

ವರ್ಷಾಂತರಗಳಿಂದ ಶೇಖರವಾಗಿರುವ ಧೂಳಿನಿಂದ ಹೃದಯವನ್ನು ಶುದ್ಧ ಮಾಡುವ ಮತ್ತು ಪುನರಪಿ ಜನನಂ ಪುನರಪಿ ಮರಣಂನ ಬದ್ಧ ಜೀವನದ ಬೆಂಕಿಯನ್ನು ನಂದಿಸುವ ಶ್ರೀ ಕೃಷ್ಣ-ಸಂಕೀರ್ತನೆಗೆ ಜಯ, ಜಯ ! ಈ ಸಂಕೀರ್ತನ ಆಂದೋಲನವು ಇಡೀ ಮಾನವ ಕುಲಕ್ಕೆ ಮುಖ್ಯವಾದ ದೈವಾನುಗ್ರಹ. ಏಕೆಂದರೆ, ಇದು ಭಗವಂತನ ಅನುಗ್ರಹದ ಚಂದ್ರನ ಕಿರಣಗಳನ್ನು ಹರಡುತ್ತದೆ. ಇದು ಎಲ್ಲ ಅಲೌಕಿಕ ಜ್ಞಾನದ ಜೀವನ. ಇದು ಅಲೌಕಿಕ ಆನಂದದ ಸಾಗರವನ್ನು ವಿಸ್ತರಿಸುತ್ತದೆ ಮತ್ತು ನಾವು ಸದಾ ಕಾತರರಾಗಿರುವ ಅಮೃತದ ರುಚಿ ಅನುಭವಿಸಲು ನೆರವಾಗುತ್ತದೆ.

– ಶ್ರೀ ಚೈತನ್ಯ, ಶಿಕ್ಷಾಷ್ಟಕ

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi