ವೇದವಾಕ್ಯ

ಓ! ಜನರೇ! ಜನನ ಮರಣ ಕಾಯಿಲೆಗೆ ಈ ಚಿಕಿತ್ಸೆಯನ್ನು ಕೇಳಿಸಿಕೊಳ್ಳಿ! ಇದು ಕೃಷ್ಣನ ನಾಮ. ಜ್ಞಾನಭೀರುಗಳಾದ ಯಾಜ್ಞವಲ್ಕ್ಯ ಮತ್ತಿತರ ಪರಿಣತ ಯೋಗಿಗಳು ಶಿಫಾರಸು ಮಾಡಿರುವ ಈ ಸೀಮಾರಹಿತ, ಶಾಶ್ವತ ಆಂತರಿಕ ಜ್ಯೋತಿಯು ಅತ್ಯುತ್ತಮ ಔಷಧಿ. ಇದನ್ನು ಕುಡಿದಾಗ ಇದು ಸಂಪೂರ್ಣ ಮತ್ತು ಅಂತಿಮ ಮುಕ್ತಿಯನ್ನು ಅನುಗ್ರಹಿಸುತ್ತದೆ. ಸುಮ್ಮನೆ ಕುಡಿದು ಬಿಡಿ!

– ಮುಕುಂದಮಾಲಾ, ಸೂತ್ರ 15

* * * *

ಯಾರು ಮನಸ್ಸನ್ನು ಗೆದ್ದಿದ್ದಾರೋ ಅವರಿಗೆ ಅವರ ಮನಸ್ಸೇ ಅತ್ಯುತ್ತಮ ಮಿತ್ರ. ಆದರೆ ಹಾಗೆ ಮಾಡಲು ವಿಫಲರಾದವರಿಗೆ ಅವರ ಮನಸ್ಸೇ ದೊಡ್ಡ ಶತ್ರು.

– ಕೃಷ್ಣ, ಭಗವದ್ಗೀತೆ, 6.6

* * * *

ಚಿಂತನಶೀಲರಾದವರು ಕಾರ್ಯದ ಫಲವನ್ನು ತೊರೆಯುತ್ತಾರೆ, ಅವರು ಶುದ್ಧಪ್ರಜ್ಞೆಯ ಹಂತದಲ್ಲಿ ನೆಲೆಗೊಂಡಿರುತ್ತಾರೆ. ಇದರ ಫಲವಾಗಿ ಹುಟ್ಟು, ಸಾವು, ರೋಗ ಮತ್ತು ಮುಪ್ಪುಗಳ ಬಂಧನವು ಕೊನೆಗೊಳ್ಳುತ್ತದೆ. ಇದು ಆನಂದದ ಆಗರವಾದ ಕೃಷ್ಣನ ಜೊತೆ ನಿಜವಾದ ಸಂಯೋಗಕ್ಕೆ ಎಡೆಗೊಡುತ್ತದೆ. ನಾವು ಬಯಸಿದ್ದ ನಿಜವಾದ ಆನಂದವು ಅದೇ.

– ಕೃಷ್ಣ : ಆನಂದದ ಆಗರ

* * * *

ಕೃಷ್ಣನ  ಪವಿತ್ರನಾಮ, ಚರಿತ್ರೆ, ಲೀಲೆಗಳು, ಚಟುವಟಿಕೆಗಳು ಎಲ್ಲವೂ ಕಲ್ಲುಸಕ್ಕರೆಯಂತೆ ದಿವ್ಯ ರುಚಿಯನ್ನು ಹೊಂದಿವೆ. ಅವಿದ್ಯೆ (ಅಜ್ಞಾನ) ಎಂಬ ಕಾಮಾಲೆ ರೋಗ ಬಂದವನಿಗೆ ಸಿಹಿ ತಿಂಡಿಯ ಸವಿ ಗೊತ್ತಾಗುವುದಿಲ್ಲ, ಆದರೆ ಈ ಸವಿಯಾದ ನಾಮಗಳನ್ನು ಸುಮ್ಮನೆ ಪ್ರತಿನಿತ್ಯ ಜಪಿಸುವವನ ನಾಲಗೆಯಲ್ಲಿ ಸಹಜವಾಗಿ ರುಚಿ ಹುಟ್ಟಿ, ಅವನ ರೋಗವು ಕ್ರಮೇಣ ಬುಡಸಮೇತ ನಾಶವಾಗುತ್ತದೆ.

– ಉಪದೇಶಾಮೃತ , ಶ್ಲೋಕ 7

* * * *

ಈ ಲೇಖನ ಶೇರ್ ಮಾಡಿ