ಓ ಭಗವಂತ! ಅಗ್ನಿಯಷ್ಟು ಬಲಶಾಲಿಯೇ, ಓ ಸರ್ವಶಕ್ತನೇ, ಈಗ ನಾನು ನಿನಗೆ ಪ್ರಣಾಮ ಮಾಡಿ ನಿನ್ನ ಕಾಲಿಗೆ ಎರಗುತ್ತೇನೆ. ಓ ಪ್ರಭು, ನಿನ್ನನ್ನು ತಲಪಲು ನನಗೆ ಸರಿಯಾದ ದಾರಿ ತೋರು; ನಾನು ಹಿಂದೆ ಮಾಡಿದ್ದೆಲ್ಲ ನಿನಗೆ ಗೊತ್ತಿರುವುದರಿಂದ ನನ್ನ ಪಾಪಗಳನ್ನೆಲ್ಲ ತೊಳೆದು, ನನ್ನ ಪ್ರಗತಿಗೆ ಅಡ್ಡಿಯಾಗದಂತೆ ಮಾಡು.
– ಶ್ರೀ ಈಶೋಪನಿಷದ್, ಮಂತ್ರ 18
* * * *
ಶ್ರೀ ಕೃಷ್ಣನ ಪವಿತ್ರನಾಮವನ್ನು ಜಪಿಸುವ ಭಕ್ತನನ್ನು ಮನಸಾ ಗೌರವಿಸಬೇಕು. ಆಧ್ಯಾತ್ಮಿಕ ದೀಕ್ಷೆ ಪಡೆದು ವಿಗ್ರಹಾರಾಧನೆ ಮಾಡುವ ಭಕ್ತನಿಗೆ ನಮ್ರ ನಮನಗಳನ್ನು ಸಲ್ಲಿಸಬೇಕು. ಅಚಲ ಭಕ್ತಿಸೇವೆಯಲ್ಲಿ ಮುಂದುವರಿದು, ಇತರರನ್ನು ನಿಂದಿಸುವ ಸ್ವಭಾವವಿಲ್ಲದ ಶುದ್ಧಭಕ್ತರ ಸಹವಾಸ ಮಾಡಿ ಅವರ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು.
– ಉಪದೇಶಾಮೃತ, ಶ್ಲೋಕ 5
* * * *
ಓ, ಕಮಲ ನಯನ ಪ್ರಭುವೇ, ನಮ್ಮ ಕೈ ಜೋಡಿಸಿ, ನಮ್ಮ ತಲೆ ಬಾಗಿಸಿ, ನಮ್ಮ ದೇಹದ ಕೂದಲು ರೋಮಾಂಚನದಿಂದ ನಿಂತು, ಭಾವೋದ್ರೇಕದಿಂದ ನಮ್ಮ ಧ್ವನಿಯೇ ಹೊರಡದೆ ಮತ್ತು ನಮ್ಮ ಕಣ್ಣಿನಿಂದ ವರ್ಷಧಾರೆ ಹರಿಸುತ್ತ, ನಾವು ನಿನ್ನ ಪಾದ ತಳದಲ್ಲಿ ಸತತವಾಗಿ ಧ್ಯಾನಿಸುವುದನ್ನು ಆಸ್ವಾದಿಸುತ್ತಿರಲು, ನಮ್ಮನ್ನು ಕಾಪಾಡು.
– ಮುಕುಂದಮಾಲಾ, ಸ್ತೋತ್ರ 18
* * * *
ಸ್ವತಃ ಕೃಷ್ಣನಾಗಿ ಪ್ರಕಟಗೊಂಡ, ಮತ್ತು ಅವನ ಭಾಗಗಳಾಗಿ ರಾಮ, ನೃಸಿಂಹ, ವಾಮನ ಮುಂತಾದ ರೂಪಗಳಲ್ಲಿ, ಈ ಲೋಕದಲ್ಲಿ ವಿವಿಧ ಅವತಾರಗಳನ್ನೆತ್ತಿದ, ಆದಿದೇವ ಗೋವಿಂದನನ್ನು ನಾನು ಆರಾಧಿಸುವೆ.
– ಬ್ರಹ್ಮ ಸಂಹಿತೆ, 5.39
* * * *






Leave a Reply