ಈ ಜಗತ್ತಿನಲ್ಲಿರುವ ಪ್ರತಿಯೊಂದು ಚರಾಚರವಸ್ತುವೂ ಭಗವಂತನ ನಿಯಂತ್ರಣದಲ್ಲಿದೆ. ಅವನೇ ಅವುಗಳ ಒಡೆಯ. ಆದ್ದರಿಂದ ಪ್ರತಿಯೊಬ್ಬನೂ ತನಗೆ ಅವಶ್ಯವಾದ ವಸ್ತುಗಳನ್ನು ಮಾತ್ರ, ಅವನ ಭಾಗವೆಂದು ಮೀಸಲಿಟ್ಟಿದ್ದನ್ನು ಮಾತ್ರ ಸ್ವೀಕರಿಸಬೇಕು ಮತ್ತು ಇತರರಿಗೆ ಸೇರಿದ ವಸ್ತುಗಳೆಂದು ಚೆನ್ನಾಗಿ ತಿಳಿದುಕೊಂಡು ಅಂತಹ ವಸ್ತುಗಳನ್ನು ಸ್ವೀಕರಿಸಬಾರದು.
– ಶ್ರೀ ಈಶೋಪನಿಷದ್, ಮಂತ್ರ 1
* * * *
ಭೌತಿಕ ಸುಖವರ್ಧನೆಗೆ ನಮ್ಮ ಇಂದ್ರಿಯಗಳನ್ನು ಪ್ರಚೋದಿಸಲು ಬಹಳ ಉತ್ಸುಕರಾಗಿರುವುದಕ್ಕೆ ಬದಲಾಗಿ, ಕೃಷ್ಣಪ್ರಜ್ಞೆಯನ್ನು ಆಚರಿಸುತ್ತಾ ಆಧ್ಯಾತ್ಮಿಕ ಆನಂದವನ್ನು ಪಡೆಯಲು ಪ್ರಯತ್ನಿಸಬೇಕು.
– ಶ್ರೀಲ ಪ್ರಭುಪಾದರು, ಪ್ರಹ್ಲಾದ ಮಹಾರಾಜನ ಪಾರಮಾರ್ಥಿಕ ಬೋಧನೆಗಳು
* * * *
ಓ ನಾಲಗೆಯೇ, ಶ್ರೀ ಕೇಶವನ ವೈಭವವನ್ನು ಕೊಂಡಾಡು. ಓ ಮನಸ್ಸೇ, ಮುರನ ಶತ್ರುವನ್ನು ಪೂಜಿಸು. ಓ ಕೈಗಳೇ, ಶ್ರೀ ಲಕ್ಷ್ಮಿಯ ಪ್ರಭುವಿನ ಸೇವೆ ಮಾಡಿ. ಓ ಕಿವಿಗಳೇ, ಶ್ರೀ ಅಚ್ಯುತನನ್ನು ಕುರಿತ ವಿಷಯಗಳನ್ನು ಕೇಳಿ. ಓ ಕಣ್ಣುಗಳೇ, ಶ್ರೀ ಕೃಷ್ಣನನ್ನು ನೋಡು. ಓ ಕಾಲುಗಳೇ, ಶ್ರೀ ಹರಿಯ ಮಂದಿರಕ್ಕೆ ಹೋಗಿ. ಓ ಮೂಗೇ, ಶ್ರೀ ಮುಕುಂದನ
ಚರಣಗಳಲ್ಲಿನ ತುಳಸಿ ಎಲೆಯ ಸುವಾಸನೆಯನ್ನು ಆಸ್ವಾದಿಸು. ಓ ತಲೆಯೇ, ಶ್ರೀ ಅಧೋಕ್ಷಜನಿಗೆ ತಲೆಬಾಗು.
– ಮುಕುಂದಮಾಲ, ಸ್ತೋತ್ರ 20
* * * *
ಓ ನನ್ನ ಪ್ರಭು, ನಂದ ಮಹಾರಾಜನ ಪುತ್ರನಾದ ಶ್ರೀ ಕೃಷ್ಣ, ನಾನು ನಿನ್ನ ಶಾಶ್ವತ ದಾಸ. ಆದರೆ ನನ್ನದೇ ಆದ ಕಾಮ್ಯಕರ್ಮಗಳ ಕಾರಣದಿಂದಾಗಿ ಈ ಭಯಂಕರವಾದ ಅಜ್ಞಾನ ಸಾಗರದಲ್ಲಿ ಬಿದ್ದಿದ್ದೇನೆ. ಈಗ ದಯವಿಟ್ಟು ನನ್ನ ಬಗೆಗೆ ಅವ್ಯಾಜವಾದ ಕರುಣೆಯನ್ನು ತೋರು. ನಿನ್ನ ಪಾದ ಕಮಲದ ಧೂಳಿನ ಒಂದು ಕಣವೆಂದು ನನ್ನನ್ನು ಪರಿಗಣಿಸು.
– ಚೈತನ್ಯ ಚರಿತಾಮೃತ ಅಂತ್ಯಲೀಲಾ 20.32
* * * *






Leave a Reply