ಓ ಮನ್ಮಥನೇ, ನನ್ನ ಮನದಿಂದ ಹೊರಟುಹೋಗು. ಅದು ಈಗ ಶ್ರೀ ಮುಕುಂದನ ಚರಣ ಕಮಲದ ನಿವಾಸವಾಗಿದೆ. ನೀನು ಈಗಾಗಲೇ ಶಿವನ ಜ್ವಲಿಸುವ ನೋಟದಿಂದ ಭಸ್ಮವಾಗಿರುವೆ. ಆದುದರಿಂದ ನೀನು ಏಕೆ ಶ್ರೀ ಮುರಾರಿಯ ಚಕ್ರದ ಶಕ್ತಿಯನ್ನು ಮರೆತಿರುವೆ?
– ಮುಕುಂದಮಾಲಾ, ಸ್ತೋತ್ರ 22
* * * *
ಆದಿದೇವನಾದ ಗೋವಿಂದನನ್ನು ನಾನು ಪೂಜಿಸುವೆ. ಅವನು ಶ್ಯಾಮಸುಂದರ. ಗ್ರಹಿಸಲಾರದಷ್ಟು ಅಸಂಖ್ಯ ವೈಶಿಷ್ಟ್ಯಗಳನ್ನು ಉಳ್ಳ ಸ್ವಯಂ ಕೃಷ್ಣ. ಶುದ್ಧ ಭಕ್ತರು ಪ್ರೀತಿಯ ಮುಲಾಮು ಹಚ್ಚಿರುವ ಭಕ್ತಿಯ ಕಣ್ಣುಗಳಿಂದ ತಮ್ಮ ಹೃದಯಗಳಲ್ಲಿ ಅವನನ್ನು ನೋಡುವರು.
– ಬ್ರಹ್ಮಸಂಹಿತೆ
* * * *
ಗುಡುಗು ಮತ್ತು ಮಿಂಚಿನೊಂದಿಗೆ ಆಗಮಿಸುವ ಮೋಡಗಳು ಆಕಾಶದ ಮೇಲೆಲ್ಲ ಜೀವನದ ಭರವಸೆಯ ಚಿತ್ರವನ್ನು ನೀಡುತ್ತವೆ. ಕಡು ನೀಲಿ ಮೋಡಗಳಿಂದ ಆವರಿಸಿರುವ ಆಗಸವು ಕೃತಕವಾಗಿ ಉಡುಗೆ ತೊಟ್ಟಂತೆ ಕಾಣುತ್ತಿದೆ. ಮೋಡದೊಳಗಿನ ಗುಡುಗು ಮತ್ತು ಮಿಂಚು ಹೊಸ ಬದುಕಿನ ಆಸೆಯ ಚಿಹ್ನೆಗಳಾಗಿವೆ.
– ಭಾಗವತ ಜ್ಯೋತಿ, ಶ್ಲೋಕ 1
* * * *
ಹೇ ಪರಮ ಶಕ್ತನಾದ ಭಗವಂತನೇ, ಭೂಮಿಯ ಮೇಲೆ, ಸ್ವರ್ಗದಲ್ಲಿ, ನರಕದಲ್ಲಿ ಹಾಗೂ ವಾಸ್ತವವಾಗಿ ಸಕಲ ದಿಕ್ಕುಗಳಲ್ಲಿಯೂ ನೀನು ಪ್ರಕಟಿಸುವ ನಿನ್ನ ಅನಂತಾನಂತ ಶಕ್ತಿಯನ್ನು ನನಗೆ ವಿವರಿಸಿ ಹೇಳು. ನಾನು ಪವಿತ್ರಸ್ಥಳಗಳ ಆಶ್ರಯತಾಣವಾದ ನಿನ್ನ ಪಾದಕಮಲಗಳಿಗೆ ವಿನೀತನಾಗಿ ನಮಸ್ಕರಿಸುತ್ತೇನೆ.
– ಶ್ರೀಮದ್ ಭಾಗವತ 11.16.5
* * * *






Leave a Reply