ವೇದವಾಕ್ಯ

ಶುದ್ಧ ಭಕ್ತಿಸೇವೆಯಲ್ಲಿ ನಿರತನಾದವನು ತನ್ನ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ, ಇಂದ್ರಿಯ ಸುಖವನ್ನು ಅಪೇಕ್ಷಿಸುವುದಿಲ್ಲ, ಅಥವಾ ಯಾವುದೇ ನಷ್ಟಕ್ಕೆ ಕೊರಗುವುದಿಲ್ಲ, ಅಥವಾ ಯಾವುದನ್ನೂ ದ್ವೇಷಿಸುವುದಿಲ್ಲ, ಅಥವಾ ಯಾವುದನ್ನೂ ಆನಂದಿಸುವುದಿಲ್ಲ, ಅಥವಾ ಲೌಕಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ಸಾಹವನ್ನು ತೋರುವುದಿಲ್ಲ.

– ನಾರದ ಭಕ್ತಿ ಸೂತ್ರ, ಸೂತ್ರ 5

* * * *

ನಾವು ಶಾಶ್ವತ ಜೀವನವನ್ನು ತಲಪಲು ಈ ಮಾನವ ದೇಹವು ಒಂದು ಉತ್ಕೃಷ್ಟವಾದ ವಾಹನವಾಗಿದೆ. ಲೌಕಿಕ ಅಸ್ತಿತ್ವವೆಂಬ ಅಜ್ಞಾನ ಸಾಗರವನ್ನು ದಾಟಲು ಅದು ಒಂದು ಅಪೂರ್ವವಾದ ಹಾಗೂ ಬಹಳ ಮಹತ್ತ್ವದ ದೋಣಿಯಾಗಿದೆ. ಈ ದೋಣಿಯಲ್ಲಿ ಗುರುವೆಂಬ ಪಳಗಿದ ಅಂಬಿಗನಿದ್ದಾನೆ. ದೇವರ ದಯೆಯಿಂದ ಅನುಕೂಲಕರ ಮಾರುತದಿಂದ ದೋಣಿಯು ಜಲಧಿಯನ್ನು ಹಾಯುತ್ತಿದೆ. ಈ ಎಲ್ಲ ಮಂಗಳಕರ ಅಂಶಗಳಿರುವಾಗ ಅಜ್ಞಾನ ಸಾಗರವನ್ನು ದಾಟುವ ಅವಕಾಶವನ್ನು ಯಾರು ತಾನೆ ತೆಗೆದುಕೊಳ್ಳುವುದಿಲ್ಲ? ಇಂತಹ ಉತ್ತಮ ಅವಕಾಶವನ್ನು ಅಲಕ್ಷಿಸುವವನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎಂದು ತಿಳಿದುಕೊಳ್ಳಬೇಕು.

 – ಆತ್ಮ ಸಾಕ್ಷಾತ್ಕಾರ ವಿಜ್ಞಾನ

* * * *

ಓ ಮಾಧವ, ಪುಣ್ಯದ ಪ್ರಮಾಣ ಬರಿದಾಗಿ ನಿನ್ನ ಚರಣ ಕಮಲಗಳಲ್ಲಿ ಕಿಂಚಿತ್ತೂ ಭಕ್ತಿಯಿಲ್ಲದ ಜನರ ಕಡೆಗೆ ನನ್ನ ದೃಷ್ಟಿಯೂ ಹರಿಯದಂತೆ ಮಾಡು. ನಿನ್ನ ಲೀಲೆಗಳ ಅಮೂಲ್ಯ ಕಥನವನ್ನು ಕೇಳುವುದರಿಂದ ನಾನು ಚಂಚಲನಾಗುವಂತೆ ಮತ್ತು ಇತರ ವಿಷಯಗಳಲ್ಲಿ ಆಸಕ್ತಿ ಹೊಂದುವಂತೆ ಮಾಡಬೇಡ. ಪ್ರಭುವೇ, ನಿನ್ನನ್ನು ಕುರಿತು ಚಿಂತಿಸುವುದರಿಂದ ದೂರ ಸರಿಯುವವರತ್ತ ನಾನು ಗಮನ ಹರಿಸುವುದು ಬೇಡ. ಮತ್ತು ಜನ್ಮದಿಂದ ಜನ್ಮಕ್ಕೆ ನಾನು ನಿನಗೆ ಯಾವುದಾದರೂ ಕೀಳು ರೀತಿಯಲ್ಲಿ ಸೇವೆ ಸಲ್ಲಿಸುವಂತೆ ಮಾಡು.

– ಮುಕುಂದ ಮಾಲಾ, ಸೂತ್ರ 24

* * * *

ಯಾರು ನನ್ನನ್ನು ಸಂದೇಹವಿಲ್ಲದೆ ದೇವೋತ್ತಮ ಪರಮ ಪುರುಷನೆಂದು ತಿಳಿಯುತ್ತಾನೋ ಅವನು ಎಲ್ಲವನ್ನೂ ತಿಳಿದವನು. ಆದ್ದರಿಂದ ಆತನು ಸಂಪೂರ್ಣ ಭಕ್ತಿ ಸೇವೆಯಲ್ಲಿ ನಿರತನಾಗುತ್ತಾನೆ.

– ಭಗವದ್ಗೀತೆ, 15.19

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi