ವೇದವಾಕ್ಯ

ಪ್ರಸ್ತುತ ಸಮಯದಲ್ಲಿ ಮಾನವ ಸಮಾಜವು ಅಜ್ಞಾನದ ಅಂಧಕಾರದಲ್ಲಿಲ್ಲ. ಸಮಸ್ತ ಜಗತ್ತಿನಾದ್ಯಂತ ಐಹಿಕ ಸೌಲಭ್ಯಗಳು, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅದು ಕ್ಷಿಪ್ರವಾದ ಪ್ರಗತಿಯನ್ನು ಸಾಧಿಸಿದೆ. ಆದರೆ ವ್ಯಾಪಕವಾದ ಸಮಾಜದಲ್ಲೆಲ್ಲೋ ಒಂದು ಕಿರಿಕಿರಿ ಇದೆ. ಆದ್ದರಿಂದ ಸಣ್ಣ ಸಣ್ಣ ಸಂಗತಿಗಳಿಗೂ ದೊಡ್ಡ ದೊಡ್ಡ ಜಗಳಗಳಾಗುತ್ತಿವೆ. ಮಾನವ ಸಮುದಾಯವು ಒಂದು ಸಾಮಾನ್ಯ ಕಾರಣವನ್ನಿಟ್ಟುಕೊಂಡು ಶಾಂತಿ, ಸ್ನೇಹ ಮತ್ತು ಸಮೃದ್ಧಿಯಲ್ಲಿ ಹೇಗೆ ಒಂದಾಗಬಹುದು ಎನ್ನುವುದಕ್ಕೆ ಒಂದು ಸುಳಿವಿನ ಆವಶ್ಯಕತೆಯಿದೆ. ಶ್ರೀಮದ್‌ ಭಾಗವತವು ಈ ಕೊರತೆಯನ್ನು ತುಂಬುತ್ತದೆ. ಏಕೆಂದರೆ ಅದು ಸಮಸ್ತ ಮಾನವ ಸಮುದಾಯದ ಪುನರ್‌ ಆಧ್ಯಾತ್ಮೀಕರಣಕ್ಕೆ ಒಂದು ಸಾಂಸ್ಕೃತಿಕ ನಿರೂಪಣೆಯಾಗಿದೆ.

ಶ್ರೀಮದ್‌ ಭಾಗವತಕ್ಕೆ ಪ್ರಸ್ತಾವನೆ,
ಶ್ರೀ ಶ್ರೀಮದ್‌ ಎ.ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ

* * * *

ಎಲ್ಲ ಯಾತ್ರಾಸ್ಥಳಗಳ ಪಾವಿತ್ರ್ಯದ ಆಕರವಾದ ಶ್ರೀಕೃಷ್ಣನ ಪಾದಕಮಲಗಳ ಧೂಳನ್ನು ಎಲ್ಲ ಮಹಾನ್‌ ದೇವತೆಗಳೂ ಆರಾಧಿಸುತ್ತಾರೆ. ಎಲ್ಲ  ಲೋಕಗಳ ಅಧಿದೇವತೆಗಳು
ಅವನ ಸೇವೆಯಲ್ಲಿ ನಿರತರಾಗಿದ್ದಾರೆ ಮತ್ತು ಕೃಷ್ಣನ ಪಾದ ಕಮಲಗಳ ಧೂಳನ್ನು ತಮ್ಮ ಕಿರೀಟಗಳಲ್ಲಿ ಧರಿಸುವುದೇ ಪರಮ ಭಾಗ್ಯ ಎಂದು ಅವರು ಪರಿಗಣಿಸುತ್ತಾರೆ. ಮಹಾನ್‌ ದೇವತೆಗಳಾದ ಬ್ರಹ್ಮ, ಶಿವ, ಅಷ್ಟೇಕೆ ಭಾಗ್ಯದೇವತೆ ಮತ್ತು ನಾನೂ ಕೂಡ ಅವನ ಆಧ್ಯಾತ್ಮಿಕ ಅಸ್ತಿತ್ತ್ವದ ಭಾಗಗಳಷ್ಟೇ, ಮತ್ತು ನಾವು ಕೂಡ ಜಾಗರೂಕತೆಯಿಂದ ಆ ಧೂಳಿಯನ್ನು ನಮ್ಮ ಶಿರದ ಮೇಲೆ ಧರಿಸುತ್ತೇವೆ…

ಬಲರಾಮ, ಶ್ರೀಮದ್‌ ಭಾಗವತ: 10.68.37

* * * *

ದೇವೋತ್ತಮ ಪರಮ ಪುರುಷನಾದ ಪ್ರಭುವನ್ನು ಕೇವಲ ಅರಿಯುವ ಮೂಲಕವೇ ಜನನ ಮತ್ತು ಮರಣದಿಂದ ವಿಮುಕ್ತಿಯನ್ನು ಪಡೆಯುವ ಪರಿಪೂರ್ಣ ಹಂತವನ್ನು ತಲಪಬಹುದು. ಈ ಪರಿಪೂರ್ಣತೆಯನ್ನು ಸಾಧಿಸಲು ಬೇರೆ ಯಾವ ಮಾರ್ಗವೂ ಇಲ್ಲ.

– ಶ್ವೇತಾಶ್ವತರ ಉಪನಿಷದ್‌: 3.8

* * * *

ಹರೇಕೃಷ್ಣ ಮಂತ್ರದ ಸಂಕೀರ್ತನೆಯನ್ನು ಮಾಡುವ ಮೂಲಕ ವ್ಯಕ್ತಿಯು ಐಹಿಕ ಅಸ್ತಿತ್ವದ ಪಾಪಪೂರಿತ ಸ್ಥಿತಿಯನ್ನು ನಾಶಪಡಿಸಬಹುದು, ಅಶುದ್ಧ ಹೃದಯವನ್ನು ಪರಿಶುದ್ಧಗೊಳಿಸಬಹುದು ಮತ್ತು ಎಲ್ಲ ಬಗೆಯ ಭಕ್ತಿ ಸೇವೆಗಳನ್ನು ಜಾಗೃತಗೊಳಿಸಬಹುದು.

– ಶ್ರೀ ಚೈತನ್ಯ ಮಹಾಪ್ರಭು,
ಶ್ರೀ ಚೈತನ್ಯ ಚರಿತಾಮೃತ, ಅಂತ್ಯಲೀಲಾ: 20.13

* * * *

ಪ್ರೀತಿ ಮತ್ತು ವಾತ್ಸಲ್ಯಗಳಲ್ಲಿ ಊರಿಟ್ಟ ಭಕ್ತಿಯೊಡನೆ ಯೋಗಿಯು ಪ್ರಭು ವಿಷ್ಣುವಿನ ನಗುವನ್ನು ಕುರಿತು ತನ್ನ ಹೃದಯಾಂತರಾಳದಲ್ಲಿ ಧ್ಯಾನ ಮಾಡಬೇಕು. ವಿಷ್ಣುವಿನ ನಗುವು ಎಷ್ಟು ಚಿತ್ತಾಕರ್ಷಕವೆಂದರೆ ಅದನ್ನು ಕುರಿತು ಸುಲಭವಾಗಿ ಧ್ಯಾನ ಮಾಡಬಹುದು. ಪರಮ ಪ್ರಭುವು ನಗುವಾಗ ಅವನ ಸಣ್ಣ ಹಲ್ಲುಗಳನ್ನು ನಾವು ನೋಡಬಹುದು. ಮಲ್ಲಿಗೆಯ ಮೊಗ್ಗುಗಳಂತಿರುವ ಅವು ಅವನ ತುಟಿಗಳ ಕಾಂತಿಯಿಂದಾಗಿ ಗುಲಾಬಿ ಬಣ್ಣದಲ್ಲಿರುವಂತೆ ತೋರುತ್ತವೆ. ಯೋಗಿಯು ಒಮ್ಮೆ ತನ್ನ ಮನಸ್ಸನ್ನು ಇದರಲ್ಲಿ ಮುಡಿಪಾಗಿಟ್ಟನೆಂದರೆ, ಬೇರೆ ಏನನ್ನೂ ನೋಡಲು ಬಯಸುವುದಿಲ್ಲ.

– ಕಪಿಲ, ಶ್ರೀಮದ್‌ ಭಾಗವತಮ್‌: 3.28-33

* * * *

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi