ಶ್ರೀ ವೇಂಕಟೇಶ ಸ್ತೋತ್ರಂ

ಕಮಲಾ-ಕುಚ-ಚೂಚುಕ-ಕುಂಕುಮತೋ

ನಿಯತಾರುಣಿತಾತುಲ ನೀಲತನೋ

ಕಮಲಾಯತ ಲೋಚನ ಲೋಕಪತೇ

ವಿಜಯೀಭವ ವೇಂಕಟ ಶೈಲಪತೇ (1)

ವೆಂಕಟಾಚಲಪತಿಯೇ, ಯಾರ ಅತುಲವಾದ ನೀಲವರ್ಣದ ದೇಹವು ಕಮಲಾ (ಶ್ರೀದೇವಿ) ಳ ಸ್ತನದ ತೊಟ್ಟಿನ ಕೇಸರಿಯಿಂದ ಶೋಭಿಸುವುದೊ, ಯಾರ ಕಣ್ಣುಗಳು ತಾವರೆಯ ದಳಗಳಂತೆ ವಿಶಾಲವಾಗಿವೆಯೊ, ಆ ಲೋಕನಾಥನಾದ ವೆಂಕಟಶೈಲಪತಿಗೆ ವಿಜಯವಾಗಲಿ.

ಸಚತುರ್ಮುಖ ಷಣ್ಮುಖ ಪಂಚಮುಖ

ಪ್ರಮುಖಾಖಿಲ ದೈವತ ಮೌಲಿಮಣೇ

ಶರಣಾಗತವತ್ಸಲ ಸಾರನಿಧೇ

ಪರಿಪಾಲಯ ಮಾಂ ವೃಷ ಶೈಲಪತೇ (2)

ಬ್ರಹ್ಮ, ಕುಮಾರಸ್ವಾಮಿ, ಮಹೇಶ್ವರರಂಥ ದೇವರುಗಳಲ್ಲೇ ಶಿರೋಮಣಿಯಂತಿರುವ, ಶರಣಾಗತರನ್ನು ಸದಾ ವಾತ್ಸಲ್ಯದಿಂದ ನೋಡುವ ವೃಷಶೈಲದೊಡೆಯನೇ, ನನ್ನನ್ನು ರಕ್ಷಿಸು.

ಅತಿವೇಲತಯಾ ತವ ದುರ್ವಿಷಹೈರ್‌

ಅನುವೇಲ ಕೃತೈರ್‌ ಅಪರಾಧ ಶತೈಃ

ಭರಿತಂ ತ್ವರಿತಂ ವೃಷ-ಶೈಲಪತೇ

ಪರಯಾ ಕೃಪಯಾ ಪರಿಪಾಹಿ ಹರೇ (3)

ವೃಷಶೈಲದೊಡೆಯನೇ, ಸದಾ ಅನೇಕ ಅಪರಾಧಗಳನ್ನು ಮಾಡಿರುವ ನನ್ನನ್ನು ನೀನು ಅತ್ಯಂತ ಕೃಪೆಯಿಟ್ಟು ಕಾಪಾಡು.

ಅಧಿವೇಂಕಟ ಶೈಲಮ್‌ ಉದಾರಮತೇರ್‌

ಜನತಾಭಿ ಮತಾಧಿಕ ದಾನರತಾತ್‌

ಪರದೇವತಯಾ ಗದಿತಾನ್‌ ನಿಗಮೈಃ

ಕಮಲಾದಯಿತಾನ್‌ ನ ಪರಂ ಕಲಯೇ (4)

ಕಮಲನಾಥನೂ ವೆಂಕಟಾಚಲದಲ್ಲಿ ನೆಲಸಿರುವನೂ, ಉದಾರ ಬುದ್ಧಿಯವನೂ, ಭಕ್ತರ ಆಸೆಗಿಂತ ಹೆಚ್ಚಿನದನ್ನು ದಾನ ಮಾಡುವವನೂ, ವೇದಗಳಲ್ಲಿ  ಪರಮ ದೇವೋತ್ತಮನೆಂದು ಸ್ತುತಿಸಲ್ಪಟ್ಟವನೂ ಆದ ವೆಂಕಟಾಚಲಪತಿಗಿಂತ ಬೇರಾರನ್ನೂ ನಾನು ಶ್ರೇಷ್ಠರೆಂದು ಭಾವಿಸುವುದಿಲ್ಲ.

ಕಲವೇಣು ರವಾವಶ ಗೋಪವಧೂ

ಶತಕೋಟಿ ವೃತಾತ್‌ ಸ್ಮರಕೋಟಿ ಸಮಾತ್‌

ಪ್ರತಿ ವಲ್ಲವಿಕಾಭಿಮತಾತ್‌ ಸುಖದಾತ್‌

ವಸುದೇವ ಸುತಾನ್‌ ನಪರಂ ಕಲಯೇ (5)

(ಕೃಷ್ಣನ) ಕೊಳಲಿನ ನಾದಕ್ಕೆ ವಶರಾಗಿ ಅಸಂಖ್ಯಾತ ಗೋಪಿಕಾಸೀಯರು ಕೋಟಿಮನ್ಮಥರಿಗೆ ಸಾಟಿಯಾದ ಕೃಷ್ಣನನ್ನು ಸುತ್ತುವರಿದಿದ್ದಾರೆ. ಪ್ರತಿ ಗೋಪಿಗೂ ಪ್ರಿಯನಾದ, ಅವಳಿಗೆ ಮುದವನ್ನು ಕೊಡುವ ಕೃಷ್ಣನನ್ನು ಬಿಟ್ಟು ಬೇರಾರನ್ನೂ ನಾನು ಅರಿಯಲಾರೆ.

ಅಭಿರಾಮ ಗುಣಾಕರ ದಾಶರಥೇ

ಜಗದೇಕ ಧನುರ್ಧರ ಧೀರಮತೇ

ರಘುನಾಯಕ ರಾಮ ರಮೇಶ ವಿಭೋ

ವರದೋ ಭವ ದೇವ ದಯಾ ಜಲಧೇ (6)

ಹೇ ರಾಮನೆ, ಮನಮೋಹಕ ಗುಣಗಳ ಆಕರನೆ, ಜಗತ್ತಿನ ಏಕೈಕ ಧನುರ್ಧಾರಿ, ೕರಮತಿಯೆ, ರಘುವಂಶ ಶ್ರೇಷ್ಠನೆ, ರಮೆಯ ಒಡೆಯನೆ, ಸರ್ವಾಂತರ್ಯ್ಮಿಯೆ, ದಯಾ ಸಾಗರನೆ, ನಮಗೆ ವರವನ್ನು ಕರುಣಿಸು.

ಅವನೀ-ತನಯಾ ಕಮನೀಯ ಕರಂ

ರಜನೀಕರ ಚಾರು ಮುಖಾಂಬು-ರುಹಂ,

ರಜನೀಚರ ರಾಜ ತಮೋ ಮಿಹಿರಮ್‌

ಮಹನೀಯಮ್‌ ಅಹಂ ರಘುರಾಮಮ್‌ ಅಯೇ (7)

ಯಾರ ಕೈಗಳಿಗಾಗಿ ಸೀತೆ ಹಂಬಲಿಸುತ್ತಾಳೋ ಯಾರ ಮುಖವು ಚಂದ್ರನಂತೆ ಆಕರ್ಷಕವಾಗಿದೆಯೋ, ಯಾರು ಸೂರ್ಯನಂತೆ ಕತ್ತಲನ್ನು (ರಾಕ್ಷಸರ ಒಡೆಯನಾದ ರಾವಣನನ್ನು) ಹೋಗಲಾಡಿಸುವನೋ, ಅಂತಹ ರಾಮನಿಗೆ ಶರಣಾಗುತ್ತೇನೆ.

ಸುಮುಖಂ ಸುಹೃದಂ ಸುಲಭಂ ಸುಖದಂ

ಸ್ವನುಜಂ ಚ ಸುಕಾಯಂ ಅಮೋಘಶರಂ

ಅಪಹಾಯ ರಘೂದ್ವಹಂ ಅನ್ಯಮ್‌ ಅಹಂ

ನ ಕಥಂಚನ ಕಂಚನ ಜಾತು ಭಜೇ (8)

ಸುಂದರನೂ, ಸುಹೃದನೂ, ಲಭ್ಯನೂ, ಸುಖವನ್ನು ನೀಡುವವನೂ, ಒಳ್ಳೆಯ ಸೋದರರನ್ನುಳ್ಳವನೂ, ವಿಲವಾಗದ ಬಾಣಗಳನ್ನುಳ್ಳವನೂ ರಘುವಂಶಕ್ಕೆ ಕೀರ್ತಿ ತಂದವನೂ ಆದ ರಾಮನನ್ನುಳಿದು ಬೇರೆ ಯಾರನ್ನೂ ನಾನು ಎಂದೂ ಪೂಜಿಸುವುದಿಲ್ಲ.

ವಿನಾ ವೇಂಕಟೇಶಂ ನ ನಾಥೋನ ನಾಥಃ

ಸದಾ ವೇಂಕಟೇಶಂ ಸ್ಮರಾಮಿ ಸ್ಮರಾಮಿ

ಹರೇ ವೇಂಕಟೇಶ ಪ್ರಸೀದ ಪ್ರಸೀದ

ಪ್ರಿಯಂ ವೇಂಕಟೇಶ ಪ್ರಯಚ್ಛ ಪ್ರಯಚ್ಛ  (9)

ವೆಂಕಟೇಶನ ಹೊರತು ಬೇರೆ ಯಾರೂ ರಕ್ಷಕರಿಲ್ಲ. ಸದಾ ನಾನು ವೆಂಕಟೇಶನನ್ನೇ ಸ್ಮರಿಸುತ್ತೇನೆ. ಹರಿ, ವೆಂಕಟೇಶ, ಪ್ರಸನ್ನನಾಗು; ನಮಗೆ ವರಗಳನ್ನು ಕರುಣಿಸು.

ಅಹಂ ದೂರತಸ್ತೇ ಪದಾಂಭೋಜ-ಯುಗ್ಮ

ಪ್ರಣಾಮೇಚ್ಛಯಾಗತ್ಯ ಸೇವಾಂ ಕರೋಮಿ

ಸಕೃತ್‌ ಸೇವಯಾ ನಿತ್ಯ ಸೇವಾಲಂ ತ್ವಂ

ಪ್ರಯಚ್ಛ ಪ್ರಯಚ್ಛ ಪ್ರಭೋ ವೇಂಕಟೇಶ (10)

ದೇವನೇ, ದೂರದಿಂದ ನಿನ್ನ ಪಾದಕಮಲಗಳಿಗೆ ಪ್ರಣಾಮ ಮಾಡಲು ಬಂದಿದ್ದೇನೆ. ನಿನ್ನ ಸೇವೆ ಮಾಡುತ್ತೇನೆ. ನಿತ್ಯಸೇವೆಗೆ ನೀನು ಕೊಡುವ ಲವನ್ನೇ ನನ್ನ ಈ ಸಾಂದರ್ಭಿಕ ಸೇವೆಗೆ ಕೊಡು.

ಅಜ್ಞಾನಿನಾ ಮಯಾ ದೋಷಾನ್‌

ಅಶೇಷಾನ್‌ ವಿಹಿತಾನ್‌ ಹರೇ

ಕ್ಷಮಸ್ವ  ತ್ವಂ  ಕ್ಷಮಸ್ವ  ತ್ವಂ

ಶೇಷ ಶೈಲ ಶಿಖಾಮಣೇ (11)

ಹೇ ಹರಿ, ಶೇಷ ಶೈಲದ ಶಿರೋಮಣಿಯೆ, ಅಜ್ಞಾನದಲ್ಲಿ ನಾನು ಮಾಡಿದ ತಪ್ಪುಗಳನ್ನು ಕ್ಷಮಿಸು.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi