– ಆಂಗ್ಲಮೂಲ: ಮಥುರೇಶದಾಸ, ಅನುವಾದ: ಚಿರಂಜೀವಿ
ಹೌದು, ಅನೇಕರು ನಂಬಿರುವಂತೆ, ವಿಶ್ವವೇ ದೇವರು. ಅದಕ್ಕೆ ಇದಕ್ಕಿಂತಲೂ ಅವನಿಗೆ ಹೆಚ್ಚಿನದೊಂದಿದೆ.
ದೇವರನ್ನು “ಶ್ರೇಷ್ಠ” ಎಂದು ಬಣ್ಣಿಸುವಾಗ ಕೆಲವೊಮ್ಮೆ ಜನ ಅವನನ್ನು (ಅಥವಾ, ಅವಳನ್ನು, ಅದನ್ನು) ಆಕಾಶ, ವಾಯು ಅಥವಾ ಪ್ರದೇಶಗಳ ಹಾಗೆ ಒಂದು ಬಹುವ್ಯಾಪಕ ನೈಸರ್ಗಿಕ ಅತಿಶಯ ಎಂದು ಆಲೋಚಿಸಿಕೊಳ್ಳುತ್ತಾರೆ.

ಪ್ರಾಚೀನರು ಕೂಡ, ಪ್ರಾಕೃತಿಕ ಕೌತುಗಳಾದ, ಒಂದು ಪರ್ವತ, ಒಂದು ಜಲಪಾತ, ಒಂದು ಮಿಂಚು ಅಥವಾ ಒಂದು ಭೂಕಂಪ ಮೊದಲಾದವನ್ನು ಅದ್ಭುತಗಳೆಂಬಂತೆ ನೋಡಿದ್ದಲ್ಲದೆ ಆರಾಧನೆಯನ್ನು ಮಾಡುತ್ತಿದ್ದರು ಮತ್ತು “ಇದೇ ಭಾವನೆಗಳೆ ಇಂದಿನ ನಾಗರಿಕ ಸಮಾಜದಲ್ಲೂ ಉಳಿದುಕೊಂಡು ಬಂದಿದೆ. “ಶ್ರೇಷ್ಠ” ಎಂಬುದು ಹುಡುಕಾಟ ಅಂತಿಮವಾಗಿ ನಮ್ಮನ್ನು, ದೇವರೇ ಸರ್ವಸ್ಯ ಅಥವಾ ದೇವರೇ ವಿಶ್ವ ಎನ್ನುವ ಪರಿಪೂರ್ಣ ಮತ್ತು ಸರ್ವಸಂಪನ್ನ ಮೂಲತತ್ತ್ವ ಅಸ್ತಿತ್ವದ ಚಿಂತನೆಯತ್ತ ಕೊಂಡೊಯ್ಯಬಹುದು.
ವೈದಿಕ ಪುರಣಾಗಳು ದೇವರ ಅನೇಕ ರೂಪಗಳು ಮತ್ತು ಭಾವರೂಪಗಳ ಬಗ್ಗೆ ವೈದಿಕ ವಿದ್ವಾಂಸರು ವಿರಾಟರೂಪ ಅಥವಾ ವಿಶ್ವರೂಪ ಎಂದು ಕರೆದಿರುವ, ದೇವರೇ ವಿಶ್ವ ಎನ್ನುವುದನ್ನೂ ಸೇರಿಸಿ, ವಿವರಿಸುತ್ತವೆ. ಸಾರ್ವಜನಿಕ ರೂಪವೆನ್ನುವುದು ದೇವರ ಐಹಿಕ ಕಲ್ಪನೆ; ಅದರಲ್ಲಿ ಅದು ಐಹಿಕ ಘಟಕಾಂಶಗಳಿಂದ ಸಂಯೋಜನೆಗೊಂಡಿದೆ.
ಆದ್ದರಿಂದ, ಹೀಗಾಗಿ, ಅದು ಭೌತವಸ್ತುವನ್ನು ಬಿಟ್ಟು ಬೇರೇನೂ ಅಸ್ತಿತ್ವದಲ್ಲಿಲ್ಲ ಎಂದು ನಂಬುವವರು ಮತ್ತು ಸಾಂಪ್ರಾದಾಯಿಕವಾಗಿ ಅವನನ್ನು ವಿವಿಧ ಅವತಾರಗಳಲ್ಲಿ ಪೂಜಿಸುವ ರೂಪಗಳನ್ನು ನಿರಾಕರಿಸುವ ಪ್ರವೃತ್ತಿ ಇರುವವರು ಎನ್ನುವ ಐಹಿಕ ಭೋಗಾಸಕ್ತರಿಂದ ಮಾತ್ರ ಸೆಳೆದುಕೊಳ್ಳುವುದು ಸಾಧ್ಯ.
ವಿಶ್ವವೇ ದೇವರು ಎಂದು ಹೇಳುವುದು ಬರೀ ಅರ್ಧಸತ್ಯ ಮಾತ್ರ, ಏಕೆಂದರೆ ಐಹಿಕ ಸ್ವಭಾವ ಎನ್ನುವುದು ದೇವರದೊಂದು ಶಕ್ತಿಯೇ ಹೊರತು, ಅದೇ ಅವನಲ್ಲ.
ದೇವರು ತನ್ನ ಶಕ್ತಿಗಳಂತೆಯೂ ಇದ್ದಾನೆ ಮತ್ತು ಭಿನ್ನವಾಗಿಯೂ ಇದ್ದಾನೆ ಸೂರ್ಯನಿಗಿಂತಲೂ ಬಿಸಿಲು ಬೇರೆ ಇದ್ದಂತೆ ಪರಮಸತ್ಯ ದೇವರು, ವೈದಿಕ ಮೂಲಗಳ ಪ್ರಕಾರ, ಯಾರ ಐಹಿಕ ಚೈತನ್ಯವನ್ನು ನಾವು ಸಾರ್ವಲೌಕಿಕ ರೂಪದಲ್ಲಿ ಅವಲೋಕಿಸುತ್ತಿದ್ದೇವೆಯೋ ಆ ದೇವೋತ್ತಮ ಪುರುಷ ಶ್ರೀಕೃಷ್ಣ. ಬ್ರಹ್ಮಸಂಹಿತೆ ಹೇಳುತ್ತದೆ: “ಪರಮ ನಿಯಂತ್ರಕನೆಂದರೆ ಶ್ರೀಕೃಷ್ಣ. ಅವನಿಗೊಂದು ಅನಂತ, ಆನಂದ, ಚಿನ್ಮಯ ಶರೀರವಿದೆ. ಅವನೇ ಸರ್ವಸ್ವದ ಮೂಲ. ಅವನಿಗೊಂದು ಮೂಲವಿಲ್ಲ. ಅವನೇ ಕಾರಣಗಳ ಕಾರಣನು.”
ಇಲ್ಲಿ ತೊಂದರೆ ಏನೆಂದರೆ, ಎಲ್ಲ ರೀತಿಯ ಪ್ರಾಮಾಣಿಕತೆಯಿಂದ “ಶ್ರೇಷ್ಠ”ನನ್ನು ಹುಡುಕುವ ಕೆಲಸವನ್ನು ಕೈಗೊಂಡವರು ಮತ್ತು ದೇವರೇ ವಿಶ್ವ ಎನ್ನುವ ಮಾನಸಿಕ ನಿರ್ಧಾರಕ್ಕೆ ತಲಪಿದವರೆಲ್ಲರೂ ಅನಿರ್ವಾಯವಾಗಿ ತಾವು ನಡೆದ ದಾರಿಯಲ್ಲಿ, ವ್ಯಕ್ತಿತ್ವ ಎನ್ನುವ ಚಿಂತನೆಗಳನ್ನು ಹಿಂದೆಯೇ ಬಿಟ್ಟಿದ್ದಾರೆ. ವ್ಯಕ್ತಿಗಳು, ತಮ್ಮ ಅನುಭವದಲ್ಲಿ ಅಸಮಗ್ರರು, ಅಪೂರ್ಣರು ಮತ್ತು ಪರಿಮಿತರು. ಆದ್ದರಿಂದ, ಅನಂತನಾದ ದೇವರು, ವ್ಯಕ್ತಿಸ್ವರೂಪವಿಲ್ಲದವನಾಗಿರಬೇಕು.
ವಿಶ್ವದ ಆಕೃತಿ ಒಂದು ರೀತಿ ವ್ಯಕ್ತಿ ಸ್ವರೂಪವಿಲ್ಲದ ಚೈತನ್ಯದಿಂದಲೇ ರೂಪುಗೊಂಡಿದ್ದರೂ, ವೈದಿಕ ವಿಧಾಯಕ ಶಕ್ತಿಗಳು, ಸ್ವತಃ ದೇವರೇ ಅಂತಿಮವಾಗಿ ವ್ಯಕ್ತಿ ಸ್ವರೂಪವಿಲ್ಲದವನು ಎನ್ನುವ ಅನಿಸಿಕೆಯನ್ನು ಸರಿಪಡಿಸಲು ಬಯಸುತ್ತಾರೆ. ದೇವರು ಒಬ್ಬ ವ್ಯಕ್ತಿ, ಆದರೆ, ನಮ್ಮ ಹಾಗೊಬ್ಬ ಪರಿಮಿತ ವ್ಯಕ್ತಿಯಲ್ಲ ಒಂದು ಒತ್ತಿ ಹೇಳುತ್ತಾರೆ.

ಅವನು ಪರಿಪೂರ್ಣ, ಸಮಗ್ರ ಮತ್ತು ಅಪರಿಮಿತ, ಮತ್ತು ಪರಿಮಿತ ವ್ಯಕ್ತಿಗಳಾದ ನಾವು ನಮ್ಮ ಗಮನವನ್ನು ಮತ್ತು ಸೇವೆಯನ್ನು ಅವನತ್ತ ಪುನರ್ನಿರ್ದೇಶಿಸಿದಾಗ, ನಾವು ಅವನ ವ್ಯಕ್ತಿಸ್ವರೂಪವಿಲ್ಲದಿರುವಿಕೆಯ ಐಹಿಕ ಶಕ್ತಿಗಿಂತಲೂ ಮೇಲೇರುತ್ತೇವೆ, ಮತ್ತು ಅವನ ಪರಿವಾರದ ಭಾಗಗಳಾಗಿ ಸಂಪೂರ್ಣತೆಯನ್ನು ಪಡೆದುಕೊಳ್ಳುತ್ತೇವೆ. ಶ್ರೀಕೃಷ್ಣ ಸಾರುತ್ತಾನೆ: “ಐಹಿಕ ರೀತಿಯ ಮೂರು ಬಗೆಗಳನ್ನು ಉಳ್ಳಂತಹ ನನ್ನ ಈ ದೈವಿಕ ಚೈತನ್ಯವನ್ನು ಗೆಲ್ಲುವುದು ಬಹಳ ಕಷ್ಟವಾದದ್ದು. ಆದರೆ, ನನಗೆ ಶರಣಾಗತರಾದವರು ಇದಕ್ಕೂ ಮುಂದೆ ದಾಟಬಹುದು.”
ವ್ಯಕ್ತಿತ್ವದ ಆಲೋಚನೆಯ ಕಡೆಗೆ ಪ್ರಾಮಾಣಿಕ ಅನ್ವೇಷಕನನ್ನು ಮತ್ತೆ ರೂಢಿಗೆ ತರಲು, ವೈದಿಕ ಸಾಹಿತ್ಯ ಬಹುತೇಕ ಕಲ್ಪನಾ ರೀತಿಯಲ್ಲಿಯೆ ವಿಶ್ವದ ತುಲನೆಯನ್ನು ದೇವರ ಸ್ವಾಂಶ ಶರೀರದೊಂದಿದೆ ಮಾಡುತ್ತದೆ. ಇಲ್ಲಿ ಕೆಳಗೆ, ಶ್ರೀಮದ್ಭಗವದ್ಗೀತೆಯ ಹತ್ತನೆಯ ಅಧ್ಯಾಯದ ಪ್ರಾರ್ಥನೆಯೊಂದರಲ್ಲಿ, ವಿಶ್ವರೂಪದ ಅನೇಕ ವರ್ಣನೆಗಳಲ್ಲಿನ ಒಂದು ರೀತಿಯನ್ನು ಕಾಣಬಹುದು;
ನನ್ನ ಪ್ರೀತಿಯ ಪ್ರಭುವೆ, ಅಗ್ನಿ ನಿನ್ನ ಬಾಯಿ, ಭೂಮಿ ನಿನ್ನ ಪಾದಗಳು, ಸೂರ್ಯ ನಿನ್ನ ಕಣ್ಣುಗಳು, ಆಕಾಶ ನಿನ್ನ ನಾಭಿ, ಮತ್ತು ದಿಕ್ಕುಗಳು ನಿನ್ನ ಕಿವಿಗಳು, ಎಲ್ಲ ಪ್ರದೇಶಗಳು ನಿನ್ನ ತಲೆ, ದೇವತೆಗಳೇ ನಿನ್ನ ಕೈಗಳು, ಸಾಗರ ಸಮುದ್ರಗಳು ನಿನ್ನ ಹೊಟ್ಟೆ, ಮತ್ತು ವಾಯು ಮರುತಗಳು ನಿನ್ನ ಶಕ್ತಿ ಮತ್ತು ಸಾಮರ್ಥ್ಯ. ಎಲ್ಲ ಗಿಡಿ ಮರ ಪೊದೆಗಳು ನಿನ್ನ ಶರೀರದ ಕೇಶರಾಶಿ, ಮೋಡಗಳು ನಿನ್ನ ತಲೆಗೂದಲು, ಗಿರಿ ಪರ್ವತಗಳು ನಿನ್ನ ಅಸ್ಥಿಗಳು, ಮತ್ತು ಉಗುರುಗಳು, ಹಗಲು ರಾತ್ರಿಗಳು ನಿನ್ನ ಕಣ್ಣು ರೆಪ್ಪೆಯ ಮಿಟುಕಿಸುವಿಕೆ, ಮತ್ತು ಮಳೆ ನಿನ್ನ ರೇತಸ್ಸು.
ಮತ್ತೆ, ಭಾಗವತ ಸ್ಕಂಧದಲ್ಲಿ:
ಅವನ ದೇಹದ ಮೇಲಿನ ಕೇಶರಾಶಿ ಎಲ್ಲ ಪೈರು ಪಚ್ಚೆಗಳ ಸೃಷ್ಟಿಗೆ ಕಾರಣ… ಅವನ ತಲೆ ಮತ್ತು ಮುಖದ ಮೇಲಿನ ಕೂದಲು ಮೋಡಗಳ ಅಣೆಕಟ್ಟುಗಳು. ಅವನ ಉಗುರುಗಳು ವಿದ್ಯುತ್, ಶಿಲೆಗಳು ಮತ್ತು ಕಬ್ಬಿಣದ ಅದಿರಿನ ಉತ್ಪಾದನಾ ಕ್ಷೇತ್ರಗಳು. ಪ್ರಭುವಿನ ಬೆನ್ನು ಭಾಗ ಎಲ್ಲ ರೀತಿಯ ಆಶಾ ಭಂಗಗಳು, ಮೌಢ್ಯ ಮತ್ತು ದುರಾಚಾರಗಳ ತಾಣ. ಅವನ ನರನಾಡಿಗಳಿಂದ ಮಹಾನದಿಗಳು ಮತ್ತು ಸರೋವರಗಳು ಹರಿಯುತ್ತವೆ, ಮತ್ತು ಅಸ್ಥಿಗಳಲ್ಲಿ ಪರ್ವತಗಳು ಸೇರಿಹೋಗಿವೆ.
ಬಹುಶಃ ಭಗವದ್ಗೀತೆಯಲ್ಲಿ ವಿಶ್ವರೂಪವನ್ನು ಕುರಿತಾದ ಅತ್ಯುತ್ತಮ, ಸುಪರಿಚಿತ ವಿವರಣೆ ಇದೆ. ಆದರೆ ಗೀತೆಯಲ್ಲಿ ವಿಶ್ವವೆನ್ನುವುದು ಬರೀ ಸುಂದರ ಕಾವ್ಯನೋಟವಾಗಿ ಮಾತ್ರವಲ್ಲ, ಒಂದು ಭಯಂಕರ, ಸರ್ವಭಕ್ಷಕ, ಅನೇಕ ಬಾಯಿಗಳ ರಾಕ್ಷಸ ರೂಪವಾಗಿಯೂ ದರ್ಶನ ನೀಡುತ್ತದೆ. ಇಂತಹ ಭೀಷಣ ಅರಿಮಾನುಷ ಆಕೃತಿಯ ಮುಂದೆ ನಡುಗುತ್ತ ನಿಂತ ಅರ್ಜುನ, ಭಯಭಕ್ತಿಗಳಿಂದ ಪ್ರಾರ್ಥನೆಗಳನ್ನು ಸಲ್ಲಿಸುತ್ತಾನೆ. ಅದರ ಕೆಲವು ಭಾಗಗಳು:
ಓ ವಿಶ್ವದ ಪ್ರಭುವೇ, ಓ ವಿಶ್ವರೂಪವೇ, ಎಲ್ಲೆಲ್ಲೂ ಅಂಕೆಯಿಲ್ಲದೆ ಹರಡಿಕೊಂಡಿರುವ ನಿನ್ನ ಶರೀರದಲ್ಲಿ ಅನೇಕಾನೇಕ ಕೈಗಳನ್ನು ಹೊಟ್ಟೆಗಳನ್ನು ಬಾಯಿಗಳನ್ನು ಮತ್ತು ಕಣ್ಣುಗಳನ್ನು ನಾನು ಕಾಣುತ್ತಿದ್ದೇನೆ. ಅಂತ್ಯವನ್ನು ನಡುವನ್ನು ಮೊದಲನ್ನು ಕಾಣುತ್ತಿಲ್ಲ.

ನಿನಗೆ ಅಸಂಖ್ಯಾತ ಹಸ್ತಗಳಿವೆ, ಮತ್ತು ಚಂದ್ರ ಮತ್ತು ಸೂರ್ಯ ನಿನ್ನ ಕಣ್ಣುಗಳಾಗಿವೆ. ನಿನ್ನದೇ ಆದ ದೇದೀಪ್ಯಮಾನವಾದ ಪ್ರಜ್ವಲತೆಯಿಂದ ಇಡೀ ವಿಶ್ವವನ್ನು ಸುಡುವಂತಿರುವ ಬೆಂಕಿಯ ಉರಿ ನಿನ್ನ ಬಾಯಿಯಿಂದ ಹೊರಹೊಮ್ಮುತ್ತಿರುವುದುನ್ನು ನೋಡುತ್ತೇನೆ.
ಓ ಪ್ರಭುಗಳ ಪ್ರಭುವೇ, ಓ ವಿಶ್ವದ ರಕ್ಷಕನೇ, ದಯವಿಟ್ಟು ನನ್ನ ಮೇಲೆ ಕೃಪೆ ತೋರು. ನಿನ್ನ ಈ ಧಗಧಗಿಸುತ್ತಿರುವ ಮಾರಣಾಂತಿಕ ಮುಖಗಳನ್ನು ಮತ್ತು ಘನಘೋರ ಹಲ್ಲುಗಳನ್ನು ನೋಡುತ್ತ ನನ್ನ ಸಮತೋಲನವನ್ನು ನನ್ನಿಂದ ಉಳಿಸಿಕೊಳ್ಳಲಾಗುತ್ತಿಲ್ಲ.
ಪತಂಗಗಳು ಉರಿ ಬೆಂಕಿಯತ್ತ ನಾಶವಾಗಲೆಂದೇ ಧಾವಿಸುವ ಹಾಗೆ, ಅತಿ ವೇಗದಿಂದ ಜನಗಳು ನಿನ್ನ ಬಾಯಿಗಳ ಬಳಿಗೆ ನಗ್ಗುತ್ತಿರುವ ಹಾಗೆ ನಾನು ನೋಡುತ್ತಿದ್ದೇನೆ.
ಗೀತೆಯ ವಿಶ್ವರೂಪದ ವರ್ಣನೆ ಎಷ್ಟು ಕಣ್ಣಿಗೆ ಕಟ್ಟುವಂತಹದು ಮತ್ತು ಅರ್ಜುನನ ಭಯ ಎಷ್ಟು ಸುಸ್ಪಷ್ಟ ಎಂದರೆ, ವಿಶ್ವರೂಪದ ಪ್ರತಿಪಾದನೆ ಕಾಲ್ಪನಿಕವಾದದ್ದು ಎನ್ನುವ ಮಾತು ಕೌತುಕವನ್ನುಂಟು ಮಾಡುವಂತೆ ಕಾಣಿಸುತ್ತದೆ. ಆ ಅತಿ ಮಾನುಷ ಅಕೃತಿ ಅರ್ಜುನನನ್ನು ಹೆದರಿಸಿದ್ದಲ್ಲದೆ ಅವನೊಂದಿಗೆ ಮಾತೂ ಆಡುತ್ತದೆ.
ಕುರುಕ್ಷೇತ್ರದಲ್ಲಿ, ಗೀತೋಪದೇಶವಾದ ತಾಣದಲ್ಲಿ, ಶ್ರೀಕೃಷ್ಣ ಸ್ವತಃ ಉಪಸ್ಥಿತನಿದ್ದ ಮತ್ತು ಅವನು ಪ್ರತ್ಯಕ್ಷವಾಗಿ ತನ್ನ ವಿಶ್ವರೂಪವನ್ನು ದರ್ಶನ ಮಾಡಿಸಿದ. ಸರ್ವಸಾಮಾನ್ಯವಾಗಿ, ಶ್ರೀಕೃಷ್ಣ ಸ್ವತಃ ವಿಶ್ವ ರೂಪದಲ್ಲಿ ಇರಲಿಲ್ಲವೆಂದು ನಾವು ಹೇಳಬಹುದು, ಮತ್ತು ಅದರ ಮನುಷ್ಯತ್ವಾರೋಷಣ, ಐಹಿಕ ಭೋಗಾಸಕ್ತರನ್ನು ದೈವ ಸಾಕ್ಷಾತ್ಕಾರದ ಒಂದು ದಿವ್ಯ ಮಜಲಿಗೆ ಕೊಂಡೊಯ್ಯುವುದೊಂದು ಪ್ರಯತ್ನ ಎನ್ನಬಹುದು. ಶ್ರೀಮದ್ಭಾಗವತ (1.3.10) ಇದನ್ನು ಸ್ಥಿರೀಕರಿಸುತ್ತದೆ:
ವಿಶ್ವರೂಪದ ಪರಿಕಲ್ಪನೆ ಕಾಲ್ಪನಿಕವಾದದ್ದು. ಸಾಮಾನ್ಯಮಟ್ಟದ ಬುದ್ಧಿಜೀವಿಗಳನ್ನು ಪ್ರಭುವಿಗೊಂದು ರೂಪವಿದೆ ಎನ್ನುವ ಆಲೋಚನೆಯತ್ತ ಕೊಂಡೊಯ್ಯಲು ಇದು ಸಹಾಯವಾಗುತ್ತದೆ.
ಶ್ರೀಕೃಷ್ಣನ ಮೂಲ ರೂಪ, ಸಚ್ಚಿದಾನಂದ ಆಧ್ಯಾತ್ಮಿಕ ಶರೀರ, ಮತ್ತು ಅವನ ದೇವೋತ್ತಮ ವ್ಯಕ್ತಿತ್ವ ಎನ್ನುವುದು ಅವನ ದಿವ್ಯ ಶರೀರಕ್ಕೆ ಸಮವಾದದ್ದು.

ಆದರೆ, ಕುರುಕ್ಷೇತ್ರದಲ್ಲಿ ಸಾಧಾರಣವಾಗಿ ಹೇಳುವುದಾದರೆ ನಿಜವಾದದ್ದು ಎಂಬಂತೆ ಕಾಣಿಸುತ್ತಿದ್ದ ವಿಶ್ವರೂಪದಲ್ಲಿ ಶ್ರೀಕೃಷ್ಣ ಕಣ್ಣೆದುರಿಗಿದ್ದಾಗ, ಅದರೆಲ್ಲ ರೌದ್ರತೆಯಿಂದ ದಿಗ್ಭ್ರಮೆಗೊಂಡ ಮತ್ತು ಭೀತಿಗೊಂಡ ಅರ್ಜುನ ಪ್ರಶ್ನಿಸುತ್ತಾನೆ.
ಓ ಪ್ರಭುಗಳ ಪ್ರಭುವೇ, ಇಂತಹದೊಂದು ರೌದ್ರರೂಪಿನವನೇ, ದಯವಿಟ್ಟು ನೀನು ಯಾರೆಂದು ಹೇಳು… ನಿನ್ನ ಬಗ್ಗೆ ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ, ಏಕೆಂದರೆ ನಿನ್ನ ಉದ್ದೇಶ ಏನೆಂದು ನನಗೆ ಗೊತ್ತಿಲ್ಲ.
ಅರ್ಜುನನ ಈ ಪ್ರಾರ್ಥನೆಗೆ, ವಿಶ್ವರೂಪಧಾರಿ ಶ್ರೀಕೃಷ್ಣ ಉತ್ತರಿಸುತ್ತಾನೆ :
ನಾನು ಕಾಲ, ಪ್ರಪಂಚಗಳ ಲಯಕಾರಕ, ಮತ್ತು ಎಲ್ಲ ಮಾನವರನ್ನು ನಾಶ ಮಾಡಲು ನಾನು ಬಂದಿದ್ದೇನೆ. ಮತ್ತು ಪಾಂಡವರಾದ ನಿಮ್ಮನ್ನುಳಿದು ಉಳಿದೆಲ್ಲ ಎರಡೂ ಕಡೆಯ ಸೈನಿಕರು ಸಂಹಾರ ಮಾಡಲ್ಪಡುತ್ತಾರೆ.
ಹೀಗೆ, ಅರ್ಜುನನ ಮುಂದೆ ನಿಂತ ಆ ಭಯಂಕರ ಆಕೃತಿ ಕಾಲದ ದೃಷ್ಟಾಂತ ರೂಪ. ಕಾಲ, ದೇವರ ಇನ್ನೊಂದು ಚೈತನ್ಯ. ಅದು ವಿಶ್ವವನ್ನು ಮತ್ತು ಅದು ಒಳಗೊಂಡ ಎಲ್ಲವನ್ನೂ ವ್ಯಾಪಿಸಿಕೊಳ್ಳುತ್ತದೆ. ನಿಯಂತ್ರಿಸುತ್ತದೆ ಮತ್ತು ಅಂತಿಮವಾಗಿ ನಾಶಗೊಳಿಸುತ್ತದೆ. ಕಾಲವೆನ್ನುವುದು ನಿಜವಾಗಲೂ ನಮ್ಮನ್ನು ತನ್ನ ಭಯಂಕರ ಕೋರೆ ಹಲ್ಲುಗಳಿಂದ ಧ್ವಂಸಮಾಡುವ ಸರ್ವ ಭಕ್ಷಕ ದೈತ್ಯ.
ಆದರೆ, ಅರ್ಜುನ ಮತ್ತು ಅವನ ಸೋದರರಿಗೇಕೆ ರಿಯಾಯಿತಿ? ಪ್ರಭು ಶ್ರೀಕೃಷ್ಣ ತನ್ನ ಮಿತ್ರರಿಗೆ ಪಕ್ಷಪಾತ ತೋರಿಸುತ್ತಿದ್ದನೇ? ಅಥವಾ ತನ್ನ ಭಕ್ತರಿಗೊಂದು ಪಂಥಾಭಿಮಾನದ ವಿಶ್ವಾಸ ತೋರುತ್ತಿದ್ದನೇ?
ಹಾಗೇನೂ ಇಲ್ಲ. ಹೌದು, ಶ್ರೀಕೃಷ್ಣ ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನನನ್ನು ವಿಶೇಷವಾಗಿ ರಕ್ಷಿಸುತ್ತಿದ್ದದ್ದಂತೂ ಸುಳ್ಳೇನಲ್ಲ. ಆದರೆ, ಇಂತಹ ರಕ್ಷಣೆಯನ್ನು ಐಹಿಕ ಆಲೋಚನೆಗಳ ಬದುಕಿಗೆ ಅತೀತರಾಗಿರುವಂತಹ ತನ್ನ ಪ್ರತಿಯೊಬ್ಬ ಭಕ್ತರಿಗೂ ದೇವರು ದೊರಕಿಸುತ್ತಾನೆ.
ಶ್ರೀಮದ್ಭಗವದ್ಗೀತೆಯಲ್ಲಿ, ಕಾಲ ನಿಯಂತ್ರಿಸಿ ನಾಶ ಮಾಡುವ ನಮ್ಮ ಐಹಿಕ ಶರೀರಗಳು ನಾವಲ್ಲ, ಆದರೆ ಶರೀರದೊಳಗಿನ ಶಾಶ್ವತ, ಆಧ್ಯಾತ್ಮಿಕ ವ್ಯಕ್ತಿಗಳು ಎಂದು ಶ್ರೀಕೃಷ್ಣ ವಿವರಿಸುತ್ತಾನೆ. ಐಹಿಕ ಗುಣಗಳ ಕಾರ್ಯಭಾರಗಳ ಮೂಲಕ, ಪ್ರತ್ಯೇಕವಾಗಿ ಅವನೊಂದಿಗೆ ಆನಂದ ಹೊಂದುವ ನಮ್ಮ ಬಯಕೆಗಳನ್ನು ಪೂರೈಸಲು, ಶ್ರೀಕೃಷ್ಣ ನಮಗೆಲ್ಲ ಈ ದೇಹಗಳನ್ನು ನೀಡಿದ್ದಾನೆ.

ಹೀಗಿದ್ದರೂ, ಶುದ್ಧಾತ್ಮರಾಗಿ ನಮಗೆ ಭೌತವಸ್ತು ಬಗ್ಗೆ ಮಾಡುವುದು ಏನಿಲ್ಲ. ನಮ್ಮ ಶಾಶ್ವತ ಸ್ವಭಾವಜನ್ಯ ಪ್ರವೃತ್ತಿ ಎಂದರೆ ಪರಿಪೂರ್ಣನಾದ ದೇವೋತ್ತಮ ಪುರುಷನ ಸೇವೆ ಮಾಡುತ್ತ ಮೃತ್ಯುರಹಿತ ಜೀವನವನ್ನು ಆನಂದದಿಂದ ಸುಖಿಸುವುದೇ ಆಗಿದೆ.
ಪ್ರೀತಿಯಿಂದ ಶ್ರೀಕೃಷ್ಣ ಅವನ ಸೇವೆಯನ್ನು ತ್ಯಜಿಸಲು ನಮ್ಮನ್ನು ಬಿಟ್ಟಿದ್ದರೂ, ಅವನು ಕಾಲದ ತನ್ನ ಚೈತನ್ಯದ ಮೂಲಕ ನಮಗಿಷ್ಟಬಂದಂತೆ ಬದುಕನ್ನು ನಾವು ಸುಖಿಸುವುದೊಂದು ರೀತಿಯ ಭ್ರಾಂತಿಕಾರಕ ಎಂದು ನೆನಪಿಸುತ್ತಾನೆ.
ಇಡೀ ದೇಹದ ಆಚೆ ಇದ್ದು ಹೇಗೆ ಒಂದು ಬೆರಳು ತನಗೆ ತಾನೇ ಪೋಷಣೆಗೊಳ್ಳದೋ ಹಾಗೆ, ಅವನನ್ನು ಬಿಟ್ಟು ನಾವು ಸುಖವಾಗಿರಲಾರೆವು, ಐಹಿಕ ಗುಣಭರಿತ ಜನ್ಮ ಜನ್ಮಾಂತರಗಳ ಸಂಚಾರದಲ್ಲೂ, ನಾವು ಪರೋಕ್ಷವಾಗಿ ಅವನೊಂದಿಗೆ ಸಂಯೋಗಗೊಂಡಿರುತ್ತೇವೆ, ಏಕೆಂದರೆ ಭೌತ ವಸ್ತುವೂ ಅವನದೊಂದು ಚೈತನ್ಯವಾಗಿರುವುದರಿಂದ ಮತ್ತು ಇಂತಹ ಸಂಚಾರಗಳಲ್ಲಿ ಕಾಲವೆನ್ನುವುದು ನಮ್ಮ ಐಹಿಕ ಶರೀರಗಳನ್ನು ಮತ್ತು ಐಹಿಕ ಗುಣಗಳ ವಿಸ್ತರಣೆಯನ್ನು ಮತ್ತೆ ಮತ್ತೆ ನಾಶಗೊಳಿಸುತ್ತಿರುತ್ತದೆ ಎನ್ನುವ ಪಾಠವನ್ನು ನಾವು ಕಲಿಯುವುದಿರುತ್ತದೆ.
ಅರ್ಜುನ ಮತ್ತು ಅವನ ಸೋದರರನ್ನು ಕಾಲ ನಾಶಗೊಳಿಸಲಿಲ್ಲ, ಏಕೆಂದರೆ ಅವರು ಶ್ರೀಕೃಷ್ಣನ ಪರಿಶುದ್ಧ ಭಕ್ತರಾಗಿದ್ದರು. ರಾಜ್ಯಾಡಳಿತದ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಐಹಿಕ ಲೋಕದ ಆಸಕ್ತಿಗಳಿರಲಿಲ್ಲ. ಅವರ ಇಂತಹ ಭಕ್ತಿಯೇ ಲೋಕಾತೀತವಾದದ್ದು, ಶಾಶ್ವತವಾದದ್ದು ಮತ್ತು ಕಾಲನ ಅಧಿಕಾರವ್ಯಾಪ್ತಿಯಿಂದ ಆಚೆ ಇರುವಂತಹುದು.
ಬರೀ ಅರ್ಜುನ ಮಾತ್ರವಲ್ಲ, ಎಲ್ಲ ಪರಿಶುದ್ಧ ಭಕ್ತರೂ ಕಾಲನ ಈ ಸರ್ವಭಕ್ಷಕ ಬಾಯಿಗಳಿ೦ದ ಕ್ಷೇಮವಾಗಿರುವಂತವರು. ಕಾಲನ ವಿಸ್ತಾರವಧಿಯಲ್ಲಿ ಭಕ್ತರ ಶರೀರಗಳು ನಾಶಗೊಂಡರೂ, ಇಂತಹ ಭಕ್ತರು ತೀರಿಕೊಂಡರು ಎಂದು ಹೇಳುವುದು ಬರೀ ಮೇಲು ಪದರದ ಮಾತಾಗುತ್ತದೆ.
ಈ ವಿಶ್ವರೂಪವನ್ನು ನೋಡಿದ ಮೇಲೆ, ಅರ್ಜುನ ಶ್ರೀಕೃಷ್ಣನನ್ನು ಮತ್ತೆ ನಿನ್ನ ಎರಡು ಕೈಗಳ ರೂಪಕ್ಕೆ ಹಿಂತಿರುಗು ಎಂದು ಪ್ರಾರ್ಥಿಸುತ್ತಾನೆ. ಶ್ರೀಕೃಷ್ಣ ಹಾಗೆಯೇ ಮಾಡುತ್ತಾನೆ. ಒಬ್ಬ ಭಕ್ತನಾಗಿ ಅರ್ಜುನ ಮೂಲ ದೇವೋತ್ತಮ ಪುರುಷ ಶ್ರೀಕೃಷ್ಣನನ್ನು ವಿಶೇಷವಾಗಿ ಪ್ರೀತಿಸುತ್ತಿದ್ದ, ಈ ಪ್ರಭುವಿನ ವಿಶ್ವರೂಪವನ್ನು ಆರಾಧಿಸಿದ್ದ; ಅದು ಅವನನ್ನು ಭಯಚಕಿತನನ್ನಾಗಿಸಿದ್ದರೂ, ಅರ್ಜುನ ತನ್ನ ಗೌರವದ ಭಕ್ತಿಪೂರ್ವಕ ಪ್ರಾರ್ಥನೆಗಳನ್ನು ಸಲ್ಲಿಸುವಂತೆ ಮಾಡಿತ್ತು.
ಆದರೆ, ಭಯಂಕರವಾಗಿ ಭಯವೆಬ್ಬಿಸುವ, ಸರ್ವಭಕ್ಷಕ ವೈಲಕ್ಷಣಗಳುಳ್ಳ ವಿಶ್ವರೂಪವನ್ನು ನಾವು ಪ್ರೀತಿಸಲು ಸಾಧ್ಯವಿಲ್ಲ. ಹೀಗಾಗಿ ಅರ್ಜುನ ಅವುಗಳಲ್ಲಿ ಅಂತಿಮವಾಗಿ ಅಷ್ಟೊಂದು ಆಸಕ್ತಿ ತೋರಲಿಲ್ಲ.
ಅರ್ಜುನನ ಉದಾಹರಣೆಯನ್ನು ಅನುಸರಿಸುವವರಂತೆ, ಅವನ ವಿಶ್ವರೂಪವನ್ನು ದಿಟ್ಟಿಸಿನೋಡಿ, ಕಾಲದ ಆ ಭಯಂಕರ ಮುಖಗಳನ್ನು ನೋಡುವ ಬದಲು, ನಾವು ಕೂಡ ಮೂಲ ದೇವೋತ್ತಮ ಪುರುಷನಾದ ಶ್ರೀಕೃಷ್ಣನ ಸೇವೆಯಲ್ಲಿ ತೊಡಗಲು ಬಯಸಬಹುದು.






Leave a Reply