– ಶ್ರೀಮತಿ ಎಂ.ಅಹಲ್ಯ
ಹಲಸಂದೆಕಾಳಿನ ಆಂಬೊಡೆ

ಬೇಕಾಗುವ ಪದಾರ್ಥಗಳು :
ಸಿಪ್ಪೆ ಇರುವ ಹಲಸಂದೆ – 250 ಗ್ರಾಂ
ಚಚ್ಚಿರುವ ಹಸಿರುಮೆಣಸಿನಕಾಯಿ – 7
ತೆಂಗಿನತುರಿ, ಕೊತ್ತಂಬರಿ ಸೊಪ್ಪು – ಸ್ವಲ್ಪ
ಇಂಗು – ಸ್ವಲ್ಪ
ಎಣ್ಣೆ – ಕರಿಯಲು
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಹಲಸಂದೆ ಕಾಳನ್ನು 5 ಗಂಟೆಗಳ ಕಾಲ ನೆನೆಸಿ. ಸಿಪ್ಪೆಯನ್ನು ಬೇರ್ಪಡಿಸಿ ಸ್ವಲ್ಪ ತರಿಯಾಗಿ ರುಬ್ಬಿ ಮೇಲಿನ ಸಾಮಾನುಗಳನ್ನೆಲ್ಲಾ ಸೇರಿಸಿ ವಡೆಯಾಕಾರವಾಗಿ ತಟ್ಟಿ ಎಣ್ಣೆಯಲ್ಲಿಕರಿಯಬೇಕು.
ತೊಗರಿ ಬೇಳೆ ಆಂಬೊಡೆ

ಬೇಕಾಗುವ ಪದಾರ್ಥಗಳು :
ಅಕ್ಕಿಹಿಟ್ಟು – ಸ್ವಲ್ಪ
ತೊಗರಿಬೇಳೆ – 250 ಗ್ರಾಂ
ಎಣ್ಣೆ – ಕರಿಯಲು
ಕರಿಬೇವಿನ ಸೊಪ್ಪು – 1 ಎಸಳು
ಕಾಯಿತುರಿ – ಸ್ವಲ್ಪ
ಇಂಗು – ಸ್ವಲ್ಪ
ಹಸಿರು ಮೆಣಸಿನಕಾಯಿ -8
ಪುದೀನ, ಕೊತ್ತಂಬರಿ ಸೊಪ್ಪು- ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ತೊಗರಿಬೇಳೆ ನೆನೆದ ಅನಂತರ ನೀರನ್ನು ಪೂರ್ತಿ ಬಸಿದು ಮೆಣಸಿನಕಾಯಿ, ಉಪ್ಪು, ಬೇಳೆಯನ್ನು ರುಬ್ಬಿ ಅನಂತರ ಮಿಕ್ಕ ಸಾಮಾನೆಲ್ಲಾ ಸೇರಿಸಿ ವಡೆಯಾಕಾರವಾಗಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.
ಸಬ್ಬಕ್ಕಿ ಆಂಬೊಡೆ

ಬೇಕಾಗುವ ಪದಾರ್ಥಗಳು :
ಸಬ್ಬಕ್ಕಿ – 1 ಬಟ್ಟಲು
ಹುಳಿ ಮೊಸರು – 1 1/2 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು
ಅಕ್ಕಿ ಹಿಟ್ಟು – ಸ್ವಲ್ಪ
ಕೊತ್ತಂಬರಿ ಸೊಪ್ಪು, ಇಂಗು ಮತ್ತು ಪುದೀನ – ಸ್ವಲ್ಪ
ಹಸಿಮೆಣಸಿನಕಾಯಿ – 8 ( ಪೇಸ್ಟ್ ಮಾಡಿದ್ದು)
ಮಾಡುವ ವಿಧಾನ: ಸಬ್ಬಕ್ಕಿಯನ್ನು ಮೊಸರಿನಲ್ಲಿ ನೆನೆಸಬೇಕು. ಅನಂತರ ಅದಕ್ಕೆ ಹಿಡಿಸುವಷ್ಟು ಅಕ್ಕಿಹಿಟ್ಟನ್ನುಕಲೆಸಿದ ನ೦ತರ ಮೇಲೆ ತಿಳಿಸಿದ ಸಾಮಾನುಗಳನ್ನು ಸೇರಿಸಿ ವಡೆಯಾಕಾರವಾಗಿ ತಟ್ಟಿ ಎಣ್ಣೆಯಲ್ಲಿ ಕರಿಯಬೇಕು.
ಹೆಸರು ಬೇಳೆ ಆಂಬೊಡೆ

ಬೇಕಾಗುವ ಪದಾರ್ಥಗಳು :
ಹೆಸರು ಬೇಳೆ – 250 ಗ್ರಾಂ
ಹಸಿರುಮೆಣಸಿನಕಾಯಿ – 6
ಉಪ್ಪು – ರುಚಿಗೆ ತಕ್ಕಷ್ಟು
ಕಾಯಿತುರಿ – ಸ್ವಲ್ಪ
ಕೊತ್ತಂಬರಿ ಸೊಪ್ಪು ಮತ್ತು ಇಂಗು – ಸ್ವಲ್ಪ
ಮಾಡುವ ವಿಧಾನ: ಹೆಸರು ಬೇಳೆ ನೆನೆದ ಅನಂತರ ಮೇಲೆ ತಿಳಿಸಿದ ಹಾಗೆ ಚಿಕ್ಕ ಚಿಕ್ಕದಾಗಿ ವಡೆ ಅಥವಾ ಪಕೋಡ ತರಹ ಎಣ್ಣೆಯಲ್ಲಿ ಕರಿಯಬೇಕು. ಎಲ್ಲಾ ತರಹದ ಆಂಬೊಡೆಗಳನ್ನು ಮಾಡಿದ ಅನಂತರ ಶ್ರೀರಾಧಾಕೃಷ್ಣನಿಗೆ ಅರ್ಪಿಸಿ ಎಲ್ಲರೂ ಸ್ವೀಕರಿಸಿ.






Leave a Reply