ಪಚ್ಚಡಿಗಳನ್ನು ತಯಾರಿಸುವ ಬಗ್ಗೆ ವಿವರಿಸಿದ್ದೇವೆ. ಪೌಷ್ಟಿಕಾಂಶ ಉಳ್ಳ ಈ ತರಕಾರಿಗಳ ಸ್ಯಾಲಡ್‌ಗಳನ್ನು ಪಲಾವ್‌ನಂತಹ ಅನ್ನಗಳೊಂದಿಗೆ ಅಲ್ಲದೆ ಹಾಗೆಯೇ ಕೂಡ ಆಸ್ವಾದಿಸಬಹುದು. ಬೇಸಿಗೆ ಬೇಗೆಗೆ ತಂಪಾಗಿರುತ್ತದೆ. ಇದನ್ನು ಶ್ರದ್ಧೆಯಿಂದ ತಯಾರಿಸಿ, ಕೃಷ್ಣನಿಗೆ ಅರ್ಪಿಸಿ ಮನೆ ಮಂದಿಗೆ ತಿನ್ನಲು ಕೊಡಿ.
ಟೊಮ್ಯಾಟೊ, ಸೌತೆಕಾಯಿ, ಲೆಟಿಸ್, ಕ್ಯಾರೆಟ್

ಬೇಕಾಗುವ ಪದಾರ್ಥಗಳು
ಟೊಮ್ಯಾಟೊ – 2
ಸೌತೆಕಾಯಿ – 1
ಲೆಟಿಸ್ ಸೊಪ್ಪು – 1/2 ದಿಂದ 1
ಕ್ಯಾರೆಟ್ – 2
ಆಲಿವ್ ಎಣ್ಣೆ – 2 ಟೇಬಲ್ ಚಮಚ
ಉಪ್ಪು – 2 ಟೀ ಚಮಚ
ಕರಿ ಮೆಣಸು – 1/4 ಟೀ ಚಮಚ
ನಿಂಬೆ ರಸ – 2 ಟೇಬಲ್ ಚಮಚ
ಇಟಾಲಿಯನ್ ಎಲೆ – 1 ಟೇಬಲ್ ಚಮಚ
ಮಾಡುವ ವಿಧಾನ : ಕ್ಯಾರೆಟ್ ಅನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದು ತುರಿಯಿರಿ ಅಥವಾ ಸಣ್ಣ ಚೂರು ಮಾಡಿ ಪಾತ್ರೆಗೆ ಹಾಕಿಡಿ. ಟೊಮ್ಯಾಟೊಗಳನ್ನು ತೊಳೆದು ಚೂರು ಮಾಡಿ ಕ್ಯಾರೆಟ್ ಇರುವ ಪಾತ್ರೆಗೆ ಹಾಕಿ. ಲೆಟಿಸ್ ಅನ್ನು ಚೂರು ಮಾಡಿ ಅದೇ ಪಾತ್ರೆಗೆ ಹಾಕಿ. ಸೌತೆಕಾಯಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಅನಂತರ ಸಣ್ಣ ಚೂರುಗಳನ್ನಾಗಿ ಕತ್ತರಿಸಿ ಪಾತ್ರೆಗೆ ಹಾಕಿ. ತರಕಾರಿಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಆಲಿವ್ ಎಣ್ಣೆ, ಉಪ್ಪು, ಕರಿ ಮೆಣಸು, ನಿಂಬೆ ರಸ ಮತ್ತು ಇಟಾಲಿಯನ್ ಎಲೆಗಳನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಕಲಸಿ.
ಸೌತೆಕಾಯಿ – ಮೊಸರಿನ ರಾಯತ

ಬೇಕಾಗುವ ಪದಾರ್ಥಗಳು
ಸೌತೆಕಾಯಿ – 2
ದಾಳಿಂಬೆ – 1/2
ಮೊಸರು – 2-3 ಬಟ್ಟಲು
ಸಾಸಿವೆ – 1 ಟೇಬಲ್ ಚಮಚ
ಕರಿ ಉಪ್ಪು – 1 1/4 ಟೀ ಚಮಚ
ಕರಿ ಮೆಣಸು – 1/2 ಟೀ ಚಮಚ
ಸಕ್ಕರೆ – 1 ಟೀ ಚಮಚ
ಇಂಗು – 1/4 ಟೀ ಚಮಚ
ಮಾಡುವ ವಿಧಾನ : ಸೌತೆಕಾಯಿಯನ್ನು ತೊಳೆದು ಸಿಪ್ಪೆ ತೆಗೆಯಿರಿ. ಅನಂತರ ತುರಿದು ಪಾತ್ರೆಗೆ ಹಾಕಿ. ಅದರಲ್ಲಿನ ನೀರನ್ನು ಹಿಂಡಿ, ಸೌತೆಕಾಯಿಯನ್ನು ಮತ್ತೊಂದು ಪಾತ್ರೆಗೆ ಹಾಕಿಡಿ. ದಾಳಿಂಬೆ ಹಣ್ಣಿನ ಬೀಜವನ್ನು ತುರಿದ ಸೌತೆಕಾಯಿಗೆ ಹಾಕಿ ಮಿಶ್ರಣ ಮಾಡಿ. ಮೊಸರು, ಉಪ್ಪು, ಮೆಣಸು ಪುಡಿ ಅದಕ್ಕೆ ಹಾಕಿ ಸೇರಿಸಿ. ಚಿಕ್ಕ ಪಾತ್ರೆಯೊಂದನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ ಕರಗಿಸಿ. ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ಅನಂತರ ಇಂಗು ಹಾಕಿ ಅದನ್ನು ಮೊಸರು ಮಿಶ್ರಣಕ್ಕೆ ಹಾಕಿ.
ದಾಳಿಂಬೆ ಸಿಗದಿದ್ದರೆ, ಬಾಳೆ ಹಣ್ಣನ್ನು ಬಳಸಿ. ಅಥವಾ ತುರಿದ ಕ್ಯಾರೆಟ್ ಅನ್ನು ಹಾಕಿ ಮಿಶ್ರಣ ಮಾಡಿ.
ಆಲೂಗಡ್ಡೆ ಸ್ಯಾಲಡ್

ಬೇಕಾಗುವ ಪದಾರ್ಥಗಳು
ಆಲೂಗಡ್ಡೆ – 4
ತಾಜಾ ನಿಂಬೆ ರಸ – 1 ಟೀ ಚಮಚ
ಉಪ್ಪು – 1 ಟೀ ಚಮಚ
ಮೊಸರು – 2 ಟೇಬಲ್ ಚಮಚ
ಕತ್ತರಿಸಿದ ಹಸಿರು ಮೆಣಸಿನ ಕಾಯಿ – 1/2 ಟೀ ಚಮಚ
ಸೂರ್ಯಕಾಂತಿ ಎಣ್ಣೆ – 1 ಟೇಬಲ್ ಚಮಚ
ಸಾಸಿವೆ – 1/2 ಟೀ ಚಮಚ
ಕತ್ತರಿಸಿದ ತಾಜಾ ಪುದೀನ ಸೊಪ್ಪು – 1 ಟೇಬಲ್ ಚಮಚ
ಲೆಟಿಸ್ ಎಲೆ – ಅಲಂಕರಿಸಲು
ಮಾಡುವ ವಿಧಾನ : ಸ್ವಲ್ಪ ಉಪ್ಪು ಹಾಕಿದ ನೀರಿನಲ್ಲಿ ಆಲೂಗಡ್ಡೆಯನ್ನು ಬೇಯಿಸಿ. ಅನಂತರ ಸಿಪ್ಪೆ ತೆಗೆದು ಚೂರು ಮಾಡಿ ಪಾತ್ರೆಗೆ ಹಾಕಿಡಿ. ಆಲೂಗಡ್ಡೆ ಬಿಸಿ ಇರುವಾಗಲೇ ಅದಕ್ಕೆ ನಿಂಬೆ ರಸ, ಉಪ್ಪು, ಮೊಸರು, ಮತ್ತು ಕತ್ತರಿಸಿದ ಮೆಣಸಿನ ಕಾಯಿಗಳನ್ನು ಹಾಕಿ. ಸಣ್ಣ ಪ್ಯಾನ್‌ನಲ್ಲಿ ಎಣ್ಣೆ ಕಾಯಿಸಿ ಸಾಸಿವೆಯನ್ನು ಹಾಕಿ ಸಿಡಿಸಿ. ಅದನ್ನು ಸ್ಯಾಲಡ್‌ಗೆ ಹಾಕಿ. ಸಿದ್ಧಪಡಿಸಿಕೊಂಡಿರುವ ಪುದೀನದ ಮುಕ್ಕಾಲು ಭಾಗವನ್ನು ಅದಕ್ಕೆ ಹಾಕಿ. ಸ್ಯಾಲಡ್ ಆರಿದ ಮೇಲೆ ಉಳಿದ ಪುದೀನ ಮತ್ತು ಲೆಟಿಸ್ ಎಲ್ಲೆಯನ್ನು ಹಾಕಿ ಅಲಂಕರಿಸಿ.
ವಿವಿಧ ತರಕಾರಿಗಳ ಸ್ಯಾಲಡ್

ಬೇಕಾಗುವ ಪದಾರ್ಥಗಳು
ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು – 2 ಟೇಬಲ್ ಚಮಚ
ಮೊಸರು – 500 ಎಂಎಲ್
ಕತ್ತರಿಸಿದ ಟೊಮ್ಯಾಟೊ – 1/3 ಕಪ್
ಬಟಾಣಿ – 1/3 ಕಪ್
ಕತ್ತರಿಸಿದ ಮೂಲಂಗಿ – 1/3 ಕಪ್
ಕೆಂಪು ದೊಣ್ಣೆ ಮೆಣಸಿನಕಾಯಿ – 1/3 ಕಪ್
ಕತ್ತರಿಸಿದ ಸೌತೆ ಕಾಯಿ – 1/3 ಕಪ್
ಜೀರಿಗೆ – 1 ಟೇಬಲ್ ಚಮಚ
ಸೋಂಪು – 1 ಟೀ ಚಮಚ
ಉಪ್ಪು – 1/2 ಟೀ ಚಮಚ
ಕರಿ ಮೆಣಸು ಪುಡಿ – ಒಂದು ಚಿಟಿಕೆ
ಮಾಡುವ ವಿಧಾನ : ಮೊಸರನ್ನು ಮೃದುವಾಗುವಂತೆ ಕಡೆಯಬೇಕು. ಅದಕ್ಕೆ ಎಲ್ಲ ತರಕಾರಿಗಳನ್ನು ಹಾಕಿ. ಸಣ್ಣ ಪ್ಯಾನ್‌ನಲ್ಲಿ ಜೀರಿಗೆ ಮತ್ತು ಸೋಂಪನ್ನು ಕಂದು ಬಣ್ಣಕ್ಕೆ ಬರುವವರೆಗೂ ಹುರಿಯಿರಿ. ಅನಂತರ ಅದನ್ನು ಪುಡಿ ಮಾಡಿ ಸ್ಯಾಲಡ್‌ಗೆ ಹಾಕಿ. ಉಪ್ಪು, ಮೆಣಸು ಪುಡಿ ಮತ್ತು ಕತ್ತರಿಸಿದ ಕೊತ್ತಂಬರಿ ಹಾಕಿ ಮಿಶ್ರಣ ಮಾಡಿ. ಫ್ರಿಜ್‌ನಲ್ಲಿಟ್ಟು ತಣ್ಣಗಾಗಿಸಿ.






Leave a Reply