ಬಗೆಬಗೆ ಚಕ್ಕುಲಿ

  • ಹೆಸರುಬೇಳೆ ಒಂದು ಅಳತೆ
  • ಅಕ್ಕಿ ಹಿಟ್ಟು ಒಂದು ಅಳತೆ
  • ಜೀರಿಗೆ
  • ಉಪ್ಪು
  • ಕರಿಯಲು ಎಣ್ಣೆ

ಹೆಸರುಬೇಳೆಗೆ ನೀರು ಹಾಕಿ ಬೇಯಿಸಿ, ನೀರು ಬಸಿದು ಬೇಳೆಯನ್ನು ನುಣ್ಣಗೆ ನಾದಿಕೊಳ್ಳಿ. ಉಪ್ಪು ಜೀರಿಗೆ, ತೊಳೆದ ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಕರಿಯಿರಿ.


  • ಮೈದಾ ಹಿಟ್ಟು ಒಂದು ಲೋಟ
  • ಎಳ್ಳು ಎರಡು ಚಮಚ (ಬಿಳಿ)
  • ಉಪ್ಪು
  • ಕರಿಯಲು ಎಣ್ಣೆ

ಮೈದಾಹಿಟ್ಟನ್ನು ಒಂದು ಬಟ್ಟೆಯಲ್ಲಿ  ಕಟ್ಟಿ ತಟ್ಟೆಯ ಮೇಲೆ ಇಟ್ಟು ಆವಿಯಲ್ಲಿ ಮುಕ್ಕಾಲುಗಂಟೆ ಬೇಯಿಸಿ. ಇದನ್ನು ತೆಗೆದು ಉಂಡೆಯಂತಾಗಿರುವ ಮೈದಾಹಿಟ್ಟನ್ನು ಪುಡಿಮಾಡಿ. ಉಪ್ಪು, ಎಳ್ಳು ಸೇರಿಸಿ. ನೀರು ಹಾಕಿ ಕಲಸಿ ಚಕ್ಕುಲಿ ಒರಳಿಗೆ ಹಿಟ್ಟು ತುಂಬಿ ಕಾದ ಎಣ್ಣೆಯಲ್ಲಿ ಹದವಾಗಿ ಕರಿಯಿರಿ ತೆಗೆಯಿರಿ. ಮೈದಾ ಚಕ್ಕುಲಿ ಹೆಚ್ಚು ರುಚಿ.


  • ತೊಳೆದ ಅಕ್ಕಿ ಹಿಟ್ಟು ಒಂದು ಲೋಟ
  • ಉದ್ದಿನ ಹಿಟ್ಟು ಕಾಲು ಲೋಟ
  • ಬಿಳಿ ಎಳ್ಳು ಎರಡು ಚಮಚ
  • ತುಪ್ಪ ಎರಡು ಚಮಚ
  • ಕರಿಯಲು ಎಣ್ಣೆ,
  • ಉಪ್ಪು

ಒಂದು ಲೋಟ ಅಕ್ಕಿಯನ್ನು ನೀರಿನಲ್ಲಿ ತೊಳೆದು ಬಸಿದು ನೆರಳಿನಲ್ಲಿ ಒಣಗಿಸಿ ಹಿಟ್ಟು ಮಾಡಿಸಿ. ಉದ್ದಿನಬೇಳೆಯನ್ನು ಒಂದು ಸಾರಿ ನೀರಿನಲ್ಲಿ ತೊಳೆದು ಕೂಡಲೇ ಸ್ವಲ್ಪಸ್ವಲ್ಪವಾಗಿ ಹಾಕಿ ಸಂಪಿಗೆ ಬಣ್ಣಕ್ಕೆ ಹುರಿದು ಪುಡಿ ಮಾಡಿಕೊಳ್ಳಿ. ಇದನ್ನು ಅಕ್ಕಿಹಿಟ್ಟಿಗೆ ಸೇರಿಸಿ. ತುಪ್ಪ, ಉಪ್ಪು, ಬಿಳಿ ಎಳ್ಳು ಸೇರಿಸಿ ಹಿಟ್ಟನ್ನು ಗಂಟಿಲ್ಲದೆ ನೀರು ಹಾಕಿ ಕಲಸಿ ಚಕ್ಕುಲಿ ಒರಳಿನಲ್ಲಿ ತುಂಬಿ. ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿದು ತೆಗೆಯಿರಿ. ಇದು ರುಚಿ.


  • ಮೇಲೆ ಹೇಳಿದ ರೀತಿಯಲ್ಲಿ ಒಂದು ಲೋಟದಷ್ಟು ಚಕ್ಕುಲಿ ಹಿಟ್ಟು ತಯಾರಿಸಿಟ್ಟುಕೊಳ್ಳಿ.
  • ಪುದೀನ ಎರಡು ಚಮಚ
  • ಜೀರಿಗೆ
  • ಉಪ್ಪು
  • ಕೊತ್ತಂಬರಿ ಸೊಪ್ಪು
  • ಚಕ್ಕೆ ತುಂಡು
  • ಹಸಿಮೆಣಸಿಕಾಯಿ
  • ನಿಂಬೆರಸ
  • ಕರಿಯಲು ಎಣ್ಣೆ

ಉಳಿದ ಮಸಾಲೆ ಪದಾರ್ಥಗಳನ್ನು ಸೇರಿಸಿ ನುಣ್ಣಗೆ ಚಟ್ನಿಯಂತೆ ರುಬ್ಬಿಕೊಳ್ಳಿ. ಹಿಟ್ಟಿಗೆ ತುಪ್ಪ, ರುಬ್ಬಿದ ಮಸಾಲೆ ಸೇರಿಸಿ ಕೂಡಿಸಿಕೊಳ್ಳಿ. ಗಂಟಿಲ್ಲದಂತೆ ಚಕ್ಕುಲಿ ಒರಳಿನಲ್ಲಿ ತುಂಬಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿದು ತೆಗೆಯಿರಿ.


  • ರಾಗಿ ಹಿಟ್ಟು ಒಂದು ಅಳತೆ
  • ಹುರಿಗಡಲೆ ಹಿಟ್ಟು 4 ಚಮಚ
  • ಬಳಿ ಎಳ್ಳು
  • ಉದ್ದಿನ ಬೇಳೆ ಹಿಟ್ಟು 6 ಚಮಚ
  • ಉಪ್ಪು
  • ಜೀರಿಗೆ
  • ಎಣ್ಣೆ

ತೊಳೆದು ಒಣಗಿಸಿ ಮಾಡಿಸಿದ ಒಂದು ಕಪ್‌ ರಾಗಿಯ ಹಿಟ್ಟಿಗೆ ಎರಡು ಚಮಚ ತುಪ್ಪ ಸೇರಿಸಿ ಕಲಸಿ. ಉದ್ದಿನ ಬೇಳೆ ಹಿಟ್ಟು ಹುರಿಗಡಲೆ ಹಿಟ್ಟು, ಎಳ್ಳು, ಜೀರಿಗೆ ಉಪ್ಪು ಸೇರಿಸಿ ನೀರು ಹಾಕಿ ಕಲಸಿ ಚಕ್ಕುಲಿ ಒರಳಿಗೆ ತುಂಬಿ. ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿಯಿರಿ.


  • ಸಬ್ಬಕ್ಕಿ ಒಂದು ಕಪ್‌
  • ಸಿಹಿ ಮೊಸರು ಒಂದು ಕಪ್‌
  • ಜೀರಿಗೆ
  • ಉಪ್ಪು
  • ಅಕ್ಕಿ ಹಿಟ್ಟು
  • ಕರಿಯಲು ಎಣ್ಣೆ
  • ಹಸೀ ಖಾರ ಒಂದು ಚಮಚ
  • ಇಂಗು

ಸಬ್ಬಕ್ಕಿಯನ್ನು ಮೊಸರಿನಲ್ಲಿ ಕಲಸಿ ರಾತ್ರಿ ನೆನೆಸಿ ಇಡಿ. ಬೆಳಗ್ಗೆ ನೆನೆದ ಸಬ್ಬಕ್ಕಿಯನ್ನು ಚೆನ್ನಾಗಿ ನಾದಿ, ಇದಕ್ಕೆ ಹಿಡಿಸುವಷ್ಟು ತೊಳೆದ ಅಕ್ಕಿ ಹಿಟ್ಟು ಸೇರಿಸಿ ಕಲಸಿ. ಉಪ್ಪು, ಜೀರಿಗೆ ಹಸಿ ಖಾರ, ಇಂಗು ಸೇರಿಸಿ ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿಯಿರಿ.


  • ಒಂದು ಅಳತೆಯಷ್ಟು ಅಕ್ಕಿ ಹಿಟ್ಟು
  • ಕಡ್ಲೇ ಬೇಳೆ ಹಿಟ್ಟು
  • ಹುರಿಗಡಲೇ ಹಿಟ್ಟು
  • ಕಾರದ ಪುಡಿ ಒಂದೂವರೆ ಚಮಚ
  • ಜೀರಿಗೆ
  • ಕರಿಯಲು ಎಣ್ಣೆ
  • ತುಪ್ಪ
  • ಉಪ್ಪು

ಎಲ್ಲಾ ಹಿಟ್ಟುಗಳನ್ನು ಸೇರಿಸಿ ತುಪ್ಪ ಹಾಕಿ ಕೂಡಿಸಿ. ಇದಕ್ಕೆ ಕಾರದ ಪುಡಿ, ಉಪ್ಪು ಜೀರಿಗೆ ಸೇರಿಸಿ ನೀರು ಹಾಕಿ ಕಲಸಿ. ಚಕ್ಕುಲಿ ಕರಿಯಿರಿ.


  • ತೊಳೆದ ಅಕ್ಕಿ ಹಿಟ್ಟು ಒಂದು ಅಳತೆ
  • ತೊಳೆದು ಹುರಿದ ಉದ್ದಿನ ಬೇಳೆ ಹಿಟ್ಟು ಕಾಲು ಚಮಚ
  • ತುಪ್ಪ ಒಂದೂವರೆ ಚಮಚ
  • ಗಸಗಸೆ
  • ಉಪ್ಪು
  • ಬೆಲ್ಲ ಒಂದು ಕಪ್‌
  • ಕರಿಯಲು ಎಣ್ಣೆ
  • ತೇಂಗೊಳಲು ಪ್ಲೇಟ್‌

ಅಕ್ಕಿ ಹಿಟ್ಟಿಗೆ ಉದ್ದಿನ ಬೇಳೆ ಹಿಟ್ಟು, ತುಪ್ಪ ಸೇರಿಸಿ ಗಂಟಿಲ್ಲದಂತೆ ಕೂಡಿಸಿ. ಗಸಗಸೆ, ಉಪ್ಪು ಸೇರಿಸಿ ನೀರು ಹಾಕಿ ಕಲಸಿ. ಚಕ್ಕುಲಿ ಒರಳಿಗೆ ತೇಂಗೊಳು ಪ್ಲೇಟ್‌ ಹಾಕಿ. ಕಲಸಿದ ಹಿಟ್ಟು ತುಂಬಿ ಎಣ್ಣೆಯಲ್ಲಿ ಉದ್ದ ಎಳೆಗಳು ಬರುವಂತೆ ಒತ್ತಿ. ಕರಿದು ತೆಗೆಯಿರಿ. ಮೂರು ಸೆಂ.ಮೀ ಉದ್ದ ತುಂಡುಗಳಾಗಿ ಮುರಿದು ಹಾಳೆಯ ಮೇಲೆ ಹರಡಿಕೊಳ್ಳಿ. ಬೆಲ್ಲಕ್ಕೆ ನೀರು ಸೇರಿಸಿ ಕರಗಿಸಿ ಉಂಡೆ ಪಾಕ ಮಾಡಿಕೊಂಡು, ಇದಕ್ಕೆ ಕರಿದ ಚಕ್ಕುಲಿ ತುಂಡುಗಳನ್ನು ಹಾಕಿ ಕಲಕಿ ಇಳಿಸಿ. ತಟ್ಟೆಗೆ ಹರಡಿ. ಗರಿಗರಿಯಾದ ಸಿಹಿ ಚಕ್ಕುಲಿ ಮಕ್ಕಳಿಗೆ ಪ್ರೀತಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi