ಬಾಳೆ ಹಣ್ಣಿನ ಹಲ್ವ

  • ಚಿಕ್ಕ ಗಾತ್ರದ ಕಳಿತ ಏಲಕ್ಕಿ ಬಾಳೆ ಹಣ್ಣು: ¼ ಕೆಜಿ
  • ಸಕ್ಕರೆ: 250 ಗ್ರಾಂ
  • ಗೋಡಂಬಿ ಹೋಳು: 100 ಗ್ರಾಂ
  • ತುಪ್ಪ: ½ ಕೆ.ಜಿ
  • ಆಸಿಡ್‌ ಹರಳು: 2 ಗ್ರಾಂ. (ಸಿಟ್ರಿಕ್‌ ಆಸಿಡ್‌)
  • ಏಲಕ್ಕಿ ಪುಡಿ: 15 ಗ್ರಾಂ.

ಬಾಳೆ ಹಣ್ಣನ್ನು ಸುಲಿದು, ಅದು ಮೃದು ಹಿಟ್ಟಿನ ರೂಪಕ್ಕೆ ಬರುವಂತೆ ಮಾಡಿ.

ಬಾಳೆ ಹಣ್ಣಿನ ಹಿಟ್ಟನ್ನು ಬಿಸಿ ಬಾಣಲೆಗೆ ಹಾಕಿ, ಅದಕ್ಕೆ ಸಕ್ಕರೆ ಬೆರೆಸಿ, 45 ನಿಮಿಷ ಕಾಲ ಮಗುಚಿ.

ಮಿಶ್ರಣವು ಅಂಟು ಅಂಟಾಗಿ, ಕಪ್ಪು ಬಣ್ಣಕ್ಕೆ ತಿರುಗಿದ ಬಳಿಕ ಅದಕ್ಕೆ ತುಪ್ಪ ಬೆರೆಸಿ. ನಿಧಾನವಾಗಿ ಮಗುಚುತ್ತಿರಿ.

ನಂತರ ಸಿಟ್ರಿಕ್‌ ಆಸಿಡ್‌ ಹರಳುಗಳನ್ನು ಸೇರಿಸಿ. 30 ನಿಮಿಷ ಮಗುಚಿ. ಕೊನೆಗೆ ಆ ಮಿಶ್ರಣ ಬಾಣಲೆಯಿಂದ ಬೇರ್ಪಡುವ ಹಂತ ತಲುಪುತ್ತದೆ.

ಏಲಕ್ಕಿ ಪುಡಿ ಮತ್ತು ಗೋಡಂಬಿ ಬೆರೆಸಿ ಚೆನ್ನಾಗಿ ಮಿಶ್ರಮಾಡಿ.

ಆ ಮಿಶ್ರಣವನ್ನು ಎಣ್ಣೆ/ ತುಪ್ಪ ಹಚ್ಚಿದ ತಟ್ಟೆಗೆ ಸುರಿಯಿರಿ, ಇಡೀ ತಟ್ಟೆಗೆ ಹರಡಿ. ನಿಮಗೆ ಬೇಕಾದ ಆಕಾರ, ಗಾತ್ರಕ್ಕೆ ಅದನ್ನು ಕತ್ತರಿಸಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi