ಪಂಚ ಪವಿತ್ರಗಳು
– ಸಂಗ್ರಹ : ಶ್ರೀಮತಿ ಶಶಿಕಲಾ ಶ್ರೀಧರ
1. ಪಂಚ ಭೂತಗಳು – ಪೃಥ್ವಿ, ಅಪ್ಪು, ತೇಜಸ್, ವಾಯು, ಆಕಾಶ

2. ಪಂಚ ವಾಯುಗಳು – ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ
3. ಪಂಚಾಮೃತ – ಹಾಲು, ಮೊಸರು, ತುಪ್ಪ ಸಕ್ಕರೆ, ಜೇನುತುಪ್ಪ
4. ಪಂಚ ಭಕ್ಷ್ಯಗಳು – ಭಕ್ಷ್ಯ, ಭೋಜ್ಯ, ಚೋಷ್ಯ, ಲೇಹ್ಯ, ಪಾನೀಯ
5. ಪಂಚೇಂದ್ರಿಯಗಳು – ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ
6. ಪಂಚಾಯುಧಗಳು – ಶಂಖ, ಚಕ್ರ, ಗದಾ, ಖಡ್ಯ ಶಾರ್ಙ್ಗ
7. ಪಂಚಾಗ್ನಿಗಳು – ಆಹವನೀಯ, ದಕ್ಷಿಣಾಗ್ನಿ, ಗಾರ್ಹಪತ್ಯ, ಸವಿತಾ, ಅವಸಧಾ
8. ಪಂಚ ಜ್ಞಾನೇಂದ್ರಿಯಗಳ ವಸ್ತುಗಳು – ರೂಪ, ರಸ, ಗಂಧ, ಸ್ಪರ್ಶ, ಶಬ್ದ
9. ಪಂಚಕೋಶಗಳು – ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ
10. ಪಂಚಾಂಗ – ವಾರ, ತಿಥಿ, ನಕ್ಷತ್ರ, ಯೋಗ, ಕರಣ

11. ಪಂಚಗವ್ಯ – ಕ್ಷೀರ, ದಧಿ, ಘೃತ, ಗೋಮೂತ್ರ, ಗೋಮಯ
12. ಪಂಚವಟಿ – ಅಶ್ವತ್ಥ, ವಟ, ಅಶೋಕ, ಬಿಲ್ವ, ನೆಲ್ಲಿ
13. ಪಂಚಕರ್ಮಗಳು – ನಿತ್ಯ, ನೈಮಿತ್ತಿಕ, ಕಾಮ್ಯ, ಪ್ರಾಯಶ್ಚಿತ್ತ, ನಿಷಿದ್ಧ
14. ಪಂಚತಂತ್ರ – ಭೇದ, ಪರೀಕ್ಷೆ, ವಿಶ್ವಾಸ, ವಂಚನೆ, ಮಿತ್ರಕಾರ್ಯ
15. ಪಂಚಬಾಣ – (ಮನ್ಮಥನ) – ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಪಲ
16. ಪಂಚ ಸರೋವರ – ಬಿಂದು, ನಾರಾಯಣ, ಪಂಪಾ, ಪುಷ್ಕರ, ಮಾನಸ
17. ಪಂಚನದಿ – ಶತದ್ರು, ವಿಪಾಶಾ, ಇರಾವತಿ, ಚಂದ್ರಭಾಗಾ, ವಿತಸ್ತಾ
18. ಪಂಚಕಾಶಿ – ವಾರಣಾಸಿ, ಗುಪ್ತಕಾಶಿ, ಉತ್ತರಕಾಶಿ, ದಕ್ಷಿಣಕಾಶಿ, ಶಿವಕಾಶಿ
19. ಪಂಚ ಗಂಗಾ – ಕಾವೇರಿ, ತುಂಗಭದ್ರಾ, ಕೃಷ್ಣವೇಣಿ, ಗೌತಮೀ, ಭಾಗೀರಥಿ

20. ಪಂಚಾಯುಧ (ದೇವಿಯ) – ಹರ್ಷಣ, ರೋಚನ, ಮೋಹನ, ಶೋಷಣ, ಮಾರಣ
21. ಪಂಚಬಾಣ (ದೇವಿಯ) – ಕ್ಷೋಭಣ, ದ್ರಾವಣ, ಆಕರ್ಷಣ, ವಶ್ಯ, ಉನ್ಮಾದ
22. ಪಂಚಲೋಹಗಳು – ಬೆಳ್ಳಿ, ಬಂಗಾರ, ಕಂಚು, ತಾಮ್ರ, ಹಿತ್ತಾಳೆ
23. ಪಂಚ ಪಾಂಡವರು – ಧರ್ಮರಾಯ, ಭೀಮ, ಅರ್ಜುನ, ನಕುಲ, ಸಹದೇವ
24. ಪಂಚ ನಿಯಮಗಳು – ಶೌಚ, ಸಂತೋಷ, ತಪಶ್ಚರ್ಯ, ಸ್ವಾಧ್ಯಾಯ, ಈಶ್ವರ ಪ್ರಣಿದಾನ
25. ಪಂಚಮುಖಗಳು (ಶಿವನ ) – ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ
26. ಪಂಚಲಿಂಗಗಳು – ಪೃಥ್ವಿಲಿಂಗ (ಕಾಂಚಿ), ಆಪೋಲಿಂಗ (ಜಂಬುಕೇಶ್ವರ), ತೇಜೋಲಿಂಗ (ಅರುಣಾಚಲ), ವಾಯುಲಿಂಗ (ಕಾಳಹಸ್ತಿ), ಆಕಾಶಲಿಂಗ (ಚಿದಂಬರಂ)
27. ಪಂಚ ಮಹಾಕಾವ್ಯಗಳು – (ಕಾಳಿದಾಸ) ರಘುವಂಶ, ಕುಮಾರಸಂಭವ (ಹರ್ಷ) ನೈಷಧ ಚರಿತ ( ಭಾರವಿ) ಕಿರಾತಾರ್ಜುನೀಯ, (ಮಾಘಕವಿ) ಶಿಶುಪಾಲ ವಧ
28. ಪಂಚೇಂದ್ರರು – ವಿಶ್ವಭುಕ್, ಭೂತಧಾಮ, ಶಿಬಿ, ಶಾಂತಿ, ತೇಜಸ್ವಿ






Leave a Reply