ಮೂರರ ಮಹಿಮೆ
– ಸಂಗ್ರಹ : ಶ್ರೀಮತಿ ಶಶಿಕಲಾ ಶ್ರೀಧರ
1. ತ್ರಿಗುಣಗಳು – ಸತ್ತ್ವ, ರಜಸ್ಸು, ತಮಸ್ಸು

2. ತ್ರಿಕಾಲಗಳು – ಭೂತ, ವರ್ತಮಾನ, ಭವಿಷ್ಯತ್
3. ತ್ರಿಲೋಕಗಳು – ದೇವಲೋಕ, ಭೂಲೋಕ, ಪಾತಾಳಲೋಕ
4. ತ್ರಿಮೂರ್ತಿಗಳು – ಬ್ರಹ್ಮ, ವಿಷ್ಣು, ಮಹೇಶ್ವರ
5. ತ್ರೇತಾಗ್ನಿಗಳು – ಆಹವನೀಯ, ಗಾರ್ಹಪತ್ಯ, ದಕ್ಷಿಣಾಗ್ನಿ
6. ತ್ರಿತಾಪಗಳು – ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕ
7. ತ್ರಿವೇಣಿ – ಗಂಗಾ, ಯಮುನಾ, ಸರಸ್ವತೀ
8. ತ್ರಿದೋಷಗಳು – ಕಫ, ವಾತ, ಪಿತ್ತ
9. ತ್ರಿಪುಟಿ – ಜ್ಞಾನ, ಜ್ಞಾತೃ, ಜ್ಞೇಯ
10. ತ್ರಯೀ – ಋಗ್ವೇದ, ಯಜುರ್ವೇದ, ಸಾಮವೇದ

11. ಮೂರು ಅವಸ್ಥೆಗಳು – ಜಾಗೃತ್, ಸ್ವಪ್ನ, ಸುಷುಪ್ತಿ
12. ಮೂರು ಕರ್ಮಗಳು – ಪ್ರಾಚೀನ, ಪ್ರಾರಬ್ಧ, ಆಗಾಮಿ
13. ಮೂರು ಮಹಾಧನುಸ್ಸುಗಳು – ಮಾಹೇಂದ್ರ, ಗಾಂಢೀವ, ಶಾರ್ಙ್ಗ
14. ಮೂರು ವೈರಾಗ್ಯಗಳು – ಪುರಾಣ ವೈರಾಗ್ಯ, ಪ್ರಸೂತಿ ವೈರಾಗ್ಯ, ಸ್ಮಶಾನ ವೈರಾಗ್ಯ
15. ಬಾಳಿನ ಮೂರು ಅವಸ್ಥೆಗಳು – ಬಾಲ್ಯ, ಯೌವನ, ವೃದ್ಧಾಪ್ಯ
16. ಮೂರು ಋಣಗಳು – ದೇವಋಣ, ಪಿತೃಋಣ, ಋಷಿಋಣ
17. ಶಕ್ತಿತ್ರಯ – ಜ್ಞಾನಶಕ್ತಿ, ಕ್ರಿಯಾಶಕ್ತಿ, ಇಚ್ಛಾಶಕ್ತಿ
18. ಆಚಾರ್ಯತ್ರಯ – ಶಂಕರಾಚಾರ್ಯ, ರಾಮಾನುಜಾಚಾರ್ಯ, ಮಧ್ವಾಚಾರ್ಯ
19. ಆಗಮತ್ರಯ – ಶೈವ, ವೈಖಾನಸ, ಪಾಂಚರಾತ್ರ
20. ಮೂರು ಆಟಗಳು (ದೇವರ) – ಸೃಷ್ಟಿ, ಸ್ಥಿತಿ, ಲಯ






Leave a Reply