ಶ್ರೀ ಕ್ಷೇತ್ರ ಜಗನ್ನಾಥ ಪುರಿ

ಭಾರತದಲ್ಲಿ ನಾಲ್ಕು ಪ್ರಮುಖ ಪುಣ್ಯಧಾಮಗಳಿವೆ. ಭಗವಂತನು ನಾಲ್ಕು ಯುಗಗಳಲ್ಲಿ ಈ ನಾಲ್ಕು ಧಾಮಗಳಲ್ಲಿ ತನ್ನ ದಿವ್ಯ ಲೀಲೆಗಳನ್ನು ನಡೆಸಿರುವನು. ಸತ್ಯಯುಗದಲ್ಲಿ ಭಗವಂತನು ನಾರಾಯಣನಾಗಿ ಬದರೀಕ್ಷೇತ್ರದಲ್ಲಿ (ಬದ್ರೀನಾಥ) ಅವತರಿಸಿದನು.

ದ್ವಾಪರಯುಗದಲ್ಲಿ ದ್ವಾರಕಾನಾಥನಾಗಿಯೂ, ತ್ರೇತಾಯುಗದಲ್ಲಿ ಶ್ರೀರಾಮನಾಗಿ ರಾಮೇಶ್ವರ ಕ್ಷೇತ್ರದಲ್ಲಿಯೂ ತನ್ನ ಲೀಲೆಗಳನ್ನು ಮೆರೆದನು, ಕಲಿಯುಗದಲ್ಲಿ ಭಗವಂತನು ತನ್ನ ವಿಗ್ರಹರೂಪಧಾರಣೆ ಮಾಡಿ ಶ್ರೀ ಜಗನ್ನಾಥ ಕ್ಷೇತ್ರದಲ್ಲಿ ಅವತರಿಸಿದನು.

ಆದ್ದರಿಂದ ಜಗನ್ನಾಥಪುರಿ ಕ್ಷೇತ್ರವು ಕಲಿಯುಗದ ಅತ್ಯಂತ ಪ್ರಮುಖ ಧಾಮವಾಗಿದೆ. ಉಳಿದ ಮೂರು ಕ್ಷೇತ್ರಗಳನ್ನು ಸಂದರ್ಶಿಸಿ ಪುರಿ ಕ್ಷೇತ್ರಕ್ಕೆ ಭೇಟಿ ನೀಡಿದ ಹೊರತು ಯಾತ್ರೆಯು ಸಫಲವಾಗುವುದಿಲ್ಲ.

”ಭಗವಂತನ ಬದ್ರೀನಾಥದಲ್ಲಿ ಸ್ನಾನ ಮಾಡುತ್ತಾನೆ. ದ್ವಾರಕೆಯಲ್ಲಿ ಸಿಂಗಾರಗೊಳ್ಳುತ್ತಾನೆ, ಪುರಿಯಲ್ಲಿ ಊಟ ಮಾಡುತ್ತಾನೆ ಮತ್ತು ರಾಮೇಶ್ವರದಲ್ಲಿ ನಿದ್ರಿಸುತ್ತಾನೆ” ಎಂದು ಹೇಳಲಾಗುತ್ತದೆ. ಅದರಂತೆ, ಪುರೀಕ್ಷೇತ್ರವನ್ನು ಪ್ರಸಾದಕ್ಷೇತ್ರ’ ಎಂದೂ ಕರೆಯಲಾಗುತ್ತದೆ.

ಜಗನ್ನಾಥ ಕ್ಷೇತ್ರದ ವಿವಿಧ ಹೆಸರುಗಳು

ಪುರಿಧಾಮ:

ಪುರಿ ಎಂದರೆ ಆಶ್ರಯ ನೀಡುವ ನೆಲೆ. ಭಗವಾನ್ ಜಗನ್ನಾಥನು ಪರಮಪುರುಷ, ದೇವೋತ್ತಮ ಪರಮ ಪುರುಷನು ನೆಲೆಸಿರುವ ಸ್ಥಳವೇ ಪುರಿಧಾಮ.

ಪುರುಷೋತ್ತಮ ಕ್ಷೇತ್ರ:

ಶ್ರೀಜಗನ್ನಾಥನು ಪುರುಷೋತ್ತಮನಾಗಿರುವುದರಿಂದ ಅವನು ನೆಲೆಸಿರುವ ಕ್ಷೇತ್ರವನ್ನು “ಪುರುಷೋತ್ತಮ ಕ್ಷೇತ್ರ” ಎಂದೂ ಕರೆಯಲಾಗುತ್ತದೆ. ಇದು ಭಗವಂತನ ಅತ್ಯಂತ ಪ್ರೀತಿಪಾತ್ರ ಸ್ಥಳವಾಗಿರುವುದರಿಂದ ಶ್ರೀಕ್ಷೇತ್ರಕ್ಕೂ ಭಗವಂತನಿಗೂ ಭೇದವಿಲ್ಲ ಎಂದೂ ತಿಳಿಯಬೇಕು.

ಭೂಸ್ಟರ್ಗ:

ಸಾಕ್ಷಾತ್ ಭಗವಂತನ ಇರುವಿಕೆಯಿಂದ ಜಗನ್ನಾಥ ಕ್ಷೇತ್ರವು ಭೂಮಿಯ ಮೇಲಿನ ಸ್ವರ್ಗ ಎನಿಸಿದೆ.

ಶಂಖಕ್ಷೇತ್ರ:

ಪುರಿ ಕ್ಷೇತ್ರವು ಭೌಗೋಳಿಕವಾಗಿ ಶಂಖಾಕೃತಿಯಲ್ಲಿದೆ. ಒರಿಸ್ಸಾ ರಾಜ್ಯವು ನಾಲ್ಕು ಕ್ಷೇತ್ರಗಳಾಗಿ ವಿಭಜಿತವಾಗಿದ್ದು, ಪ್ರತಿಯೊಂದು ಕ್ಷೇತ್ರವೂ ಭಗವಂತನ ವಿವಿಧ ಆಯುಧಗಳ ಹೆಸರನ್ನು (ಶಂಖ, ಚಕ್ರ, ಗದಾ, ಪದ್ಮ) ಹೊತ್ತಿದೆ. ಪುರಿಯು ಶಂಖ ಕ್ಷೇತ್ರವಾಗಿದ್ದರೆ, ಭುವನೇಶ್ವರ, ಜಜ್‌ ಪುರ ಮತ್ತು ಕೊನಾರ್ಕ್‌ಗಳು ಕ್ರಮವಾಗಿ ಚಕ್ರ, ಗದಾ, ಪದ್ಮ ಕ್ಷೇತ್ರಗಳಾಗಿವೆ.

ನರಸಿಂಹ ಕ್ಷೇತ್ರ:

ಸ್ಕಾಂದ ಪುರಾಣದಲ್ಲಿ ಪುರಿಕ್ಷೇತ್ರವನ್ನು ನರಸಿಂಹಕ್ಷೇತ್ರ ಎಂದು ಕರೆಯಲಾಗಿದೆ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi