ಭಾಗವತದ ಪಾತ್ರ ಪರಿಚಯ : ಮಾನಿನಿಯರು
(ಆಧಾರ – ಶ್ರೀ ಶ್ರೀಮದ್ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಭಾವಾರ್ಥಗಳು, ಭಾಗವತ; ಪ್ರಥಮ ಸ್ಕಂಧ; 13ನೇ ಅಧ್ಯಾಯ)
ವಸುದೇವನ ಪುತ್ರಿ; ಭಗವಾನ್ ಶ್ರೀಕೃಷ್ಣನ ಸೋದರಿ. ಅವಳು ವಸುದೇವನ ಪ್ರೀತಿಯ ಮಗಳು ಮಾತ್ರವಲ್ಲ, ಕೃಷ್ಣ ಬಲದೇವರ ಪ್ರೀತಿಯ ತಂಗಿಯೂ ಆಗಿದ್ದಳು.

ಪುರಿಯ ಪ್ರಸಿದ್ದ ಜಗನ್ನಾಥ ಮಂದಿರದಲ್ಲಿ ಈ ಸೋದರರ ಮತ್ತು ಸೋದರಿಯ ಪ್ರತಿಷ್ಠಾಪನೆಯಾಗಿದೆ. ಈಗಲೂ ದಿನನಿತ್ಯವೂ ಸಾವಿರಾರು ಯಾತ್ರಿಕರು ಈ ಮಂದಿರವನ್ನು ಸಂದರ್ಶಿಸುತ್ತಾರೆ.
ಸೂರ್ಯಗ್ರಹಣವೊಂದರ ಸಂದರ್ಭದಲ್ಲಿ ಕುರುಕ್ಷೇತ್ರಕ್ಕೆ ಭಗವಂತ ಭೇಟಿ ನೀಡಿದ್ದರ ಹಾಗೂ ತರುವಾಯ ವೃಂದಾವನ ನಿವಾಸಿಗಳನ್ನು ಭೇಟಿಮಾಡಿದ್ದರ ನೆನಪಿಗಾಗಿ ಈ ದೇವಸ್ಥಾನ ನಿರ್ಮಾಣವಾಗಿದೆ. ಈ ಸಂದರ್ಭದ ರಾಧಾಕೃಷ್ಣರ ಮಿಲನದ ಕತೆ ಎದೆಕರಗಿಸುವಂತಿದೆ.
ಪೂಜ್ಯರಾದ ಶ್ರೀ ಚೈತನ್ಯರು ರಾಧಾರಾಣಿಯ ಭಾವಾವೇಶದಲ್ಲಿ ಜಗನ್ನಾಥ ಪುರಿಯ ಭಗವಾನ್ ಶ್ರೀಕೃಷ್ಣನಿಗಾಗಿ ಸದಾ ಪರಿತಪಿಸುತ್ತಿದ್ದರು.

ಅರ್ಜುನನು ದ್ವಾರಕೆಯಲ್ಲಿದ್ದಾಗ, ಸುಭದ್ರೆಯನ್ನು ತನ್ನ ರಾಣಿಯನ್ನಾಗಿಸಿಕೊಳ್ಳಲು ಬಯಸಿದನು. ಭಗವಾನ್ ಶ್ರೀಕೃಷ್ಣನಲ್ಲಿ ಅವನು ತನ್ನ ಬಯಕೆಯನ್ನು ತೋಡಿಕೊಂಡನು. ತನ್ನ ಅಣ್ಣ ಶ್ರೀಬಲದೇವ ಅವಳ ಮದುವೆಯನ್ನು ಬೇರೆಲ್ಲೋ ಮಾಡಲಿರುವನೆಂದು ಶ್ರೀಕೃಷ್ಣನು ತಿಳಿದಿದ್ದನು.
ಅದಕ್ಕಾಗಿಯೇ ಭಗವಂತನು ಬಲದೇವನ ಏರ್ಪಾಡಿಗೆ ವಿರುದ್ಧವಾಗಿ ಹೋಗುವ ಧೈರ್ಯಮಾಡಲಿಲ್ಲ. ಸುಭದ್ರೆಯನ್ನು ಅಪಹರಿಸುವಂತೆ ಅರ್ಜುನನಿಗೆ ಭಗವಂತ ಸಲಹೆ ಇತ್ತನು.
ಆದ್ದರಿಂದ, ಅವರೆಲ್ಲರೂ ರೈವತ ಪರ್ವತದಲ್ಲಿ ಮೋಜಿನ ಪ್ರವಾಸದಲ್ಲಿದ್ದಾಗ, ಶ್ರೀಕೃಷ್ಣನ ಯೋಜನೆಯ ಪ್ರಕಾರ ಅರ್ಜುನನಿಗೆ ಸುಭದ್ರೆಯನ್ನು ಅವಹರಿಸಲು ಸಾಧ್ಯವಾಯಿತು.

ಶ್ರೀ ಬಲದೇವನು ಅರ್ಜುನನ ಮೇಲೆ ತುಂಬ ಸಿಟ್ಟಿಗೆದ್ದನು; ಆದರೆ ಅರ್ಜುನನನ್ನು ಕ್ಷಮಿಸುವಂತೆ ಭಗವಾನ್ ಕೃಷ್ಣನು ತನ್ನ ಅಣ್ಣನನ್ನು ಅಂಗಲಾಚಿ ಬೇಡಿಕೊಂಡನು.
ಆ ಬಳಿಕ ಸುಭದ್ರೆಯನ್ನು ಅರ್ಜುನನಿಗೆ ವಿಧಿವತ್ತಾಗಿ ವಿವಾಹ ಮಾಡಿಕೊಡಲಾಯಿತು. ಸುಭದ್ರೆಯಲ್ಲಿ ಅಭಿಮನ್ಯುವು ಜನಿಸಿದನು. ಅಭಿಮನ್ಯುವಿನ ಅಕಾಲ ಮರಣದಿಂದ ಸುಭದ್ರೆ ತುಂಬ ದುಃಖಿತಳಾದಳು.
ಆದರೆ ಅವಳು ಪರೀಕ್ಷಿತನ ಜನನದಿಂದ ತುಂಬ ಆನಂದಪಟ್ಟಳು; ಕ್ಲೇಶದಲ್ಲೂ ನೆಮ್ಮದಿ ಹೊಂದಿದಳು.






Leave a Reply