ನಾಸ್ತಿಕರು ಧರ್ಮವನ್ನು ಒಂದು ಆಸರೆ ಅಥವಾ ಊರುಗೋಲು ಎಂದು ಹೀಯಾಳಿಸಿದರೆ ಶ್ರದ್ಧೆ ಉಳ್ಳ ಬಹಳ ಜನರು ಕೋಪಗೊಳ್ಳಬಹುದು. ಬಹುಶಃ ಬದಲಿಗೆ ನಾವು ಒಪ್ಪಿಕೊಳ್ಳಬೇಕು.

ಒಂದು ದಿನ ನಾನು ಕೆಲಸ ಮಾಡುವ ಸ್ಥಳದಲ್ಲಿ ಲಿಫ್ಟ್‌ನಲ್ಲಿ ಹೋಗುತ್ತಿದ್ದೆ. ಆಗ ನನ್ನೊಡನೆ ಇದ್ದ ಪ್ರಯಾಣಿಕರತ್ತ ಗಮನ ಹರಿಸಿದೆ. ಅವರಲ್ಲಿ ಒಬ್ಬನು ಊರುಗೋಲುಗಳ ಸಹಾಯದಿಂದ ನಿಂತಿರುವುದನ್ನು ಕಂಡೆ. ಹಾಗೆ ಏಕೆಂದು ಕೇಳಿದೆ. ನೆಗೆತದಲ್ಲಿ ಕಾಲಿಗೆ ಗಾಯವಾಯಿತೆಂದು ಅವನು ಉತ್ತರಿಸಿದ. ಧರ್ಮ ಒಂದು ಊರುಗೋಲು ಎಂದು ಅನೇಕ ಜನರಿಗೆ ಇರುವ ಅಭಿಪ್ರಾಯದ ಮೇಲೆ ನಾನು ಬಿಂಬಿಸುತ್ತಿರುವುದನ್ನು ಪರಸ್ಪರ ಮಾತುಕತೆಯ ಅನಂತರ ಕಂಡುಕೊಂಡೆ. ನಿಜ, ಅವರು ಹೀಗೆ ಭಾವಿಸುತ್ತಾರೆ – ಧರ್ಮವು ದುರ್ಬಲರಿಗೆ, ಸಬಲರಿಗೆ ಕೃತಕ ನೆರವಿನ ಅಗತ್ಯವಿಲ್ಲ ಎನ್ನುವುದನ್ನು ಅದು ಸ್ವಲ್ಪಮಟ್ಟಿಗೆ ಸೂಚಿಸುತ್ತದೆ. ಆದರೆ ಲಿಫ್ಟಿನಲ್ಲಿ ನಾನು ಕಂಡ ವ್ಯಕ್ತಿಯು ಊರುಗೋಲನ್ನು ಬಳಸುತ್ತಿದ್ದರೂ ನಾನು ಯಾವುದೇ ರೀತಿಯಲ್ಲಿ ಅವನನ್ನು ಜುಗುಪ್ಸೆ ಅಥವಾ ಅಸಮಾಧಾನದಿಂದ ನೋಡಲಿಲ್ಲ. ಬದಲಿಗೆ, ಅದು ಅತ್ಯಂತ ವಿವೇಕಯುತವಾದ ಮತ್ತು ಸೂಕ್ತವಾದ ಕ್ರಮವೆಂದು ಯೋಚಿಸಿದೆ. ಈ ಗ್ರಹಿಕೆಯು ಧರ್ಮವನ್ನು ಕುರಿತ ಆರೋಪಗಳಿಗೆ ನನ್ನ ನಿರ್ದಿಷ್ಟ ಪ್ರತಿಕ್ರಿಯೆಯನ್ನು ಪುನರ್ ಪರಿಶೀಲಿಸುವಂತೆ ಮಾಡಿತು : ಆರೋಪಗಳನ್ನು ನಿರಾಕರಿಸುವ ಬದಲು ಬಹುಶಃ ನಾನು ಅದನ್ನು ಒಪ್ಪಿಕೊಳ್ಳಬಹುದು. ಮತ್ತು ಕೆಲ ಸಂದರ್ಭಗಳಲ್ಲಿ ಡಾಕ್ಟರ್ ಸಲಹೆ ಮಾಡಿದ ಅದೇ ವಸ್ತು ಅತಿ ಸೂಕ್ತವಾದುದು ಎನ್ನಬಹುದು.
ಹಾಗಾದರೆ ಯಾರಿಗೆ ಊರುಗೋಲಿನ ಅಗತ್ಯವಿದೆ? ತಮ್ಮಷ್ಟಕ್ಕೆ ತಾವು ಕಾರ್ಯ ನಿರ್ವಹಿಸಿಕೊಳ್ಳಲಾರದಷ್ಟು ಗಾಯಗೊಂಡಿರುವವರಿಗೆ ಹೆಚ್ಚೂ ಕಮ್ಮಿ ಊರುಗೋಲಿನ ಅಗತ್ಯವಿದೆ. ಅವರು ತಮ್ಮ ಸಹಜ ಕ್ರಿಯೆಗೆ ಮರಳುವವರೆಗೂ ಅವರಿಗೆ ತಾತ್ಕಾಲಿಕವಾಗಿ ನೆರವಿನ ಅಗತ್ಯವಿರುತ್ತದೆ. ದೈಹಿಕ ಊರುಗೋಲಿನ ವಿಷಯದಲ್ಲಿ ಹೇಳುವುದಾದರೆ, ಬಿದ್ದ ಅಥವಾ ಯಾವುದೋ ಪ್ರಭಾವದಿಂದ ಕಾಲಿಗೆ ಧಕ್ಕೆಯಾಗಿ ಅಥವಾ ತೊಂದರೆಯಾಗಿ ಗಾಯವಾಗಿರುತ್ತದೆ. ಕಾಲಿನ ಗಾಯ ಗುಣವಾಗುವವರೆಗೂ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಊರುಗೋಲು ನೆರವಾಗುತ್ತದೆ. ಆದರೆ ರೂಪಕವಾಗಿ ಬಳಸುವ ಆಸರೆಯ, ಊರುಗೋಲಿನ ವಿಷಯವೇನು? ಅದಕ್ಕೆ ಅನಿವಾರ್ಯವಾದ ಗಾಯಗಳೇನು? ನಮಗೆ ಅದು ಏನು ಸಹಾಯ ಮಾಡುತ್ತದೆ? ನಾನು ಹಿಂದಿರುಗುವ ಆರೋಗ್ಯಪೂರ್ಣ ಸ್ಥಿತಿ ಏನು? ಈ ಪ್ರಶ್ನೆಗಳನ್ನು ಒಂದೊಂದಾಗಿ ಪರಿಶೀಲಿಸೋಣ.
ಎಂತಹ ಗಾಯ?
ಆಂತರಿಕವಾಗಿಯೂ ಹಾಗೇಯೇ ಇರುತ್ತೇವೆ ಎಂದು ಅರ್ಥವಲ್ಲ. ವೈದಿಕ ಗ್ರಂಥಗಳು ನಮ್ಮ ಪ್ರಜ್ಞೆ ಸರಿಯಾಗಿಲ್ಲ ಎಂದು ಬೋಧಿಸುತ್ತವೆ. ನಾವು ಒಮ್ಮೆ ಭಗವಂತನ ಸಾಮ್ರಾಜ್ಯದಲ್ಲಿ ಪರಮ ತೃಪ್ತರಾಗಿ, ಆದರೆ ಅವನ ಅಧೀನ ಸಹಚರರಾಗಿ ಸುಖ ಸಂತೋಷದಿಂದ ಇದ್ದೆವು. ಯಾವುದೇ ಕಾರಣವಿರಲಿ, ಈ ಅವಲಂಬನೆಯ ಸ್ಥಾನವು ನಮಗೆ ಅರೋಚಕವೆನಿಸಿದಾಗ ಕಿರಿ ದೇವರಾಗುವ ಗುರಿಯನ್ನು ಮುಟ್ಟುವ ಪ್ರಯತ್ನವಾಗಿ ನಾವು ಲೌಕಿಕ ಲೋಕವನ್ನು ಪ್ರವೇಶಿಸಿದೆವು. ಆದರೆ ಇಲ್ಲಿ, ವಸ್ತುವಿನೊಂದಿಗೆ ಗುರುತಿಸಿಕೊಳ್ಳುವ ನಮ್ಮ ಗುಣದಿಂದಾಗಿ ನಾವು ಕಾಮ, ಕ್ರೋಧ, ಲೋಭ, ಹಮ್ಮು, ಅಸೂಯೆ, ಭ್ರಮೆಯಂತಹ ಎಲ್ಲ ದುರ್ಗುಣಗಳಿಂದ ಭ್ರಷ್ಟರಾಗಿದ್ದೇವೆ ಮತ್ತು ವೃದ್ಧಾಪ್ಯ, ರೋಗ, ಸಾವಿನಂತಹ ಎಲ್ಲ ಮಿತಿಗಳಿಗೂ ಒಳಪಟ್ಟಿದ್ದೇವೆ. ಇವ್ಯಾವೂ ನಮಗೆ ಅಲ್ಲಿ, ಭಗವದ್ಧಾಮದಲ್ಲಿ ಗೊತ್ತಿರಲಿಲ್ಲ. ಈ ರೀತಿ ಸ್ವಯಂ ಕೇಂದ್ರಿತ ಈರ್ಷ್ಯೆ ಮತ್ತು ಅದರ ಪರಿಣಾಮವಾಗಿ ಉಂಟಾಗುವ ಬೆಳವಣಿಗೆಗಳಿಂದಾಗಿ ನಿಜವಾಗಿಯೂ ನಾವು, ಮನುಷ್ಯರು ಅಂಗವಿಕಲರು. ಕೊನೆಪಕ್ಷ ನಮ್ಮ ಮೂಲ ಭವ್ಯವಾದ ಸ್ಥಾನಕ್ಕೆ ಹೋಲಿಸಿದರೆ ಇದು ಸತ್ಯ. ಭಗವಂತನನ್ನು ಪ್ರೀತಿಸುವ ನಮ್ಮ ಸಾಮರ್ಥ್ಯವನ್ನು ನಾವು ಮುರಿದುಹಾಕಿದ್ದೇವೆ.
ನೆರವಿನೊಂದಿಗೆ ನಡೆ
ಹಾಗಾದರೆ ಧರ್ಮದ ಕೊಡುಗೆ ಏನು? ಧರ್ಮ ಗ್ರಂಥಗಳ ನೀತಿ ನಿಯಮಗಳು ನಾವು ಇನ್ನಷ್ಟು ನೋವು ಅನುಭವಿಸುವುದರಿಂದ ನಮ್ಮನ್ನು ಕಾಪಾಡುತ್ತದೆ. ಮತ್ತು ದೇವೋತ್ತಮ ಪರಮ ಪುರುಷನಿಗೆ ಸೇವೆ ಸಲ್ಲಿಸುವ ನಮ್ಮ ಸಾಮಾನ್ಯ ಕ್ರಿಯೆಯನ್ನು ಕ್ರಮೇಣ ಪುನರಾರಂಭಿಸಲು ನೆರವಾಗುತ್ತದೆ. ಅವುಗಳನ್ನು ಅನುಸರಿಸುವುದು ಕೆಲವೊಮ್ಮೆ ಬಲಾತ್ಕಾರ, ಕೃತಕ ಅಥವಾ ತೊಂದರೆ ಎನ್ನಿಸಬಹುದು. ಆದರೆ ಗಾಯಗೊಂಡ ವ್ಯಕ್ತಿ ಇನ್ನೇನು ತಾನೇ ನಿರೀಕ್ಷಿಸುವುದು ಸಾಧ್ಯ? ದಿನ ನಿತ್ಯದ ಕೆಲಸವೇ ಸವಾಲಾಗುವುದು ಗಾಯದ ಲಕ್ಷಣವಾಗಿದೆ. ಉದಾಹರಣೆಗೆ, ಅಪಘಾತದ ಅನಂತರ ಮೊದಲಬಾರಿಗೆ ನಡೆಯುವ ಜನರ ಬಗೆಗೆ ಯೋಚಿಸಿ. ಶ್ರಮವೇ ಇಲ್ಲದ, ಸುಲಭವಾದ ಚಟುವಟಿಕೆಯು ದಿಢೀರನೆ ಅಸಹಜ ಮತ್ತು ಮುಜುಗರವಾಗಿಬಿಡುತ್ತದೆ. ಆದರೆ ಊರುಗೋಲು ಕೊನೆಪಕ್ಷ ಅವರು ಪುನಃ ನಡೆಯುವಂತೆ ಮಾಡುತ್ತದೆ. ಅದೇ ರೀತಿ, ಧಾರ್ಮಿಕ ಆಚರಣೆಗಳು ನಮ್ಮನ್ನು ಪುನಃ ಪ್ರೀತಿಸುವಂತೆ ಮಾಡುತ್ತವೆ. ಶ್ರೀಲ ರೂಪ ಗೋಸ್ವಾಮಿ ಅವರು ಬೋಧಿಸುವಂತೆ ಪ್ರಾರ್ಥನೆ, ತನ್ನ ಸೇವಕರು ಮತ್ತು ಭಕ್ತರೊಂದಿಗೆ ಭಗವಂತನ ವ್ಯವಹಾರವನ್ನು ಕುರಿತಂತೆ ಓದುವ ಹಾಗೂ ದೈವೀ ತತ್ತ್ವ ಜ್ಞಾನದ ವಿಷಯಗಳ ಬಗೆಗೆ ಚರ್ಚಿಸುವಂತಹ ಸಕಾರಾತ್ಮಕ ಚಟುವಟಿಕೆಗಳು ಭಗವಂತನಲ್ಲಿ ನಿರಂತರವಾಗಿ ತಲ್ಲೀನವಾಗುವ ನಮ್ಮ ಮೂಲ ಸ್ಥಿತಿಯನ್ನು ಪುನಃ ಸ್ಥಾಪಿಸಿಕೊಳ್ಳಲು ನೆರವಾಗುತ್ತವೆ.

ಈ ಅಂಶವನ್ನು ವಿವರಿಸಲು ಶ್ರೀಲ ಪ್ರಭುಪಾದರು ಒಮ್ಮೆ ಭಿನ್ನವಾದ, ಆದರೆ ಅಷ್ಟೇ ಸೂಕ್ತವಾದ ವಿವರ ನೀಡಿದರು :
ಕೆಲವು ಬಾರಿ ಕಾರಿಗೆ ತಡೆಯಾಗುತ್ತದೆ. ಆದರೆ ಯಾರೋ ಅದನ್ನು ತಳ್ಳುತ್ತಾರೆ. ನಮಗೆ ಈ ಅನುಭವವಾಗಿದೆ. ಅದನ್ನು ಏನೆಂದು ಕರೆಯುವರು? ಚಲಿಸದಂತಾಯಿತೆ? ಆಗ ನೀವು ಕೆಳಗಿಳಿಯುವಿರಿ ಮತ್ತು ಕಾರನ್ನು ತಳ್ಳುವಿರಿ ಮತ್ತು ಅದು ಚಲಿಸುತ್ತದೆ. ಅದೇ ರೀತಿ ಭಕ್ತಿರಸವು ಪ್ರತಿಯೊಬ್ಬರ ಹೃದಯದಲ್ಲಿಯೂ ಇದೆ. ನಿತ್ಯ ಸಿದ್ಧ ಕೃಷ್ಣ ಭಕ್ತಿ. ಏಕೆಂದರೆ ನಾವು ಕೃಷ್ಣನ ವಿಭಿನ್ನಾಂಶ… ಆದುದರಿಂದ ವಾಸ್ತವವೆಂದರೆ ನಮ್ಮಲ್ಲಿ ಕೃಷ್ಣನಿಗಾಗಿ ಭಕ್ತಿ ಇದೆ. ಅದು ನಿಜ. ಆದರೆ ಹೇಗೋ ಏನೋ ನಾವು ಅಗಲಿದ್ದೇವೆ ಮತ್ತು ನಾವು ಮರೆತಿದ್ದೇವೆ. ಆದುದರಿಂದ ಈ ನಿಯಂತ್ರಣ ತತ್ತ್ವದಿಂದ, ಆಧ್ಯಾತ್ಮಿಕ ಗುರುವಿನ ಆದೇಶದಿಂದ, ಶಾಸ್ತ್ರಗಳ ಆದೇಶದಿಂದ ನಾವು ಧಾರ್ಮಿಕ ಸೇವೆಯನ್ನು ಆರಂಭಿಸುತ್ತೇವೆ… ನಮ್ಮ ವಿದ್ಯಾರ್ಥಿಗಳು ಇಲ್ಲಿ ಮಾಡುತ್ತಿರುವಂತೆ. ಅವರು ಆರತಿಯನ್ನು ಅರ್ಪಿಸುತ್ತಿದ್ದಾರೆ. ಅವರು ವಸ್ತ್ರವನ್ನು ಅರ್ಪಿಸುತ್ತಿದ್ದಾರೆ, ಅವರು ಹಾರವನ್ನು ನೀಡುತ್ತಿದ್ದಾರೆ. ಇವು ಅರ್ಚನೆಯ ವಸ್ತುಗಳು (ವಿಗ್ರಹ ಆರಾಧನೆ) – ಅವನನ್ನು ಕುರಿತು ಕೇಳುವುದು, ಅವನನ್ನು ಕುರಿತು ಜಪಿಸುವುದು. ಈ ಭಕ್ತಿಸೇವೆಯು ತಳ್ಳುವ ವಿಧಾನ. ಶಕ್ತಿ ಬಂದ ಕೂಡಲೇ ಸ್ವಯಂ ಚಾಲನೆ. ಇನ್ನು ತಳ್ಳಬೇಕಾಗಿಲ್ಲ. ಈ ತಳ್ಳುವ ವಿಧಾನ ಅಗತ್ಯವಿದೆ. (ಭಕ್ತಿ ರಸಾಮೃತ ಸಿಂಧು ಕುರಿತು ಉಪನ್ಯಾಸ, ಡಿಸೆಂಬರ್ 28, 1972, ಮುಂಬಯಿ).
ನದಿಗಳು ಸಾಗರದತ್ತ ಹರಿಯುವಂತೆ ಆಧ್ಯಾತ್ಮಿಕ ಲೋಕದಲ್ಲಿ ನಮ್ಮ ಪ್ರೇಮವು ಭಗವಂತನತ್ತ ನಿರಂತರವಾಗಿ ಮತ್ತು ಸ್ವಯಂ ಪ್ರೇರಿತವಾಗಿ ಹರಿಯುತ್ತದೆ. ಆದರೆ ಇಲ್ಲಿ ನಾವು ಆ ಸ್ವಾಭಾವಿಕ ಒಲವನ್ನು ಕಳೆದುಕೊಂಡುಬಿಟ್ಟಿದ್ದೇವೆ ಮತ್ತು ಸ್ಥಗಿತಗೊಂಡಿರುವ ನಮ್ಮ ಹೃದಯಗಳು ಚಿಮ್ಮಿ ಪುನರಾರಂಭಗೊಳ್ಳಲು ಧರ್ಮವನ್ನು ಕುರಿತಂತೆ ಅನೇಕ ರೀತಿಯ ಕಟ್ಟಳೆ ಮತ್ತು ನಿಷೇಧಗಳು ಅಗತ್ಯ.
ನಾವು ಪೂರ್ಣವಾಗಿ ಚೇತರಿಸಿಕೊಂಡ ಮೇಲೆ ಏನು? ಏನಾದರಾಗಲಿ, ಊರುಗೋಲುಗಳು ತಾತ್ಕಾಲಿಕ ಮತ್ತು ದಿಟವಾಗಿ ಅಂತಿಮವಾಗಿ ಬಿಟ್ಟುಬಿಡುವಂಥದ್ದು. ಅದೇ ರೀತಿ ಧರ್ಮದ ಬಗೆಗೂ ಹೇಳಬಹುದೇ? ಉತ್ತರ (ಬಹುಶಃ ಆಶ್ಚರ್ಯವೆನ್ನಿಸಬಹುದು) ಹೌದು. ಒಮ್ಮೆಲೆ ಗಾಯಗೊಂಡ ಕಾಲು ಗುಣಮುಖವಾದ ಮೇಲೆ, ಭೌತಿಕ ಊರುಗೋಲುಗಳು ಅನಗತ್ಯವಾಗುತ್ತವೆ. ಅದೇ ರೀತಿ ನಮ್ಮ ಹೃದಯಗಳು ಗುಣಮುಖವಾದಾಗ ಧಾರ್ಮಿಕ ವಿಧಿ ವಿಧಾನಗಳ ರೂಪಕವಾದ ಆಸರೆಗಳು (ಊರುಗೋಲು) ಹಿಂದಕ್ಕೆ ಉಳಿಯುತ್ತವೆ. ವೈಷ್ಣವ ತತ್ತ್ವದಲ್ಲಿ, ವೈಧಿ ಭಕ್ತಿ, ನಿಯಂತ್ರಣಗಳಂತೆ ಭಕ್ತಿಸೇವೆ ಮತ್ತು ಪ್ರೇಮ ಭಕ್ತಿ, ಭಗವಂತನಲ್ಲಿ ಶುದ್ಧ ಪ್ರೇಮದ ಭಕ್ತಿಸೇವೆ ನಡುವಣ ವ್ಯತ್ಯಾಸದಲ್ಲಿ ಈ ಪ್ರಗತಿಯನ್ನು ಸೆರೆಹಿಡಿಯಲಾಗಿದೆ. ಕೊನೆಯಲ್ಲಿ ಸೂಚಿಸಿರುವ ಆರೋಗ್ಯಪೂರ್ಣ ಮತ್ತು ಸಂಪೂರ್ಣ ಪುನರ್ ಸ್ಥಾಪಿತ ಸ್ಥಿತಿಯಲ್ಲಿ ನಾವು ಈ ಜೀವಿತಾವಧಿಯಲ್ಲಿ ಭಗವಂತನ ಬಗೆಗೆ ಸ್ವಯಂಪ್ರೇರಿತ ಪ್ರೀತಿಯಲ್ಲಿ ಸೇವೆ ಸಲ್ಲಿಸುತ್ತೇವೆ ಮತ್ತು ಮುಂದಿನದರಲ್ಲಿ ಅವನ ಬಳಿಗೆ ಹಿಂದಿರುಗುತ್ತೇವೆ. ನಮಗೆ ಇನ್ನು ಯಾವುದೇ ಹೊರಗಿನ ನೆರವು ಅಥವಾ ಪ್ರೇರಣೆ ಅಗತ್ಯವಿಲ್ಲ.
ನಮ್ಮ ಅಗತ್ಯವನ್ನು ಸ್ವೀಕರಿಸುವುದು
ಆದರೂ ಭಕ್ತಿಯ ಅತ್ಯುನ್ನತ ಹಂತದಲ್ಲಿರುವವರ ಕಾರ್ಯಗಳು ಧಾರ್ಮಿಕ ನಿಯಮಗಳನ್ನು ಪಾಲಿಸುತ್ತವೆ. ಒಂದು ವಿಷಯವೆಂದರೆ, “ಕೃಷ್ಣಪ್ರಜ್ಞೆಯಲ್ಲಿ ವಿದ್ವಾಂಸನಾದ ವ್ಯಕ್ತಿಯು” ಆಧ್ಯಾತ್ಮಿಕ ಜೀವನದಲ್ಲಿ ಕಡಮೆ ಬೆಳವಣಿಗೆಯ ಹಂತದಲ್ಲಿರುವವರಿಗೆ ಸ್ವಯಂ ಉದಾಹರಣೆ ಮತ್ತು ಮಾದರಿಯಾಗುತ್ತಾನೆ. ಮತ್ತೊಂದು ವಿಷಯವೆಂದರೆ, ಉನ್ನತ ಭಾವನೆಗಳನ್ನು ವ್ಯಕ್ತಪಡಿಸಲು ಹೆಚ್ಚೂಕಮ್ಮಿ ಆಧ್ಯಾತ್ಮಿಕ ರೂಢಿಯಿಂದ ಪದಚ್ಯುತಗೊಳ್ಳುವ ಅಗತ್ಯವಿಲ್ಲ. ಆದರೆ ಮುಂದುವರಿದ ಭಕ್ತಿ ಯೋಗಿಗಳು ತಮ್ಮ ಹೃದಯ ಮತ್ತು ಮನಸ್ಸನ್ನು ವಸ್ತುಗಳಿಂದ ದಿವ್ಯದತ್ತ ಪುನರ್ನಿರ್ದೇಶಿಸಲು ಇನ್ನು ಹೋರಾಟ ನಡೆಸಬೇಕಾಗಿಲ್ಲ. ಪರಿಣಾಮವಾಗಿ, ಅವರು ನಿಯಮಗಳ ಬಗೆಗೆ ಎಚ್ಚತ್ತಿರಬೇಕಾಗಿಲ್ಲ. ಬದಲಿಗೆ, ಪೂರ್ಣವಾಗಿ ಮತ್ತು ನೇರವಾಗಿ ಸ್ವತಃ ದೇವರ ಮೇಲೆಯೇ ಕೇಂದ್ರೀಕರಿಸಬಹುದು. ಫಲವಾಗಿ ಏನೇ ಆಗಲಿ ಅದು ಖಚಿತವಾಗಿ ಪೂರ್ಣ, ಶುಭಕರ ಮತ್ತು ಯಾವುದೇ ರೀತಿಯಲ್ಲಿ ಅಹಿತಕರವಲ್ಲ ಎನ್ನುವ ನಂಬಿಕೆಯ ಮೇಲೆ ಹಾಗೆ ಮಾಡಬಹುದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, “ಸೂಕ್ತ ಮನಸ್ಥಿತಿಯನ್ನು ಎಚ್ಚರಗೊಳ್ಳುವಂತೆ ಮಾಡಲು ಹೊಸದಾಗಿ ದೀಕ್ಷೆಪಡೆದವರು ಉದ್ದೇಶಪೂರ್ವಕವಾಗಿ ಸರಿಯಾದ ವರ್ತನೆಯನ್ನು ಅನುಸರಿಸುವರು. ಅದೇ ಪರಿಣತರು ಅದಾಗಲೇ ಸೂಕ್ತ ಮನಸ್ಥಿತಿಯನ್ನು ಪಡೆದಿರುವುದರಿಂದ ಸಹಜವಾಗಿ ಸರಿಯಾಗಿಯೇ ವರ್ತಿಸುವರು.”
ಹೋಲಿಕೆ
ಆದುದರಿಂದ ಅದರ ಬಳಕೆಯನ್ನು ಅಗತ್ಯವಾಗಿಸುವುದು ಏನು, ಅದು ಯಾವ ಉದ್ದೇಶವನ್ನು ಪೂರೈಸುತ್ತದೆ ಮತ್ತು ಅದನ್ನು ಯಾವಾಗ ಬಿಟ್ಟುಬಿಡಬಹುದು ಎನ್ನುವ ಸ್ಪಷ್ಟನೆಯಲ್ಲಿ, ನಿಖರತೆಯಲ್ಲಿ ಧರ್ಮವನ್ನು ಊರುಗೋಲಿಗೆ ಹೋಲಿಸಬಹುದು. ಯಾವುದೋ ಅಪಾಯಕಾರಿ ದುರದೃಷ್ಟದಲ್ಲಿ ಭಾಗಿಯಾದವರಿಗೆ ತತ್‌ಪರಿಣಾಮದ ದೌರ್ಬಲ್ಯವನ್ನು ಎದುರಿಸಲು ಮತ್ತು ಪುನಃ ಆರೋಗ್ಯಕರ ಮತ್ತು ಸ್ವತಂತ್ರರಾಗಲು ಅವೆರಡೂ ಸಹಾಯ ಮಾಡುತ್ತವೆ. ಈ ಸ್ಪಷ್ಟವಾದ ಬಳಕೆ ಇದ್ದರೂ ಕೂಡ, ಧರ್ಮಗ್ರಂಥಗಳ ನೀತಿ ನಿಯಮಗಳನ್ನು ಕಡೆಗಣಿಸಿದರೆ, ಏನು ಹೇಳುವುದು ಸಾಧ್ಯ? ಲಿಫ್ಟ್‌ನಲ್ಲಿ ನೋಡಿದ ವ್ಯಕ್ತಿಯು ತನ್ನ ಊರುಗೋಲುಗಳನ್ನು ಬದಿಗಿಟ್ಟು ತನ್ನ ಕಾಲುಗಳನ್ನು ಎಳೆದುಕೊಂಡು ಹೋದರೆ, ನಾನು ಏನು ಯೋಚಿಸಬೇಕು? ತಾನು ಶಕ್ತಿಶಾಲಿ ಮತ್ತು ಸ್ವಾವಲಂಬಿತ ಎಂದು ಅವನು ಹೇಳಿಕೊಳ್ಳಬಹುದು. ಆದರೆ ಅವನು ಹಠಮಾರಿ ಮತ್ತು ದೂರದೃಷ್ಟಿ ಇಲ್ಲದವನೆಂದು ಭಾವಿಸುವೆ. ಅದೂ ಅಲ್ಲದೆ, ಅವನ ದುಡುಕಿನ ಕ್ರಮವು ಅವನ ಗಾಯವನ್ನು ತೀವ್ರಗೊಳಿಸುತ್ತದೆ ಮತ್ತು ಉಪಶಮನವನ್ನು ವಿಳಂಬಗೊಳಿಸುತ್ತದೆ. ಅದೇ ರೀತಿ, ನಮ್ಮ ಪ್ರಸ್ತುತದ ಪತನ ಸ್ಥಿತಿಯನ್ನು ನಿರಾಕರಿಸುವುದರಿಂದ ಮತ್ತು ನಿಜವಾದ ಏಕೈಕ ಪರಿಹಾರವನ್ನು ತಿರಸ್ಕರಿಸುವುದರಿಂದ ನಮಗೆ ಅಗುವ ಲಾಭವಾದರೂ ಏನು? ಬರಿ ಸಂಕಷ್ಟದ ವಿಸ್ತರಣೆ ಮತ್ತು ಹತಾಶೆ ಮಾತ್ರ. ಧರ್ಮಗ್ರಂಥಗಳ ಮಾರ್ಗದರ್ಶನವನ್ನು ಅಹಂಕಾರ ಮತ್ತು ಅಪಕ್ವತೆಯಿಂದ ನಿರ್ಲಕ್ಷಿಸುವುದಕ್ಕಿಂತ ನಾವು ವಿನಮ್ರದಿಂದ ನೆರವಿನ ಅಗತ್ಯವನ್ನು ಒಪ್ಪಿಕೊಳ್ಳಬೇಕು ಮತ್ತು ಕೃಷ್ಣನ ಆದೇಶಗಳನ್ನು ಪಾಲಿಸಬೇಕು. ಎಲ್ಲಿಯವರೆಗೆ? ನಾವು ಶುದ್ಧ ಪ್ರೇಮದಿಂದ ಅವನೊಂದಿಗೆ ನಡೆಯುವವರೆಗೆ, ನರ್ತಿಸುವವರೆಗೆ.






Leave a Reply