-
ಮನೆಯಲ್ಲಿ ವಿಗ್ರಹಾರಾಧನೆ

ವಿಗ್ರಹಾರಾಧನೆ – ನಮ್ಮ ಕರ್ಮಗಳನ್ನು ಕೃಷ್ಣನಿಗೆ ಅರ್ಪಿಸುವ, ಕರ್ಮ ಯೋಗ ಆಚರಿಸುವ ಸರಳ ವಿಧಾನ. –ಗೌರಹರಿ ದಾಸ ನೀವು ಕೃಷ್ಣನ ಫೋಟೋವನ್ನು ಪೂಜಿಸುತ್ತೀರಾದರೆ ಅದಕ್ಕೆ ಗೋಡೆಯಲ್ಲಿರುವ ಗೂಡು ಅಥವಾ ಕೋಣೆಯ ಮೂಲೆಯಲ್ಲಿರುವ ಮೇಜು ಅಥವಾ ನಿಮ್ಮ ಪುಸ್ತಕಗಳನ್ನಿಡುವ ಷೆಲ್ಫ್‌ನ ಮೇಲ್ಭಾಗವಾದರೂ ಆದೀತು. ನಿಮ್ಮ ಮನೆಯಲ್ಲಿ ಅತಿಥಿಯನ್ನು ಒಂದು ಮೂಲೆಯಲ್ಲಿ ಕೂರಿಸಿ ನೀವು ಅವರನ್ನು ನಿರ್ಲಕ್ಷಿಸುವಂತಿಲ್ಲ. ಅತಿಥಿ “ದೈವ”ದ ಬಳಿ ಕುಳಿತುಕೊಳ್ಳಲು ನಿಮಗೂ ಒಂದು ಸ್ಥಳ ಮೀಸಲಿಡಬೇಕು. ನಿಮ್ಮ ಸ್ಥಳ ದೇವರಿಗೆ ಎದುರಾಗಿರಬೇಕು. ಆತನ ಮುಖ ನೋಡುತ್ತಾ ಆನಂದಿಸಲು
-
ಬಿಸಿ ಬಿಸಿ ಖಾರ ಪೊಂಗಲ್

ಇಸ್ಕಾನ್ ಅತಿಥಿ ಸತ್ಕಾರ, ಕೃಷ್ಣಪ್ರಸಾದದ ಬಗೆಯನ್ನು ಬಲ್ಲವರೇ ಬಲ್ಲರು. ಒಮ್ಮೆ ತಿಂದವರು ಮತ್ತೊಮ್ಮೆ ಮಗದೊಮ್ಮೆ ಬಯಸಿ ಬಯಸಿ, ನಾಲಗೆಯ ತಣಿಸಿಕೊಳ್ಳುವ ದಿವ್ಯ ಮಧುರ ರುಚಿ ಅದರಲ್ಲಿದೆ. ಗೌಡೀಯ ವೈಷ್ಣವ ಪರಂಪರೆಯ ಅಡುಗೆಗಳಲ್ಲದೆ, ಆಧುನಿಕ ಭಕ್ಷ ಭೋಜ್ಯಗಳೂ ಇಲ್ಲಿ ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಇಂತಹ ತಿಂಡಿ ತಿನಿಸುಗಳಲ್ಲಿ ಈರುಳ್ಳಿ- ಬೆಳ್ಳುಳ್ಳಿಗಳನ್ನು ಉಪಯೋಗಿಸುವುದಿಲ್ಲ. ಇಸ್ಕಾನ್‌ನ ಪಾಕತಜ್ಞರು, ವಿವಿಧ ರೀತಿಯ ಭೋಜ್ಯಗಳ – ವ್ಯಂಜನಗಳ – ತಿಂಡಿ-ತೀರ್ಥಗಳ ತಯಾರಿ ವಿಧಾನವನ್ನು ಭಕ್ತಿವೇದಾಂತ ದರ್ಶನದ ಓದುಗರಿಗೆ ಇಲ್ಲಿ ಬಡಿಸುತ್ತಾರೆ. ಈ ತಿಂಡಿಗಳ ರುಚಿ ಬರುವುದು
-
ಪುನರ್ಜನ್ಮ ಸತ್ಯ ಅಸತ್ಯ

-ಕೃಷ್ಣದಾಸ ‘ಪುನರ್ಜನ್ಮ’ ಎಂಬುದು ಬಹಳ ಚರ್ಚಿಸಲ್ಪಟ್ಟ ವಿಷಯ. ಇದರ ಪರಾಪರ ತತ್ತ್ವವೆತ್ತರು, ವಿಜ್ಞಾನಿಗಳು ವಾದ ಪ್ರತಿವಾದಗಳನ್ನು ಮಂಡಿಸಿದ್ದಾರೆ. ಜನಸಾಮಾನ್ಯರು ಪುನರ್ಜನ್ಮದ ಸತ್ಯವನ್ನು ಮರೆತು ಈ ದೇಹ ಮುಗಿದೊಡನೆ ಎಲ್ಲನಾಶವಾಗುತ್ತದೆ ಎಂಬ ತತ್ತ್ವವನ್ನೆ ನಂಬಿದ್ದಾರೆ. ನಾವು ರಾಸಾಯನಿಕ ಕ್ರಿಯೆಯಲ್ಲದೆ ಬೇರೇನಿಲ್ಲ ಮತ್ತು ಪ್ರಜ್ಞೆ ಎಂಬುದು ರಾಸಾಯನಿಕ ಕ್ರಿಯೆಯ ಉಪ ಉತ್ಪತ್ತಿಯಷ್ಟೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಇವುಗಳಿಗೆ ಸೂಕ್ತ ಉತ್ತರಗಳನ್ನು ನೀಡಲು ಪ್ರಶ್ನೋತ್ತರದ ಮೂಲಕ ಪುನರ್ಜನ್ಮದ ಬಗ್ಗೆ ಒಂದು ತರ್ಕಬದ್ಧ ಚರ್ಚೆಯನ್ನು ಇಲ್ಲಿ ನೀಡಲಾಗಿದೆ. ರವಿಶಂಕರ್ ಜನಿಸಿದ್ದು 1951 ರಲ್ಲಿ,
-
ದ್ರೋಣಪುತ್ರನಿಗೆ ಶಿಕ್ಷೆ

ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನಗಳ ಕದನದಲ್ಲಿ ಪಾಂಡವರು ವಿಜಯ ಸಾಧಿಸಿದರು. ದ್ರೋಣಾಚಾರ್ಯರ ಪುತ್ರನಾದ ಅಶ್ವತ್ಥಾಮನು ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಬಯಸಿ ಅವರನ್ನು ಕೊಲ್ಲಲು ಒಂದು ಹೇಯ ಕಾರ್ಯತಂತ್ರವನ್ನು ರೂಪಿಸಿದನು. ಪಾಂಡವರಿಗೆ ತಾರುಣ್ಯಕ್ಕೆ ಬಂದಿದ್ದ ಐವರನ್ನು ಪುತ್ರರು ಇದ್ದರು. ಆ ಐವರು ಪಾಂಡವರೇ ಎಂದು ಭ್ರಮಿಸಿದ ಅಶ್ವತ್ಥಾಮನು ಅವರೆಲ್ಲರ ತಲೆಗಳನ್ನು ಕೊಚ್ಚಿಹಾಕಿದನು. ನಿದ್ರಿಸುತ್ತಿದ್ದ ತನ್ನ ಐವರು ಪುತ್ರರು ಕೊಲೆಯಾದ ಸಂಗತಿಯನ್ನು ಕೇಳಿದಾಗ ದ್ರೌಪದಿಯು ಪುತ್ರಶೋಕದ ಯಾತನೆಯಿಂದ ಕಣ್ಣೀರು ಹರಿಸಿದಳು. ಅವಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಾ ಅರ್ಜುನನು, “ಹೇ ಕೋಮಲೆ,
-
ಗೋವಿನ ಬಾಲ ಹಿಡಿದ ಕುರುಡ

ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ, ಶ್ರೀಲ ಪ್ರಭುಪಾದರ ಗುರು, ಗೌಡಿಯ ಮಠದ ಸಂಸ್ಥಾಪಕ ಅವರು ಹೇಳಿದ ಕಥೆ. ಒಂದು ದಿನ ಕುರುಡ ತನ್ನ ಮಾವನ ಮನೆಗೆ ಹೋಗುತ್ತಿದ್ದ. ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು ಅದರ ಸಹಾಯದಿಂದ ಸಾಗುತ್ತಿದ್ದ. ಹೀಗೆ ಒಂದು ಹೊಲದ ಮೂಲಕ ಹಾದು ಹೋಗುವಾಗ ಆತನಿಗೆ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲಕ ಎದುರಾದ. “ಅಣ್ಣಾ, ನನಗೆ ಮಾವನ ಮನೆಗೆ ಹೋಗಲು ಸಹಾಯ ಮಾಡುವೆಯಾ?” ಎಂದು ಆತ ಗೋಪಾಲಕನನ್ನು ಕೇಳಿದ. “ನನಗೆ ಪುರುಸೊತ್ತಿಲ್ಲ. ನಾನು ಇಷ್ಟೊಂದು ಗೋವುಗಳನ್ನು ನೋಡಿಕೊಳ್ಳಬೇಕು.
-
ನಾರದಮುನಿ

ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. – ದಶಂ “ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಹಾಡಿ ಭಗವಂತನ ನಾಮಸ್ಮರಣೆಯ ಬಲವನ್ನು ದಾಸರು ಸಾರಿ ಹೇಳಿದ್ದಾರೆ. ಭಗವಂತನ ನಾಮೋಚ್ಛಾರದ ಪ್ರಭಾವವನ್ನು ಅದರಿಂದಾಗುವ ಆನಂದವನ್ನು ಅನವರತ ಅನುಭವಿಸಿ, ಜಗತ್ತಿನ ಎಲ್ಲೆಡೆ ಪ್ರಸಾರ ಮಾಡುವ ಮಹಾ ಮಹಿಮರೇ ಶ್ರೀ ನಾರದ ಮಹಾಮುನಿಗಳು, ನಾರದರನ್ನು ಗುರುಪರಂಪರೆಯಲ್ಲಿಟ್ಟು ಎಲ್ಲ
-
ಸಮಾಜ ವ್ಯವಸ್ಥೆಯಲ್ಲಿ ಗೋವಿನ ಪ್ರಾಮುಖ್ಯತೆ

-ಗೌರಹರಿ ದಾಸ ಎತ್ತು ಮತ್ತು ಹಸುಗಳು ನಿಮ್ಮ ತಂದೆ- ತಾಯಿಗಳಿದ್ದಂತೆ. ಅದು ಹೇಗೆ ಅವುಗಳನ್ನು ಕೊ೦ದು ತಿನ್ನುತ್ತೀರಿ? ಇದೆಂಥ ಧಾರ್ಮಿಕ ತತ್ತ್ವ? ಯಾವ ಧೈರ್ಯದ ಮೇಲೆ ಇಂಥ ಪಾಪ ಕೃತ್ಯ ಎಸಗುತ್ತೀರಿ? ಇದು ಚೈತನ್ಯ ಮಹಾಪ್ರಭುಗಳು ಮುಸ್ಲಿಂ ಖಾಜಿಯೊಬ್ಬನನ್ನು ಕುರಿತು ಕೇಳಿದ ಪ್ರಶ್ನೆ. ಈಗ ಮತ್ತೆ ಈ ಪ್ರಶ್ನೆ ಕೇಳಬೇಕಾದ ಕಾಲ ಬಂದಿದೆ! ನಮಗೆ ನಿತ್ಯ ಕುಡಿಯಲು ಹಸುವಿನ ಹಾಲು ಬೇಕು. ಉಳುಮೆ ಮಾಡಲು, ಗಾಡಿ ಎಳೆಯಲು ಎತ್ತುಗಳು ಬೇಕು. ನಮಗೆ ತಿನ್ನಲು ಕಾಳು ನೀಡುವವನೇ ತ೦ದೆ;
-
ಬ್ರಹ್ಮ

-ಸುನಿಧಿ ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. ಈ ಜಗದ ಸರ್ವೋಚ್ಚ ಆಡಳಿತಗಾರ. ಜಗತ್ತಿನ ಅತ್ಯಂತ ಶ್ರೇಷ್ಠ ಜೀವಿ. ಬ್ರಹ್ಮ ಎಂಬ ಪದದ ಅರ್ಥವೇ ಅದು ಎಲ್ಲವೂ ಯಾರಿಂದ ಸೃಷ್ಟಿಯಾಗಿದೆಯೋ ಅವನೇ ಬ್ರಹ್ಮ. ಹಾಗಾದರೆ ಬ್ರಹ್ಮನ ಸೃಷ್ಟಿ ಹೇಗಾಯಿತು? ಈ ಜಗತ್ತಿನ ಪ್ರಥಮ ಪುರುಷ ಕರ್ಣೋದಕಶಾಯಿ ವಿಷ್ಣು. ಆತನ ಚರ್ಮ ರೋಮಗಳಿಂದ ಅಸಂಖ್ಯಾತ ಬ್ರಹ್ಮಾಂಡಗಳು ಸೃಷ್ಟಿಯಾಗಿವೆ. ಪ್ರಥಮ
-
ಯಾರಿಗೂ ಬೇಡದ ಸಾವು

– ಸುನಿಧಿ ಇತ್ತೀಚೆಗೊಂದು ದಿನ ಸಂಜೆ ಟಿವಿಯಲ್ಲಿ ವಾರ್ತೆ ವೀಕ್ಷಿಸುತ್ತಿದ್ದೆ. ಮುಂಬಯಿಯಲ್ಲಿ ಬಾಂಬ್ ಸ್ಫೋಟಿಸಿ 50 ಮಂದಿ ಬಲಿ, ಸಾಲಬಾಧೆ ತಾಳದೇ ಒಂಬತ್ತು ರೈತರ ಆತ್ಮಹತ್ಯೆ, ಕೋಲಾರ ಬಳಿ ಟ್ರಾಕ್ಟರ್ ಅಪಘಾತಕ್ಕೀಡಾಗಿ ನಾಲ್ವರು ಸಾವು, ಇಸ್ರೇಲ್-ಪ್ಯಾಲಸ್ಟೀನ್ ಕಾಳಗ, ಸಾಹಿತಿ- ವಿಚಾರವಾದಿ ಎ.ಎನ್. ಮೂರ್ತಿರಾಯರಿಗೆ ಶ್ರದ್ಧಾಂಜಲಿ….. ಒ೦ದು ತಾಸಿನ ಸುದ್ದಿ ತು೦ಬಾ ಬರೀ ಸಾವು, ಕೊಲೆ, ಆತ್ಮಹತ್ಯೆ, ಯುದ್ಧಗಳದ್ದೇ ವರದಿ. ಸಾವಿನ ಸುದ್ದಿಯನ್ನು ಅತಿರ೦ಜಿತವಾಗಿ ತೋರಿಸುವುದೆ೦ದರೆ ಈ ಮಾಧ್ಯಮದವರಿಗೆ ಅಷ್ಟೊಂದು ಖುಷಿಯೆ? ಅಥವಾ ನಾವೇ ಈ ಸಾವಿನ ಸುದ್ದಿಗಳಿಗೆ
-
ವರವಾದ ಶಾಪ, ಪರೀಕ್ಷಿತನ ಕಥೆ

ಡಾ. ಬಿ.ಆರ್.ಸುಹಾಸ್ ದುರ್ಗಮವಾದ ದಟ್ಟ ಅರಣ್ಯ, ಮಟಮಟ ಮಧ್ಯಾಹ್ನದ ಪ್ರಖರವಾದ ಬಿಸಿಲು ಕೆಂಡದಂತೆ ಸುಡುತ್ತಿತ್ತು. ನೀರಿನ ಮುಖ ಕಾಣದ ಹೂಬಳ್ಳಿಗಳು ಸೊರಗಿ ಶುಷ್ಕವಾಗಿದ್ದವು. ದಾಹದಿ೦ದ ನಿತ್ರಾಣಗೊಂಡಿದ್ದ ಪಶುಪಕ್ಷಿಗಳು ಜಲಾಶಯಗಳನ್ನರಸುತ್ತಾ ದೂರ ಸಾಗಿದ್ದವು. ಎಲ್ಲೆಲ್ಲೂ ಸ್ಮಶಾನ ಮೌನ, ಮಹಾರಾಜನೊಬ್ಬ ಇ೦ಥ ಸಂದರ್ಭದಲ್ಲಿ ಏಕಾಂಗಿಯಾಗಿ ಬಿಲ್ಲುಬಾಣಗಳೊಂದಿಗೆ ಕುದುರೆಯನ್ನೇರಿ ಬೇಟೆಯನ್ನರಸಿ ಸಾಗಿದ್ದ. ಬೆಳಗಿನಿಂದಲೂ ಮೃಗಗಳನ್ನು ಹುಡುಕುತ್ತಾ ಅಲೆದಾಡಿ ಹಸಿವು, ಬಾಯಾರಿಕೆಗಳಿಂದ ಬಳಲಿ ಬೆಂಡಾಗಿದ್ದ. ಎಲ್ಲಿಯಾದರೂ ನೀರು ಸಿಗುವುದೇ ಎಂದು ಹುಡುಕಿದ. ಆಗ ಅವನಿಗೆ ಒ೦ದು ಋಷ್ಯಾಶ್ರಮ ಗೋಚರಿಸಿತು. ಆಶ್ರಮದಲ್ಲಿ ನೀರು ಸಿಗಬಹುದೆಂಬ
-
ಶ್ರೀಲ ಭಕ್ತಿ ವಿನೋದ ಠಾಕೂರ

-ಧನಂಜಯ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳದ ಸಂಶೋಧನೆ, ಅಲ್ಲೊಂದು ಭವ್ಯ ಮಂದಿರ ನಿರ್ಮಾಣ, ಕೃಷ್ಣ ಪ್ರಜ್ಞಾ ಆಂದೋಲನಕ್ಕೆ ಹೊಸ ಸ್ವರೂಪ ಚೈತನ್ಯ ವೇದಾ೦ತ ಸೂತ್ರ, ಕಲ್ಯಾಣ ಕಲ್ಪತರು ಸುಮಾರು 150 ಗ್ರಂಥಗಳ ರಚನೆ ಇತ್ಯಾದಿ ಶ್ರೀಲ ಭಕ್ತಿ ವಿನೋದ ಠಾಕೂರರ ಸಾಧನೆ. ಇವರು ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಂದೆ. ಶ್ರೀ ಚೈತನ್ಯ ಮಹಾಪ್ರಭುಗಳು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅವತಾರ. ಅವರು ಜನ್ಮತಳೆದ ಸ್ಥಳ ನವದ್ವೀಪ, ಈ ಕ್ಷೇತ್ರ ಎಲ್ಲಿದೆ ಎಂಬ ಬಗ್ಗೆಯೇ
-
ಆವಿರ್ಭಾವದ ದಿನ

-
ಹರೇ ಕೃಷ್ಣ ಮಹಾಮಂತ್ರ

– ಕೃಷ್ಣದಾಸ ಪ್ರತಿಯೊಬ್ಬ ಜೀವಿಯೂ ಪರಮ ಪುರುಷನೊಡನೆ ಆಪ್ತ ಸಂಬಂಧವನ್ನು ಹೊಂದಿದ್ದಾನೆ. ಆ ಸಂಬಂಧವೇ ಜೀವಿಯ ಮೂಲ ಸ್ವರೂಪ. ಈಗ ಅದನ್ನು ಮರೆತು ದೇಹ, ಕುಟು೦ಬ, ಜಾತಿ ಮೊದಲಾದ ಉಪಾಧಿಗಳೊಡನೆ ಗುರುತಿಸಿಕೊಂಡು ನರಳುತ್ತಿದ್ದಾನೆ. ಕನ್ನಡಿಯ ಮೇಲೆ ಕಲ್ಮಶವಿದ್ದಾಗ ಹೇಗೆ ಪ್ರತಿಬಿಂಬವು ಕಾಣುವುದಿಲ್ಲವೋ ಹಾಗೆಯೇ ಈ ಉಪಾಧಿಗಳು ನಮ್ಮ ಮೂಲ ಸ್ವರೂಪವನ್ನು ಮರೆಯುವಂತೆ ಮಾಡುತ್ತವೆ. ಕಲ್ಮಶವನ್ನು ಅನಾವರಣ ಮಾಡಿ ಐಹಿಕ ವರ್ತುಲದಿಂದ ಮುಕ್ತಗೊಳಿಸಿ ನಮ್ಮ ಮೂಲ ಸ್ವರೂಪ – ಧರ್ಮದಲ್ಲಿ ನೆಲೆಗೊಳಿಸುವುದೇ ವೇದ ಪುರಾಣಗಳ ಉದ್ದೇಶ. ಆ ಮೂಲ
-
ಧರ್ಮದ ನೆಲೆ

ಗೌರವಾನ್ವಿತ ಮಹನೀಯರೆ, ಕೃಷ್ಣಪ್ರಜ್ಞಾ ಚಳವಳಿಯನ್ನು ಕುರಿತು ಮಾತನಾಡಲು ನನ್ನಲ್ಲಿ ದಯೆ ತೋರಿ ನೀವು ನೀಡಿರುವ ಈ ಅವಕಾಶಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ವಿಶೇಷತಃ ಅಮೆರಿಕದ ಹಾಗೂ ಯೂರೋಪಿನ ನನ್ನ ಶಿಷ್ಯರು ನೀಡುತ್ತಿರುವ ನೆರವಿನಿಂದಾಗಿ ಪ್ರಸಕ್ತ ಕೃಷ್ಣಪ್ರಜ್ಞಾ ಆಂದೋಳನವು ಜಗತ್ತಿನಾದ್ಯಂತ ವ್ಯಾಪಕಾಗಿ ನಡೆದು ಬರುತ್ತಿದೆ. ಉತ್ತರ ಭಾರತದಲ್ಲಿನ ಲಕ್ನೋ ನಗರದ ಬಳಿ ಇರುವ ನೈಮಿಷಾರಣ್ಯ ಬಹು ಸುಂದರವಾದ ಸ್ಥಳ; ಅಷ್ಟೇ ಪವಿತ್ರವಾದದ್ದೂ ಹೌದು. ಶಾಂತಿಯನ್ನರಸಿ ತಪೋನಿರತರಾಗಲು ಜನ ಈಗಲೂ ನೈಮಿಷಾರಣ್ಯಕ್ಕೆ ಹೋಗುವುದುಂಟು. ಆಧ್ಯಾತ್ಮಿಕತೆಯ ಜಿಜ್ಞಾಸೆಗಳಿಗೆ ನೈಮಿಷಾರಣ್ಯವು ಸೂಕ್ತ ಸ್ಥಳವೆಂದು ಅನಾದಿಕಾಲದಿಂದಲೂ
-
ದೇವರಿದ್ದಾನೆಯೇ?

ಬೆಳಗ್ಗೆ ಒಂಬತ್ತು ಗಂಟೆ, ರಮೇಶ ಮತ್ತು ಸತೀಶ ಲಗುಬಗನೆಯಿಂದ ತಮ್ಮ ಇಂಜಿನಿಯರಿಂಗ್ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ಹೋಗಲು ಸಾರ್ವಜನಿಕ ಬಸ್ ನಿಲ್ದಾಣಕ್ಕೆ ಅವರ ಪಯಣ ನಡೆದಿತ್ತು. ರಮೇಶ ಹೇಳಿದ “ಸತೀ, ದೇವರು ಪುಸ್ತಕ ಓದಿದ್ದೀಯಾ? ದೇವರಿಲ್ಲ ಪ್ರೊ.ಎ.ಎನ್.ಮೂರ್ತಿರಾಯರು ಅವರು ಬಹು ಸುಂದರವಾಗಿ ತೋರಿಸಿದ್ದಾರೆ. ನಾನು ಅಷ್ಟೇ ದೇವರಿರುವನು ಎಂದು ನಂಬುವುದಿಲ್ಲ. ಅದೊಂದು ಬರಿಯ ಮೂಢನಂಬಿಕೆ. ದೇವರು ಒಂದು ಭಾರಿ ಉತ್ಪ್ರೇಕ್ಷಿತ ಕಲ್ಪನೆಯಷ್ಟೆ” ಸತೀಶನಿಗೆ ಈ ಮಾತುಗಳು ಹಿಡಿಸಲಿಲ್ಲ. ಅವನೆಂದ “ನೀನು ವಾಸುದೇವ ಕಾರಂತರ “ದೇವರಿದ್ದಾನೆ” ಅಥವಾ ಡಿ.ವಿ.ಜಿ.
-
ಶ್ರೀ ಅದ್ವೈತ ಆಚಾರ್ಯರ ವೈಭವಗಳು

– ಶ್ರೀ ಅದ್ವೈತ ಆಚಾರ್ಯರು ಮಹಾವಿಷ್ಣುವಿನ ಅವತಾರಿ. ಶ್ರೀಹರಿಯಿಂದ ಭಿನ್ನವಲ್ಲದ್ದರಿಂದಲೇ ಅವರನ್ನು “ಅದ್ವೈತ” ಎಂದೂ, ಲೋಕಕ್ಕೆ ಭಕ್ತಿಯ ಪಂಥವನ್ನು ಸಾರಿದ್ದರಿಂದ ‘ಆಚಾರ್ಯ’ ಎ೦ದೂ ಕರೆಯುತ್ತಾರೆ. ಈ ಎರಡೂ ಹೆಸರುಗಳಿಂದ ಅವರು ಅದ್ವೈತಾಚಾರ್ಯರೆಂದು ಪ್ರಸಿದ್ಧರಾದರು. ಮಾಯಶಕ್ತಿಯಿ೦ದ ಸೃಷ್ಟಿಯ ರಚನೆಯನ್ನು ಮಾಡುವುದು ಅವರ ಕೆಲಸ. ತಮ್ಮ ಲೀಲೆಗಳಲ್ಲಿ ಅವರು ಅನೇಕ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾರೆ ಮತ್ತು ತಮ್ಮ ಇಚ್ಛೆಯಂತೆ ಅನೇಕ ರೂಪ ಧಾರಣೆ ಮಾಡಿ ಪ್ರಕಟವಾಗಿದ್ದಾರೆ. ನಾಸ್ತಿಕ ಸಾಂಖ್ಯ ತತ್ತ್ವಶಾಸ್ತ್ರದಲ್ಲಿ ಈ ಜಗತ್ತು ಜಡವಸ್ತುವಿನಿಂದಲೇ ನಿರ್ಮಾಣವಾಗುತ್ತದೆ ಎಂಬ ಪ್ರತಿಪಾದನೆ ಇದೆ. ಆದರೆ
-
ಮಥುರಾದ ಪವಿತ್ರ ತಾಣಗಳು

ವ್ರಜ ಮಂಡಲ ಪರಿಕ್ರಮ -ಕೃಷ್ಣದಾಸ ಶ್ರೀ ಕೃಷ್ಣ ಜನ್ಮಸ್ಥಾನ ಇದು ಶ್ರೀ ಕೃಷ್ಣ ಜನಿಸಿದ ಪ್ರದೇಶ, ಇಲ್ಲಿನ ಕೇಶವ ದೇವ ದೇವಾಲಯದಲ್ಲಿ ರಾಧಾರಾಣಿ ಮತ್ತು ಕೇಶವ ವಿಗ್ರಹಗಳಿವೆ. ವ್ರಜ ಮಂಡಲದ ನಾಲ್ಕು ಪ್ರಮುಖ ವಿಗ್ರಹಗಳಲ್ಲಿ ಕೇಶವ ವಿಗ್ರಹವೂ ಒಂದು. ಇದನ್ನೂ ಕೂಡಾ ವಜ್ರನಾಭ ಪ್ರತಿಷ್ಠಾಪಿಸಿದ. ಶ್ರೀ ಕೃಷ್ಣ ಅವತರಿಸಿದ ಸ್ಥಳ ಕೇಶವ ದೇವ ದೇವಾಲಯದ ಪಕ್ಕದಲ್ಲಿ ಜೈಲಿನಂಥ ಒಂದು ಚಿಕ್ಕ ಕೊಠಡಿ ಇದೆ. ಶ್ರೀ ಕೃಷ್ಣ ಜನಿಸಿದ್ದು ಇದೇ ಜೈಲಿನಲ್ಲಿ ಎನ್ನಲಾಗಿದೆ. ಇಲ್ಲಿಂದ 250 ಅಡಿ ದೂರದಲ್ಲಿ,
-
ರಾಧಾಷ್ಟಮಿ

