ಲೇಖನಗಳು


  • ಶ್ರೀ ನರಹರಿ ತೀರ್ಥರು

    ಶ್ರೀ ನರಹರಿ ತೀರ್ಥರು

    ಶುದ್ಧ ಭಕ್ತನಲ್ಲಿ 26 ಗುಣಗಳು ಅವಶ್ಯವಾಗಿರಬೇಕು ಎಂದು ಸನಾತನ ಗೋಸ್ವಾಮಿ ಅವರಿಗೆ ನೀಡಿದ ಬೋಧನೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಈ ಪೈಕಿ ಒಂದು ಗುಣ ದಕ್ಷತೆ. ಅಂದರೆ ಶುದ್ಧ ಭಕ್ತನಾದವನು ದಕ್ಷನಾಗಿರಬೇಕು. ಏಕ ಕಾಲಕ್ಕೆ ಹಲವಾರು ಕ್ಷೇತ್ರಗಳಲ್ಲಿ ಸಾಮರ್ಥ್ಯ ಮೆರೆಯುವ ದಕ್ಷತೆ ಆತನಿಗಿರಬೇಕು. ಗುರು ಪರಂಪರೆಯಲ್ಲಿ ಪದ್ಮನಾಭ ತೀರ್ಥರ ನಂತರ ಬರುವ ಶ್ರೀ ನರಹರಿ ತೀರ್ಥರು, ಚೈತನ್ಯರು ತಿಳಿಸಿದ ಎಲ್ಲಾ ಸದ್ಗುಣಗಳನ್ನು ಹೊ೦ದಿದ್ದ ಶುದ್ಧ ಭಕ್ತರು. ರಾಜ್ಯಾಡಳಿತದಿ೦ದ ರಣರ೦ಗದಲ್ಲಿ ಹೋರಾಡುವವರೆಗೆ, ಮಹಾನ್‌ ಗ್ರಂಥಗಳ ರಚನೆಯಿಂದ ಮಾಧ್ವ…


  • ಬಾಲ ನಿಮಾಯ್‌ ಭಾಗ-2

    ಬಾಲ ನಿಮಾಯ್‌ ಭಾಗ-2

    ಯುಗಾವತಾರಿ ಶ್ರೀಚೈತನ್ಯ ಮಹಾಪ್ರಭು -ಡಾ.ಬಿ.ಆರ್‌.ಸುಹಾಸ್‌ ಕೃಷ್ಣ ವರ್ಣಂ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ| ಯಜ್ಞೈಃ ಸಂಕೀರ್ತನ ಪ್ರಾಯೈರ್‌ ಯಜಂತಿ ಹಿ ಸಮೇಧಸಃ || (ಭಾಗವತ 11.5.32) ಮಹಾನ್‌ ಅವತಾರಿ ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುತ್ತಾನೆ ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ ಪ್ರಚಾರದ ಮೂಲಕ…


  • ವ್ರಜಮಂಡಲ ಪರಿಕ್ರಮ – ಭಾಗ-2

    ವ್ರಜಮಂಡಲ ಪರಿಕ್ರಮ – ಭಾಗ-2

    -ಕೃಷ್ಣದಾಸ ವ್ರಜಮಂಡಲ ಪರಿಕ್ರಮದ ಮಹತ್ವ, ವೃಂದಾವನದ ಮಹಾತ್ಮೆ, ಅಲ್ಲಿನ ಕೆಲವು ಪ್ರಮುಖ ದೇವಾಲಯಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಿಮಗೆ ಮಾಹಿತಿ ನೀಡಿದ್ದೇವೆ. ಈ ಸಂಚಿಕೆಯಲ್ಲಿ ವೃಂದಾನವದಲ್ಲಿ ನೀವು ನೋಡಬೇಕಾದ ಇನ್ನೂ ಕೆಲವು ದೇವಾಲಯಗಳ ಬಗ್ಗೆ ಸ್ಥೂಲ ಮಾಹಿತಿ ನೀಡುತ್ತಿದ್ದೇವೆ. ಶ್ರೀ ಕೃಷ್ಣ ಬಲರಾಮ ಮಂದಿರ: ಈ ದೇವಾಲಯದ ಶ್ರೀಲ ಪ್ರಭುಪಾದರು 1976ರಲಿ ಸ್ಥಾಪಿಸಿದರು. ಗೌರ ನಿತಾಯ್‌, ಕೃಷ್ಣ ಬಲರಾಮ ಮತ್ತು ರಾಧಾ ಶ್ಯಾಮಸುಂದರ ವಿಗ್ರಹಗಳು ಇಲ್ಲಿವೆ. ಎಡಭಾಗದ ಮಂಟಪದಲ್ಲಿ ಗೌರ ನಿತಾಯ್‌ ವಿಗ್ರಹದ ಕೆಳಗೆ ಶ್ರೀಲ ಪ್ರಭುಪಾದ…


  • ವರಾಹಾವತಾರ

    ವರಾಹಾವತಾರ

    ಹಿರಣ್ಯಾಕ್ಷ ಸಂಹಾರ –ಶ್ರೀ ಬೆನಕ ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪ ತರೋರ್‌‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಮೂರನೇ ಸ್ಕಂಧವನ್ನು ಆಧರಿಸಿ ಶ್ರೀ ಬೆನಕ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಭಗವಾನ್ ಶ್ರೀಕೃಷ್ಣನು ಭಕ್ತಜನ ರಕ್ಷಣೆಗಾಗಿ ಮೊರೆಯಿಟೊಡೆ ಅವತರಿಸಿ…


  • ಶ್ರೀ ಪದ್ಮನಾಭ ತೀರ್ಥ

    ಶ್ರೀ ಪದ್ಮನಾಭ ತೀರ್ಥ

    ಶ್ರೀ ಮಧ್ವಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಶ್ರೀ ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರ ಪಾಂಡಿತ್ಯ, ಕೃಷ್ಣಭಕ್ತಿ, ಹಿರಿತನವನ್ನು ಕಂಡು ಸ್ವತ ಮಧ್ವಾಚಾರ್ಯರೇ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು. ಮಧ್ವಾಚಾರ್ಯರ ಕೃತಿಗಳ ಮೇಲೆ ವ್ಯಾಖ್ಯಾನ ಬರೆದ ಮೊದಲ ಆಚಾರ್ಯರು ಪದ್ಮನಾಭ ತೀರ್ಥರು. ಪದ್ಮನಾಭ ತೀರ್ಥರು ಜನಿಸಿದ್ದು 1199ರಲ್ಲಿ, ಆಂಧ್ರಪ್ರದೇಶದ ಗೋದಾವರಿ ತೀರದ ರಾಜಮಹೇಂಡ್ರಿಯಲ್ಲಿ. ಇವರ ಮೂಲ ನಾಮಧೇಯ ಶೋಭನ ಭಟ್ಟ. ತಂದೆ ಕೇಶವ ಭಟ್ಟ, ತಾಯಿ ಗಿರಿಜಾಂಬಾ. ಈ ದೈವ ಭಕ್ತ ದಂಪತಿಗೆ ವಿವಾಹವಾಗಿ ಬಹಳ…


  • ಬಾಲ ನಿಮಾಯ್‌

    ಬಾಲ ನಿಮಾಯ್‌

    ಯುಗಾವತಾರಿ ಶ್ರೀ ಚೈತನ್ಯ  ಮಹಾಪ್ರಭು -ಡಾ.ಬಿ.ಆರ್‌.ಸುಹಾಸ್‌ ಕೃಷ್ಣ ವರ್ಣ೦ ತ್ವಿಷಾಕೃಷ್ಣಂ ಸಂಗೋಪಾಂಗಾಸ್ತ್ರ ಪಾರ್ಶದಂ | ಯಜ್ಞೈ: ಸಂಕೀರ್ತನ ಪ್ರಾಯೈರ್ ಯಜಂತಿ ಹಿ ಸುಮೇಧಸಃ || (ಭಾಗವತ 11.5,32) ಮಹಾನ್ ಅವತಾರವು ಕಲಿಯುಗದಲ್ಲಿ ಸಂಕೀರ್ತನ ಯಜ್ಞವನ್ನು ಪ್ರಚಾರ ಮಾಡುವುದು ಎಂಬ ಭವಿಷ್ಯವನ್ನು ಭಾಗವತವು ನುಡಿದಿತ್ತು. ಅದರ ಅನುಸಾರವಾಗಿ ಮತ್ತು ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಗಾಗಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿದರು. ಅವರು ಮಾಡಿದ ದುಷ್ಟ ಸಂಹಾರ ವಿಭಿನ್ನ ರೀತಿಯದ್ದು. ಕಲಿಯುಗದಲ್ಲಿ ಪ್ರತಿಯೊಬ್ಬನಲ್ಲೂ ದುಷ್ಟ ಅಂಶಗಳಿವೆ. ಅವುಗಳನ್ನು ಸಂಕೀರ್ತನ…


  • ವ್ರಜಮಂಡಲ ಪರಿಕ್ರಮ

    ವ್ರಜಮಂಡಲ ಪರಿಕ್ರಮ

    -ಕೃಷ್ಣದಾಸ ಧರ್ಮ ಸಂಸ್ಥಾಪನೆಗಾಗಿ ಕಾಲ ಕಾಲಕ್ಕೆ ಧರೆಗವತರಿಸುವ ದೇವೋತ್ತಮ ಪರಮ ಪುರುಷ ತಾನೊಬ್ಬನೇ ಭೂಮಿಗೆ ಬರುವುದಿಲ್ಲ. ತನ್ನ ಆತ್ಮೀಯ ಒಡನಾಡಿಗಳು, ಸ್ನೇಹಿತರು, ಸೇವಕರ ಜೊತೆಗೇ ಅವತರಿಸುತ್ತಾನೆ. ಅಷ್ಟೇ ಅಲ್ಲ, ಭೂಮಿ ಮೇಲೆ ತನ್ನದೇ ಆದ ಪರಿಸರವನ್ನು ಸೃಷ್ಟಿಸಿಕೊಳ್ಳುತ್ತಾನೆ. ಅದು ಆಧ್ಯಾತ್ಮಿಕ ಲೋಕದಲ್ಲಿರುವ ಅವನ ಮೂಲ ನಿವಾಸಕ್ಕಿಂತ ಯಾವ ರೀತಿಯಲ್ಲೂ ಭಿನ್ನವಾಗಿರುವುದಿಲ್ಲ. ಹೀಗೆ ದೇವೋತ್ತಮ ಪರಮ ಪುರುಷನ ಈ ಐಹಿಕ ಲೋಕದಲ್ಲಿ ಸೃಷ್ಟಿಸುವ ಆಧ್ಯಾತ್ಮಿಕ ಲೋಕದ ಪ್ರತಿರೂಪವನ್ನು “ಧಾಮ” ಎನ್ನುತ್ತೇವೆ. 5000 ವರ್ಷಗಳ ಹಿಂದೆ ಕೃಷ್ಣನಾಗಿ ಹುಟ್ಟಿ ಈ…


  • ಗಜೇಂದ್ರ ಮೋಕ್ಷ

    ಗಜೇಂದ್ರ ಮೋಕ್ಷ

    -ಡಾ.ಬಿ.ಜಿ.ಹರೀಶ್‌ ವೇದವ್ಯಾಸ ವಿರಚಿತ ಭಾಗವತವು 12 ಸಂಪುಟಗಳ, 18000 ಶ್ಲೋಕಗಳಿಂದ ಕೂಡಿದ್ದು-ನಿಗಮ ಕಲ್ಪ ತರೋರ್‌ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಎಂಟನೆ ಸ್ಕಂದವನ್ನು ಆಧರಿಸಿ ಡಾ.ಬಿ.ಜಿ.ಹರೀಶ್‌ ರವರ ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ‘ರಾಜ ಇಂದಿನಿಂದ ಏಳು ದಿನಗಳಲ್ಲಿ ಸಾವುಂಟಾಗಲಿ’ ಎಂದು ಬ್ರಾಹ್ಮಣ ಪುತ್ರನು ಪರೀಕ್ಷಿತನಿಗೆ ಏಳು ದಿನಗಳಲ್ಲಿ ಸಾವು…


  • ಶ್ರೀ ಮಧ್ವಾಚಾರ್ಯ

    ಶ್ರೀ ಮಧ್ವಾಚಾರ್ಯ

    ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಆಚಾರ್ಯರ ಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. -ಸ್ತೋಕ ಕೃಷ್ಣದಾಸ ಶ್ರೀ ಕೃಷ್ಣಭಕ್ತರ ಪರಮ ಪವಿತ್ರ ಕ್ಷೇತ್ರ ಉಡುಪಿ. ಉಡುಪಿ ಎಂದ ತಕ್ಷಣ ನೆನಪಿಗೆ ಬರುವುದು ಸಮುದ್ರ, ಶ್ರೀ ಕೃಷ್ಣನೆಂಬ ಕರುಣಾ ಸಾಗರ! ಇಲ್ಲಿಯ ಶ್ರೀಕೃಷ್ಣ ದೇಗುಲ, ಕನಕನ ಕಿಂಡಿ, ರಥ ಬೀದಿ, ಅಷ್ಟ ಮಠಗಳು ಎಲ್ಲವನ್ನೂ ನೋಡುವುದೇ ಕಣ್ಣಿಗೆ ಹಬ್ಬ. ಇವೆಲ್ಲದರ ಹಿಂದಿನ ಪ್ರೇರಕ ಶಕ್ತಿ ಶ್ರೀ…


  • ಮನೆಯಲ್ಲಿ ವಿಗ್ರಹಾರಾಧನೆ

    ಮನೆಯಲ್ಲಿ ವಿಗ್ರಹಾರಾಧನೆ

    ವಿಗ್ರಹಾರಾಧನೆ – ನಮ್ಮ ಕರ್ಮಗಳನ್ನು ಕೃಷ್ಣನಿಗೆ ಅರ್ಪಿಸುವ, ಕರ್ಮ ಯೋಗ ಆಚರಿಸುವ ಸರಳ ವಿಧಾನ. –ಗೌರಹರಿ ದಾಸ ನೀವು ಕೃಷ್ಣನ ಫೋಟೋವನ್ನು ಪೂಜಿಸುತ್ತೀರಾದರೆ ಅದಕ್ಕೆ ಗೋಡೆಯಲ್ಲಿರುವ ಗೂಡು ಅಥವಾ ಕೋಣೆಯ ಮೂಲೆಯಲ್ಲಿರುವ ಮೇಜು ಅಥವಾ ನಿಮ್ಮ ಪುಸ್ತಕಗಳನ್ನಿಡುವ ಷೆಲ್ಫ್‌ನ ಮೇಲ್ಭಾಗವಾದರೂ ಆದೀತು. ನಿಮ್ಮ ಮನೆಯಲ್ಲಿ ಅತಿಥಿಯನ್ನು ಒಂದು ಮೂಲೆಯಲ್ಲಿ ಕೂರಿಸಿ ನೀವು ಅವರನ್ನು ನಿರ್ಲಕ್ಷಿಸುವಂತಿಲ್ಲ. ಅತಿಥಿ “ದೈವ”ದ ಬಳಿ ಕುಳಿತುಕೊಳ್ಳಲು ನಿಮಗೂ ಒಂದು ‍ಸ್ಥಳ ಮೀಸಲಿಡಬೇಕು. ನಿಮ್ಮ ಸ್ಥಳ ದೇವರಿಗೆ ಎದುರಾಗಿರಬೇಕು. ಆತನ ಮುಖ ನೋಡುತ್ತಾ ಆನಂದಿಸಲು…