ಲೇಖನಗಳು


  • ಪುನರ್ಜನ್ಮ ಸತ್ಯ ಅಸತ್ಯ

    ಪುನರ್ಜನ್ಮ ಸತ್ಯ ಅಸತ್ಯ

    -ಕೃಷ್ಣದಾಸ ‘ಪುನರ್ಜನ್ಮ’ ಎಂಬುದು ಬಹಳ ಚರ್ಚಿಸಲ್ಪಟ್ಟ ವಿಷಯ. ಇದರ ಪರಾಪರ ತತ್ತ್ವವೆತ್ತರು, ವಿಜ್ಞಾನಿಗಳು ವಾದ ಪ್ರತಿವಾದಗಳನ್ನು ಮಂಡಿಸಿದ್ದಾರೆ. ಜನಸಾಮಾನ್ಯರು ಪುನರ್ಜನ್ಮದ ಸತ್ಯವನ್ನು ಮರೆತು ಈ ದೇಹ ಮುಗಿದೊಡನೆ ಎಲ್ಲನಾಶವಾಗುತ್ತದೆ ಎಂಬ ತತ್ತ್ವವನ್ನೆ ನಂಬಿದ್ದಾರೆ. ನಾವು ರಾಸಾಯನಿಕ ಕ್ರಿಯೆಯಲ್ಲದೆ ಬೇರೇನಿಲ್ಲ ಮತ್ತು ಪ್ರಜ್ಞೆ ಎಂಬುದು ರಾಸಾಯನಿಕ ಕ್ರಿಯೆಯ ಉಪ ಉತ್ಪತ್ತಿಯಷ್ಟೆ ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಇವುಗಳಿಗೆ ಸೂಕ್ತ ಉತ್ತರಗಳನ್ನು ನೀಡಲು ಪ್ರಶ್ನೋತ್ತರದ ಮೂಲಕ ಪುನರ್ಜನ್ಮದ ಬಗ್ಗೆ ಒಂದು ತರ್ಕಬದ್ಧ ಚರ್ಚೆಯನ್ನು ಇಲ್ಲಿ ನೀಡಲಾಗಿದೆ. ರವಿಶಂಕರ್ ಜನಿಸಿದ್ದು 1951 ರಲ್ಲಿ,…


  • ನಾರದಮುನಿ

    ನಾರದಮುನಿ

    ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. – ದಶಂ “ನೀನ್ಯಾಕೋ ನಿನ್ನ ಹಂಗ್ಯಾಕೋ,  ನಿನ್ನ ನಾಮದ ಬಲವೊಂದಿದ್ದರೆ ಸಾಕೋ” ಎಂದು ಹಾಡಿ ಭಗವಂತನ ನಾಮಸ್ಮರಣೆಯ ಬಲವನ್ನು ದಾಸರು ಸಾರಿ ಹೇಳಿದ್ದಾರೆ. ಭಗವಂತನ ನಾಮೋಚ್ಛಾರದ ಪ್ರಭಾವವನ್ನು ಅದರಿಂದಾಗುವ ಆನಂದವನ್ನು ಅನವರತ ಅನುಭವಿಸಿ, ಜಗತ್ತಿನ ಎಲ್ಲೆಡೆ ಪ್ರಸಾರ ಮಾಡುವ ಮಹಾ ಮಹಿಮರೇ ಶ್ರೀ ನಾರದ ಮಹಾಮುನಿಗಳು, ನಾರದರನ್ನು ಗುರುಪರಂಪರೆಯಲ್ಲಿಟ್ಟು ಎಲ್ಲ…


  • ಸಮಾಜ ವ್ಯವಸ್ಥೆಯಲ್ಲಿ ಗೋವಿನ ಪ್ರಾಮುಖ್ಯತೆ

    ಸಮಾಜ ವ್ಯವಸ್ಥೆಯಲ್ಲಿ ಗೋವಿನ ಪ್ರಾಮುಖ್ಯತೆ

    -ಗೌರಹರಿ ದಾಸ ಎತ್ತು ಮತ್ತು ಹಸುಗಳು ನಿಮ್ಮ ತಂದೆ- ತಾಯಿಗಳಿದ್ದಂತೆ. ಅದು ಹೇಗೆ ಅವುಗಳನ್ನು ಕೊ೦ದು ತಿನ್ನುತ್ತೀರಿ? ಇದೆಂಥ ಧಾರ್ಮಿಕ ತತ್ತ್ವ? ಯಾವ ಧೈರ್ಯದ ಮೇಲೆ ಇಂಥ ಪಾಪ ಕೃತ್ಯ ಎಸಗುತ್ತೀರಿ? ಇದು ಚೈತನ್ಯ ಮಹಾಪ್ರಭುಗಳು ಮುಸ್ಲಿಂ ಖಾಜಿಯೊಬ್ಬನನ್ನು ಕುರಿತು ಕೇಳಿದ ಪ್ರಶ್ನೆ. ಈಗ ಮತ್ತೆ ಈ ಪ್ರಶ್ನೆ ಕೇಳಬೇಕಾದ ಕಾಲ ಬಂದಿದೆ! ನಮಗೆ ನಿತ್ಯ ಕುಡಿಯಲು ಹಸುವಿನ ಹಾಲು ಬೇಕು. ಉಳುಮೆ ಮಾಡಲು, ಗಾಡಿ ಎಳೆಯಲು ಎತ್ತುಗಳು ಬೇಕು. ನಮಗೆ ತಿನ್ನಲು ಕಾಳು ನೀಡುವವನೇ ತ೦ದೆ;…


  • ಬ್ರಹ್ಮ

    ಬ್ರಹ್ಮ

    -ಸುನಿಧಿ ಗೌಡೀಯ ವೈಷ್ಣವ ಪರಂಪರೆಯಲ್ಲಿ ಕೃಷ್ಣಪ್ರಜ್ಞೆಯನ್ನು ಜಗತ್ತಿನಾದ್ಯಂತ ಪಸರಿಸಲು, ಕೃಷ್ಣ ಪ್ರಜ್ಞೆ ಹಾಗೂ ಭಕ್ತಿ ಆಂದೋಲನದ ಮಾರ್ಗದರ್ಶನ ಮಾಡಿದ ಹಿರಿಯರ ಗುರುಪರಂಪರೆಯನ್ನು ಪರಿಚಯಿಸುವ ಉದ್ದೇಶ ಈ ಅಂಕಣದ್ದು. ಈ ಜಗದ ಸರ್ವೋಚ್ಚ ಆಡಳಿತಗಾರ. ಜಗತ್ತಿನ ಅತ್ಯಂತ ಶ್ರೇಷ್ಠ ಜೀವಿ. ಬ್ರಹ್ಮ ಎಂಬ ಪದದ ಅರ್ಥವೇ ಅದು ಎಲ್ಲವೂ ಯಾರಿಂದ ಸೃಷ್ಟಿಯಾಗಿದೆಯೋ ಅವನೇ ಬ್ರಹ್ಮ. ಹಾಗಾದರೆ ಬ್ರಹ್ಮನ ಸೃಷ್ಟಿ ಹೇಗಾಯಿತು? ಈ ಜಗತ್ತಿನ ಪ್ರಥಮ ಪುರುಷ ಕರ್ಣೋದಕಶಾಯಿ ವಿಷ್ಣು. ಆತನ ಚರ್ಮ ರೋಮಗಳಿಂದ ಅಸಂಖ್ಯಾತ ಬ್ರಹ್ಮಾಂಡಗಳು ಸೃಷ್ಟಿಯಾಗಿವೆ. ಪ್ರಥಮ…


  • ಯಾರಿಗೂ ಬೇಡದ ಸಾವು

    ಯಾರಿಗೂ ಬೇಡದ ಸಾವು

    – ಸುನಿಧಿ ಇತ್ತೀಚೆಗೊಂದು ದಿನ ಸಂಜೆ ಟಿವಿಯಲ್ಲಿ ವಾರ್ತೆ ವೀಕ್ಷಿಸುತ್ತಿದ್ದೆ. ಮುಂಬಯಿಯಲ್ಲಿ ಬಾಂಬ್‌ ಸ್ಫೋಟಿಸಿ 50 ಮಂದಿ ಬಲಿ, ಸಾಲಬಾಧೆ ತಾಳದೇ ಒಂಬತ್ತು ರೈತರ ಆತ್ಮಹತ್ಯೆ, ಕೋಲಾರ ಬಳಿ ಟ್ರಾಕ್ಟರ್ ಅಪಘಾತಕ್ಕೀಡಾಗಿ ನಾಲ್ವರು ಸಾವು, ಇಸ್ರೇಲ್-ಪ್ಯಾಲಸ್ಟೀನ್ ಕಾಳಗ, ಸಾಹಿತಿ- ವಿಚಾರವಾದಿ ಎ.ಎನ್. ಮೂರ್ತಿರಾಯರಿಗೆ ಶ್ರದ್ಧಾಂಜಲಿ….. ಒ೦ದು ತಾಸಿನ ಸುದ್ದಿ ತು೦ಬಾ ಬರೀ ಸಾವು, ಕೊಲೆ, ಆತ್ಮಹತ್ಯೆ, ಯುದ್ಧಗಳದ್ದೇ ವರದಿ. ಸಾವಿನ ಸುದ್ದಿಯನ್ನು ಅತಿರ೦ಜಿತವಾಗಿ ತೋರಿಸುವುದೆ೦ದರೆ ಈ ಮಾಧ್ಯಮದವರಿಗೆ ಅಷ್ಟೊಂದು ಖುಷಿಯೆ? ಅಥವಾ ನಾವೇ ಈ ಸಾವಿನ ಸುದ್ದಿಗಳಿಗೆ…


  • ವರವಾದ ಶಾಪ, ಪರೀಕ್ಷಿತನ ಕಥೆ

    ವರವಾದ ಶಾಪ, ಪರೀಕ್ಷಿತನ ಕಥೆ

    ಡಾ. ಬಿ.ಆರ್‌.ಸುಹಾಸ್‌ ದುರ್ಗಮವಾದ ದಟ್ಟ ಅರಣ್ಯ, ಮಟಮಟ ಮಧ್ಯಾಹ್ನದ ಪ್ರಖರವಾದ ಬಿಸಿಲು ಕೆಂಡದಂತೆ ಸುಡುತ್ತಿತ್ತು. ನೀರಿನ ಮುಖ ಕಾಣದ ಹೂಬಳ್ಳಿಗಳು ಸೊರಗಿ ಶುಷ್ಕವಾಗಿದ್ದವು. ದಾಹದಿ೦ದ ನಿತ್ರಾಣಗೊಂಡಿದ್ದ ಪಶುಪಕ್ಷಿಗಳು ಜಲಾಶಯಗಳನ್ನರಸುತ್ತಾ ದೂರ ಸಾಗಿದ್ದವು. ಎಲ್ಲೆಲ್ಲೂ ಸ್ಮಶಾನ ಮೌನ, ಮಹಾರಾಜನೊಬ್ಬ ಇ೦ಥ ಸಂದರ್ಭದಲ್ಲಿ ಏಕಾಂಗಿಯಾಗಿ ಬಿಲ್ಲುಬಾಣಗಳೊಂದಿಗೆ ಕುದುರೆಯನ್ನೇರಿ ಬೇಟೆಯನ್ನರಸಿ ಸಾಗಿದ್ದ. ಬೆಳಗಿನಿಂದಲೂ ಮೃಗಗಳನ್ನು ಹುಡುಕುತ್ತಾ ಅಲೆದಾಡಿ ಹಸಿವು, ಬಾಯಾರಿಕೆಗಳಿಂದ ಬಳಲಿ ಬೆಂಡಾಗಿದ್ದ. ಎಲ್ಲಿಯಾದರೂ ನೀರು ಸಿಗುವುದೇ ಎಂದು ಹುಡುಕಿದ. ಆಗ ಅವನಿಗೆ ಒ೦ದು ಋಷ್ಯಾಶ್ರಮ ಗೋಚರಿಸಿತು. ಆಶ್ರಮದಲ್ಲಿ ನೀರು ಸಿಗಬಹುದೆಂಬ…


  • ಶ್ರೀಲ ಭಕ್ತಿ ವಿನೋದ ಠಾಕೂರ

    ಶ್ರೀಲ ಭಕ್ತಿ ವಿನೋದ ಠಾಕೂರ

     -ಧನಂಜಯ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳದ ಸಂಶೋಧನೆ, ಅಲ್ಲೊಂದು ಭವ್ಯ ಮಂದಿರ ನಿರ್ಮಾಣ, ಕೃಷ್ಣ ಪ್ರಜ್ಞಾ ಆಂದೋಲನಕ್ಕೆ ಹೊಸ ಸ್ವರೂಪ ಚೈತನ್ಯ ವೇದಾ೦ತ ಸೂತ್ರ, ಕಲ್ಯಾಣ ಕಲ್ಪತರು ಸುಮಾರು 150 ಗ್ರಂಥಗಳ ರಚನೆ ಇತ್ಯಾದಿ ಶ್ರೀಲ ಭಕ್ತಿ ವಿನೋದ ಠಾಕೂರರ ಸಾಧನೆ. ಇವರು ಶ್ರೀಲ ಪ್ರಭುಪಾದರ ಗುರುಗಳಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿಯವರ ತಂದೆ. ಶ್ರೀ ಚೈತನ್ಯ ಮಹಾಪ್ರಭುಗಳು ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನ ಅವತಾರ. ಅವರು ಜನ್ಮತಳೆದ ಸ್ಥಳ ನವದ್ವೀಪ, ಈ ಕ್ಷೇತ್ರ ಎಲ್ಲಿದೆ ಎಂಬ ಬಗ್ಗೆಯೇ…


  • ಹರೇ ಕೃಷ್ಣ ಮಹಾಮಂತ್ರ

    ಹರೇ ಕೃಷ್ಣ ಮಹಾಮಂತ್ರ

    – ಕೃಷ್ಣದಾಸ ಪ್ರತಿಯೊಬ್ಬ ಜೀವಿಯೂ ಪರಮ ಪುರುಷನೊಡನೆ ಆಪ್ತ ಸಂಬಂಧವನ್ನು ಹೊಂದಿದ್ದಾನೆ. ಆ ಸಂಬಂಧವೇ ಜೀವಿಯ ಮೂಲ ಸ್ವರೂಪ. ಈಗ ಅದನ್ನು ಮರೆತು ದೇಹ, ಕುಟು೦ಬ, ಜಾತಿ ಮೊದಲಾದ ಉಪಾಧಿಗಳೊಡನೆ ಗುರುತಿಸಿಕೊಂಡು ನರಳುತ್ತಿದ್ದಾನೆ. ಕನ್ನಡಿಯ ಮೇಲೆ ಕಲ್ಮಶವಿದ್ದಾಗ ಹೇಗೆ ಪ್ರತಿಬಿಂಬವು ಕಾಣುವುದಿಲ್ಲವೋ ಹಾಗೆಯೇ ಈ ಉಪಾಧಿಗಳು ನಮ್ಮ ಮೂಲ ಸ್ವರೂಪವನ್ನು ಮರೆಯುವಂತೆ ಮಾಡುತ್ತವೆ. ಕಲ್ಮಶವನ್ನು ಅನಾವರಣ ಮಾಡಿ ಐಹಿಕ ವರ್ತುಲದಿಂದ ಮುಕ್ತಗೊಳಿಸಿ ನಮ್ಮ ಮೂಲ ಸ್ವರೂಪ – ಧರ್ಮದಲ್ಲಿ ನೆಲೆಗೊಳಿಸುವುದೇ ವೇದ ಪುರಾಣಗಳ ಉದ್ದೇಶ. ಆ ಮೂಲ…


  • ದೇವರಿದ್ದಾನೆಯೇ?

    ದೇವರಿದ್ದಾನೆಯೇ?

    ಬೆಳಗ್ಗೆ ಒಂಬತ್ತು ಗಂಟೆ, ರಮೇಶ ಮತ್ತು ಸತೀಶ ಲಗುಬಗನೆಯಿಂದ ತಮ್ಮ ಇಂಜಿನಿಯರಿಂಗ್‌ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿಗೆ ಹೋಗಲು ಸಾರ್ವಜನಿಕ ಬಸ್‌ ನಿಲ್ದಾಣಕ್ಕೆ ಅವರ ಪಯಣ ನಡೆದಿತ್ತು. ರಮೇಶ ಹೇಳಿದ “ಸತೀ, ದೇವರು ಪುಸ್ತಕ ಓದಿದ್ದೀಯಾ? ದೇವರಿಲ್ಲ ಪ್ರೊ.ಎ.ಎನ್‌.ಮೂರ್ತಿರಾಯರು ಅವರು ಬಹು ಸುಂದರವಾಗಿ ತೋರಿಸಿದ್ದಾರೆ. ನಾನು ಅಷ್ಟೇ ದೇವರಿರುವನು ಎಂದು ನಂಬುವುದಿಲ್ಲ. ಅದೊಂದು ಬರಿಯ ಮೂಢನಂಬಿಕೆ. ದೇವರು ಒಂದು ಭಾರಿ ಉತ್ಪ್ರೇಕ್ಷಿತ ಕಲ್ಪನೆಯಷ್ಟೆ” ಸತೀಶನಿಗೆ ಈ ಮಾತುಗಳು ಹಿಡಿಸಲಿಲ್ಲ. ಅವನೆಂದ “ನೀನು ವಾಸುದೇವ ಕಾರಂತರ “ದೇವರಿದ್ದಾನೆ” ಅಥವಾ ಡಿ.ವಿ.ಜಿ.…


  • ಶ್ರೀ ಅದ್ವೈತ ಆಚಾರ್ಯರ ವೈಭವಗಳು

    ಶ್ರೀ ಅದ್ವೈತ ಆಚಾರ್ಯರ ವೈಭವಗಳು

    – ಶ್ರೀ ಅದ್ವೈತ ಆಚಾರ್ಯರು ಮಹಾವಿಷ್ಣುವಿನ ಅವತಾರಿ. ಶ್ರೀಹರಿಯಿಂದ ಭಿನ್ನವಲ್ಲದ್ದರಿಂದಲೇ ಅವರನ್ನು “ಅದ್ವೈತ” ಎಂದೂ, ಲೋಕಕ್ಕೆ ಭಕ್ತಿಯ ಪಂಥವನ್ನು ಸಾರಿದ್ದರಿಂದ ‘ಆಚಾರ್ಯ’ ಎ೦ದೂ ಕರೆಯುತ್ತಾರೆ. ಈ ಎರಡೂ ಹೆಸರುಗಳಿಂದ ಅವರು ಅದ್ವೈತಾಚಾರ್ಯರೆಂದು ಪ್ರಸಿದ್ಧರಾದರು. ಮಾಯಶಕ್ತಿಯಿ೦ದ ಸೃಷ್ಟಿಯ ರಚನೆಯನ್ನು ಮಾಡುವುದು ಅವರ ಕೆಲಸ. ತಮ್ಮ ಲೀಲೆಗಳಲ್ಲಿ ಅವರು ಅನೇಕ ಬ್ರಹ್ಮಾಂಡಗಳನ್ನು ಸೃಷ್ಟಿಸಿದ್ದಾರೆ ಮತ್ತು ತಮ್ಮ ಇಚ್ಛೆಯಂತೆ ಅನೇಕ ರೂಪ ಧಾರಣೆ ಮಾಡಿ ಪ್ರಕಟವಾಗಿದ್ದಾರೆ. ನಾಸ್ತಿಕ ಸಾಂಖ್ಯ ತತ್ತ್ವಶಾಸ್ತ್ರದಲ್ಲಿ ಈ ಜಗತ್ತು ಜಡವಸ್ತುವಿನಿಂದಲೇ ನಿರ್ಮಾಣವಾಗುತ್ತದೆ ಎಂಬ ಪ್ರತಿಪಾದನೆ ಇದೆ. ಆದರೆ…