-
ಅಜಾಮಿಳನ ಜೀವನ ವೃತ್ತಾಂತ
ಕಾನ್ಯಕುಬ್ಜ ಎನ್ನುವ ಹೆಸರಿನ ನಗರದಲ್ಲಿ ಅಜಾಮಿಳ ಎಂಬೊಬ್ಬ ಬ್ರಾಹ್ಮಣನಿದ್ದನು. ಒಂದು ಸಲ ಈ ಬ್ರಾಹ್ಮಣ ಅಜಾಮಿಳನು ಹೂವು ಹಣ್ಣುಗಳನ್ನು ಕುಯ್ದು ತರಲು ಅರಣ್ಯಕ್ಕೆ ಹೋದನು. ಅವನು ಮನೆಗೆ ಹಿಂತಿರುಗುತ್ತಿದ್ದಾಗಿನ ಹಾದಿಯಲ್ಲಿ ಒಂದೆಡೆ ಒಬ್ಬ ನಾಚಿಕೆಗೆಟ್ಟ ಕಾಮುಕನು ವೇಶ್ಯೆಯೊಬ್ಬಳನ್ನು ಬಲವಾಗಿ ಆಲಂಗಿಸಿಕೊಂಡು ಚುಂಬಿಸುತ್ತಿದ್ದುದನ್ನು ಕಂಡನು. ಅ ವೇಶ್ಯೆಯು ಪಾನಮತ್ತಳಾಗಿದ್ದಳು. ಹಾಗಾಗಿ ಕಣ್ಣುಗಳು ತಿರುಗುತ್ತಿದ್ದವು. ಆಕೆಯ ವಸ್ತ್ರಗಳು ಸರಿದಿದ್ದವು. ಅಜಾಮಿಳನು ಅವಳನ್ನು ನೋಡಿದಾಗ, ಅವನ ಎದೆಯಾಳದಲ್ಲಿ ಸುಪ್ತವಾಗಿದ್ದ ಲೈಂಗಿಕ ಬಯಕೆಗಳು ಎಚ್ಚೆತ್ತವು. ಒಬ್ಬ ಸ್ತ್ರೀಯನ್ನು ಕಣ್ಣೆತ್ತಿ ಕೂಡ ನೋಡಬಾರದೆಂಬ ಶಾಸ್ತ್ರವಚನಗಳೇನೋ…
-
ಆಂತರಿಕ ಬೆಳವಣಿಗೆ ಅಗತ್ಯ
ಸಂಸ್ಕೃತ ಮೂಲ – ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಒಬ್ಬ ರಾಜನಿದ್ದ. ಅವನು ತನ್ನ ದೇಶವನ್ನು ಸುಖ ಸಮೃದ್ಧವನ್ನಾಗಿಸಲು ಬಯಸಿದ. ಅದಕ್ಕಾಗಿ ಅಹೋರಾತ್ರಿ ಶ್ರಮಿಸಿದ. ಪ್ರಜೆಗಳ ಸುಖ ಶಾಂತಿಗಾಗಿ ಅನೇಕ ವಿಧದ ವ್ಯವಸ್ಥೆಗಳನ್ನು ಅವನು ಮಾಡಿದನು. ಆದರೂ ಕೂಡ ಆ ದೇಶದಲ್ಲಿ ಅಪೇಕ್ಷಿತ ಪ್ರಮಾಣದಲ್ಲಿ ಸುಖ ಶಾಂತಿಗಳು ಕಾಣಿಸಲಿಲ್ಲ. ಆದ್ದರಿಂದ ರಾಜನು ತನ್ನ ಗುರುಗಳಾದ ಸನ್ಯಾಸಿಯೊಬ್ಬರ ಬಳಿ ಹೋದನು. “ಗುರುಗಳೇ, ಜನಗಳ ಸುಖಕ್ಕಾಗಿ ನಾನು ಅನೇಕ ವಿಧದ ವ್ಯವಸ್ಥೆ ಮಾಡಿದೆ. ಅನೇಕ ವಿಧದ ಅನುಕೂಲಗಳನ್ನು ಕಲ್ಪಿಸಿದೆ.…
-
ಧ್ರುವ ಮಹಾರಾಜ
ಸ್ವಾಯಂಭುವ ಮನುವಿನ ಮಗ ರಾಜಾ ಉತ್ತಾನಪಾದನಿಗೆ ಸುನೀತಿ ಹಾಗೂ ಸುರುಚಿ ಎನ್ನುವ ಹೆಸರಿನ ಇಬ್ಬರು ರಾಣಿಯರಿದ್ದರು. ಸುರುಚಿಯು ರಾಜನಿಗೆ ಹೆಚ್ಚು ಪ್ರಿಯವಾಗಿದ್ದಳು. ಧ್ರುವ ಎನ್ನುವ ಹೆಸರಿನ ಪುತ್ರನನ್ನು ಪಡೆದಿದ್ದ ಸುನೀತಿ ಎಂದರೆ ರಾಜನಿಗೆ ಅಷ್ಟಕಷ್ಟೆ. ಒಂದು ದಿನ ಉತ್ತಾನಪಾದ ರಾಜನು ಸುರುಚಿಯ ಮಗನಾದ ಉತ್ತಮನನ್ನು ತೊಡೆಯಮೇಲೆ ಕುಳ್ಳಿರಿಸಿಕೊ೦ಡು ಮುದ್ದಾಡುತ್ತಿದ್ದನು. ಧ್ರುವನು ತಾನೂ ತಂದೆಯ ತೊಡೆಯನ್ನೇರಲು ಹೋದನು. ಇದನ್ನು ನೋಡಿದ ಅವನ ಮಲತಾಯಿ ಸುರುಚಿಗೆ ವಿಪರೀತ ಹೊಟ್ಟೆಕಿಚ್ಚು ಹುಟ್ಟಿತು. ಆಗ ಆಕೆ ಸಿಟ್ಟಿನಿಂದ ಧ್ರುವನನ್ನು ಬೈದಳು. ತನ್ನ ಮಲತಾಯಿಯು…
-
ಅರಿಷ್ಟಾಸುರ ವಧೆ
ಬಾಲಕೃಷ್ಣ ದಿನಕ್ಕೊಂದು ದಿವ್ಯ ಲೀಲೆ ಪ್ರದರ್ಶಿಸುತ್ತಾ ಇಡೀ ವೃಂದಾವನವನ್ನು ತನ್ನ ಜಾಲದಲ್ಲಿ ಬಂಧಿಸಿದ್ದ. ಇಡೀ ವೃಂದಾವನ ಕೃಷ್ಣಮಯ. ಎಲ್ಲಿ ನೋಡಿದರೂ ತುಂಟ ಕೃಷ್ಣ ಮತ್ತು ಅವನ ಹಿಂಬಾಲಕ ಗೋಪಾಲಕರ ಕೇಕೆ. ಗೋಪಿಕೆಯರ ಕಿಲಕಿಲ. ಹಸುಕರುಗಳ ಕೊರಳ ಗಂಟೆ ನಾದ. ಮೋಹನಮುರಳಿಯ ಮಂಜುಳ ನಿನಾದ. ಹೀಗೆ ವೃಂದಾವನ ಶ್ರೀ ಕೃಷ್ಣನ ಬಾಲ ಲೀಲೆಗಳನ್ನು ನೋಡಿ ನಲಿಯುತ್ತಾ ಸಂತಸದಲ್ಲಿ ಮುಳುಗೇಳುತ್ತಿದ್ದರೆ, ಅತ್ತ ಬಾಲಕೃಷ್ಣನನ್ನು ಹೇಗಾದರೂ ಮಾಡಿ ಮುಗಿಸಬೇಕೆಂದು ರಾಕ್ಷಸ ಗಣ ದಿನಕ್ಕೊಂದು ತಂತ್ರ ಹಣೆಯುತ್ತಲೇ ಇತ್ತು. ಇಂಥ ಒಂದು ಷಡ್ಯಂತ್ರದ…
-
ಮಹಾಮೂರ್ಖನ ತಲೆಗೆ ಟೋಪಿ
ಸಂಸ್ಕೃತ ಮೂಲ – ಡಾ. ಜನಾರ್ದನ ಹೆಗಡೆ, ಕಥಾಶತವಲ್ಲರೀ ಭಾಷಾನುವಾದ – ಪತಿತಪಾವನ ದಾಸ ಹಿಂದೆ ಧ್ಯಾನಚಂದ ಎಂಬ ಒಬ್ಬ ವ್ಯಾಪಾರಿ ಇದ್ದನು. ಅವನು ದೊಡ್ಡ ಭಗವದ್ಭಕ್ತನಾಗಿದ್ದನು. ಅವನು ಪ್ರತಿದಿನ ಸ್ನಾನಾದಿ ಕಾರ್ಯಗಳನ್ನು ಮುಗಿಸಿ ದೇವರ ಪೂಜೆ ಮಾಡಿ ಅಂಗಡಿಗೆ ಹೋಗುತ್ತಿದ್ದ. ಮಧ್ಯಾಹ್ನದವರೆಗೆ ಅಂಗಡಿ ನಡೆಸುತ್ತಿದ್ದ. ಅನಂತರದ ಕಾಲ ಧ್ಯಾನ, ಭಗವತ್ ಕಾರ್ಯಾದಿಗಳಲ್ಲಿ ಕಳೆಯುತ್ತಿದ್ದನು. ಒಮ್ಮೆ ನಗರದ ಮಹಾಧನಿಕನಾದ ಲಕ್ಷ್ಮೀಪತಿ ಎಂಬುವನು ಧ್ಯಾನಚಂದನನ್ನು ತನ್ನ ಮನೆಗೆ ಕರೆಸಿ ಅವನ ತಲೆಗೆ ಒಂದು ಟೋಪಿ ತೊಡಿಸಿ ಹೇಳಿದ, “ಮಹಾಮೂರ್ಖನಿಗೆ…
-
ಗಡಿಗೆಯೊಳಗಿನ ಗುಮ್ಮ!
-ಶ್ರೀಮತಿ ಪದ್ಮಿನಿ ಬಾಲು ಪೂರ್ವ ದಿಗಂತದಲ್ಲಿ ಸೂರ್ಯನು ಇಣುಕಿ ನೋಡುವ ಸನ್ನಾಹ ನಡೆಸುತ್ತಿದ್ದ. ಅರುಣ ಕಿರಣಗಳು ಭೂಮಿಯ ಮೇಲಿನ ಅಚರ ಚರಾದಿ ವಸ್ತುಗಳಿಗೆಲ್ಲ ಚಿನ್ನದ ಮೆರುಗನ್ನು ಲೇಪಿಸುತ್ತಿದ್ದವು. ಒಂಟಿಕಾಲಿನಲ್ಲಿ ನಿಂತು ಕಣ್ಣುಮುಚ್ಚಿ ತಪೋನಿರತರಾದ ಋಷಿಗಳನ್ನು ನೆನಪಿಸುತ್ತಿದ್ದ ಕೋಳಿಗಳು ಕೋ, ಕ್ಕೋ ಎಂದವು. ನಂದಗೋಕುಲದಲ್ಲಿ ಗೋಪಿಯರು ನಿದ್ದೆಯಿಂದೆದ್ದು ಮೈಮುರಿದು, ಆಕಳಿಸಿ ಕೃಷ್ಣಾ ಎಂದು ಕೈಮುಗಿದರು. ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ ಮಿಂದು ನೀರು ತರಲೆಂದು ಕೊಡಗಳನ್ನೆತ್ತಿಕೊಂಡು ಮನೆಯಿಂದ ಹೊರಬಂದರು. ಗೋಪಾಲಕರು ಹೊದಿಕೆಯನ್ನು ಕೆಡವಿ ಎದ್ದು ತಮ್ಮ ತಾಯಂದಿರಿಗೂ ಮಿಗಿಲಾದ ಗೋಮಾತೆಯ…
-
ಪೂತನಿಯ ವಧೆ
ತನ್ನನ್ನು ಸಂಹರಸಲೆಂದೇ ಹುಟ್ಟಿರುವ ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆಂಬುದು ದುರುಳ ಕಂಸನಿಗೆ ಹೇಗೋ ತಿಳಿಯಿತು. ಬಾಲಕ ಕೃಷ್ಣನನ್ನು ಕೊಲ್ಲಲು ಆತ ಬಗೆ ಬಗೆಯ ತಂತ್ರಗಳನ್ನು ಹೂಡಿದ. ಒಂದು ಸಲ ಪೂತನಿ ಎನ್ನುವ ರಾಕ್ಷಸಿಯೊಬ್ಬಳನ್ನು ಕರೆದು, ನಗರಗಳಲ್ಲಿ, ಹಳ್ಳಿಗಳಲ್ಲಿ, ಹುಲ್ಲುಗಾವಲುಗಳಲ್ಲಿ ಇರುವ ಮಕ್ಕಳನ್ನೆಲ್ಲ ಕೊಲ್ಲುವಂತೆ ಆಜ್ಞೆಮಾಡಿದ. ಪೂತನಿ, ಗೋಕುಲಕ್ಕೆ ಬಂದು, ಯಾರ ಅನುಮತಿಯೂ ಇಲ್ಲದೆ, ನಂದ ಮಹಾರಾಜನ ಅರಮನೆಯನ್ನು ಪ್ರವೇಶಿಸಿದಳು. ತನ್ನನ್ನು ಮಾಯಾ ಶಕ್ತಿಯಿಂದ ಒಬ್ಬ ಸುಂದರ ಯುವತಿಯಾಗಿ ಮಾರ್ಪಡಿಸಿಕೊಂಡಳು. ಮೆಲ್ಲನೆ ತಾಯಿ ಯಶೋದಾಳ ಮನೆಯೊಳಗೆ ನುಸುಳಿದಳು. ಅವಳ ಅದ್ಭುತ…
-
ಜೀವನದ ಸಾರ್ಥಕತೆ
ಪ್ರಭುಪಾದರು ಹೇಳಿದ ಕಥೆ ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಆತನಿಗೊಬ್ಬ ಸೇವಕ. ಪ್ರತಿನಿತ್ಯ ದೂರದ ತೊರೆಯಿಂದ ಬಿಂದಿಗೆಗಳಲ್ಲಿ ನೀರು ತುಂಬಿ ತರುವುದು ಅವನ ಕೆಲಸ. ಅವನ ಬಳಿ ಮಾರುದ್ದದ ಒಂದು ದೊಣ್ಣೆ ಇತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಿಂದಿಗೆ ಕಟ್ಟಿಕೊಂಡು ನೀರು ತರುತ್ತಿದ್ದ. ಆ ಬಿಂದಿಗೆಗಳ ಪೈಕಿ ಒಂದು ಹಳತಾಗಿತ್ತು. ಅಲ್ಲಲ್ಲಿ ತೂತುಗಳಾಗಿದ್ದವು. ಹೀಗಾಗಿ ತೊರೆಯಿಂದ ನೀರು ತುಂಬಿಕೊಂಡು ಮನೆ ತಲುಪುವಷ್ಟರಲ್ಲಿ ಆ ಬಿಂದಿಗೆಯ ಅರ್ಧಕ್ಕರ್ಧ ನೀರು ಖಾಲಿಯಾಗಿರುತ್ತಿತ್ತು. ತನ್ನ ಈ ನ್ಯೂನತೆಗಾಗಿ ಆ ತೂತು ಬಿಂದಿಗೆ…
-
ಬ್ರಾಹ್ಮಣ ಮತ್ತು ಚಮ್ಮಾರ
ಮೆಲ್ಬೋರ್ನ್‌ನಲ್ಲಿ 1976ರ ಏಪ್ರಿಲ್ 21 ರಂದು ಪ್ರಭುಪಾದರು ಹೇಳಿದ ಕಥೆ ದೇವರ್ಷಿ ನಾರದರ ಬಗ್ಗೆ ಗೊತ್ತಲ್ಲ? ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ ಅರ್ಥಾತ್ ಶ್ರೀಮನ್ನಾರಾಯಣನ ಪರಮ ಭಕ್ತರು. ಅವರು ನಿತ್ಯವೂ ನಾರಾಯಣ ದರ್ಶನ ಪಡೆಯುತ್ತಾರೆ. ಒಮ್ಮೆ ನಾರದರು ಎಂದಿನಂತೆ ನಾರಾಯಣನ ದರ್ಶನಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಅವರಿಗೊಬ್ಬ ಮಹಾಬ್ರಾಹ್ಮಣ ಎದುರಾದ. ಆತನಾದರೋ ನಿತ್ಯವೂ ವೇದಾಧ್ಯಯನ, ಪೂಜೆ-ಪುನಸ್ಕಾರಾದಿಗಳನ್ನು ಕಟ್ಟುನಿಟ್ಟಾಗಿ ಮಾಡುವ ಪರಮ ವ್ರತನಿಷ್ಟ. ನಾರದರು ಎದುರಾದ ತಕ್ಷಣ ಆತ ಪ್ರಶ್ನಿಸಿದ, “ಮಹಾಮುನಿಗಳಿಗೆ ಪ್ರಣಾಮಗಳು. ತಾವು ಶ್ರೀಕೃಷ್ಣನ ಬಳಿಗೆ ಹೋಗುತ್ತಿದ್ದೀರಲ್ಲವೆ? ಆತನ…
-
ಶ್ರೀ ಕೃಷ್ಣನ ಅವತಾರ
ಒಂದಾನೊಂದು ಕಾಲದಲ್ಲಿ ಈ ಪ್ರಪಂಚ, ಬೇರೆ ಬೇರೆ ರಾಜರ ಅತಿಯಾದ ಸೈನ್ಯದ ಸಂಖ್ಯೆಯಿಂದ ತುಂಬಿ ತುಳುಕುತ್ತಿತ್ತು. ಆಗ ಭೂಮಿ ಒಂದು ಹಸುವಿನ ರೂಪತಾಳಿ, ಕಣ್ಣೀರು ಸುರಿಸುತ್ತ ಬ್ರಹ್ಮದೇವನ ಮುಂದೆ ಬಂದು ನಿಂತಿತು. ಬ್ರಹ್ಮ, ಆಗಲೇ ಮಹಾವಿಷ್ಣು ವಾಸವಾಗಿರುವ ಕ್ಷೀರಸಮುದ್ರದ ಕಡೆಗೆ ಪರಶಿವ ಮತ್ತು ಅನೇಕ ಉಪದೇವತೆಗಳೊಂದಿಗೆ ಹೊರಟ್ಟಿದ್ದ. ಮಹಾವಿಷ್ಣುವಿನ ಮೂಲಕ ಬ್ರಹ್ಮದೇವನಿಗೆ ಒಂದು ಸಂದೇಶ ಬಂದಿತು. ದೇವೋತ್ತಮ ಪರಮ ಪುರಷ ಸದ್ಯದಲ್ಲೇ ಭೂಮಿಯಲ್ಲಿ ಅವತಾರ ತಾಳುತ್ತಾನೆ. ಆದ್ದರಿಂದ ಉಪದೇವತೆಗಳೆಲ್ಲ ಅಲ್ಲಿ ಯದುವಂಶದಲ್ಲಿ ಅವತರಿಸಬೇಕು ಎಂದು ಆಜ್ಞೆಯಾಗಿತ್ತು. ಒಂದು…