-
ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ

ಇದು ಶ್ರೀ ಶ್ರೀಮದ್ ಭಕ್ತಿಸಿದ್ಧಾಂತ ಸರಸ್ವತಿ ಗೋಸ್ವಾಮಿ ಮಹಾರಾಜ ಅವರ ಜೀವನ ಚರಿತ್ರೆ. ಕೃಷ್ಣಪ್ರಜ್ಞೆ ಮತ್ತು ಶ್ರೀ ಚೈತನ್ಯರ ಬೋಧನೆಗಳನ್ನು ಪ್ರಚುರ ಪಡಿಸಲು ಅವರು ನೀಡಿದ ಕೊಡುಗೆಯ ಮುಖ್ಯಾಂಶಗಳನ್ನು ಇಲ್ಲಿ ಸರಣಿಯಾಗಿ ವಿವರಿಸಲಾಗಿದೆ. ಭಕ್ತಿಸಿದ್ಧಾಂತ ಸರಸ್ವತಿ ಆವಿರ್ಭಾವ ಶಿಕ್ಷಣ ಮತ್ತು ಆರಂಭಿಕ ಜೀವನ ದೀಕ್ಷೆ ಸಿದ್ಧಾಂತ ಸರಸ್ವತಿ ಆರಂಭಿಕ ಚಟುವಟಿಕೆಗಳು ವಿವಾದಗಳು ಮತ್ತು ಬೋಧನೆ ಪ್ರಯತ್ನಗಳು ನಾಮ ಭಜನೆಗೆ ಬದ್ಧತೆ ಗೌಡೀಯ ಮಠದ ಸ್ಥಾಪನೆ ವಿದ್ವಾಂಸರು ಮತ್ತು ಭಾರತಶಾಸ್ತ್ರಜ್ಞರೊಂದಿಗೆ ನಿರತ ಗೌಡೀಯ ಮಠಗಳ ವಿಸ್ತರಣೆ ಬ್ರಹ್ಮ ಸಂಹಿತೆಯ
-
ಪುಸ್ತಕ ಪರಿಚಯ

ಭಗವತ್ ಸಂದೇಶ ದೇವ ದೇವೋತ್ತಮನ ಚಿತ್ಪ್ರಭಾ ಸ್ವರೂಪರಾದ ಶ್ರೀ ಶ್ರೀ ಎ.ಸಿ.ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಅನಾದೃಶವಾದ ಈ ಕಿರು ವ್ಯಾಖ್ಯೆ ಸತ್ಯಾನ್ವೇಷಕರಿಗೆ ದಾರಿದೀಪವಾಗಿದೆ. ಪೂಜ್ಯರು ಪಾರಲೌಕಿಕ ಪ್ರವೇಶದ್ವಾರದ ಮೂಲಕ ಕರ್ಮಯೋಗದ ಸಿದ್ಧ ಪ್ರಸಿದ್ಧ ಸ್ತರಕ್ಕೆ ನಮ್ಮನ್ನು ಕೊಂಡೊಯ್ಯುತ್ತಾರೆ. ಪರಮ ಪರಂಜ್ಯೋತಿ ಸ್ವರೂಪನಾದ ಶ್ರೀಕೃಷ್ಣ ಪರಮಾತ್ಮನ ಕರ್ಮಯೋಗವು ಇಹಪರಗಳೆರಡನ್ನೂ ಸಮೀಕರಿಸಿಕೊಂಡು ಆತ್ಮವನ್ನು ಮುಂದೆ ಸಾಗಿಸುವ ಸತ್ತ್ವಶಾಲಿ ಸಿದ್ಧಾಂತ. ಇಹವನ್ನು ಮರೆತು ಪರ ಎಂಬುದಿಲ್ಲ. ಬದುಕಿನ ಪೂರ್ಣತೆಗೆ ಇಹವೂಬೇಕು. ಪರವೂ ಬೇಕು. ಈ ಸಹಜಾದೇಶದ ಮನೋಜ್ಞ ಅಭಿವ್ಯಕ್ತಿ ಇದಾಗಿದೆ. ದೇಹಾತ್ಮ
-
ಆಧುನಿಕ ನಾಗರಿಕತೆ – ಮೃಗೀಯ ಬದುಕಿನ ಐಷಾರಾಮಿ ಆವೃತ್ತಿ

ಶ್ರೀಲ ಪ್ರಭುಪಾದರು ಅತಿಥಿಯೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ: ಹೈದರಾಬಾದ್, ಆಗಸ್ಟ್ 1976 ಅತಿಥಿ: ಕೃತಕ ವಿಧಾನಗಳನ್ನು ಬಳಸಿ ಗರ್ಭನಿರೋಧಿಸುವ ಪದ್ಧತಿಯ ಬಗೆಗೆ ನಿಮ್ಮ ದೃಷ್ಟಿ ಯಾವ ತೆರನದು? ಶ್ರೀಲ ಪ್ರಭುಪಾದ : ಅದು ಅತ್ಯಂತ ಪಾಪಕಾರಿಯಾದ ಕೃತ್ಯ. ಲೈಂಗಿಕ ಕ್ರಿಯೆಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದರ ಮೂಲಕ ಗರ್ಭನಿರೋಧವನ್ನು ಸಾಧಿಸಬೇಕು. ಅತಿಥಿ : ಅದು ಒಂದು ವಿಧಾನ. ಶ್ರೀಲ ಪ್ರಭುಪಾದ : ಶಾಸ್ತ್ರಗ್ರಂಥಗಳು ಮಾನ್ಯಮಾಡಿರುವುದು ಅದೊಂದೇ. ಬೇರೆಲ್ಲ ವಿಧಾನಗಳೂ ಪಾಪಪೂರ್ಣ ಆಗಿವೆ. ಅತಿಥಿ : ಆದರೆ ಪಾಪಪೂರಿತ ಚಟುವಟಿಕೆಗಳನ್ನು ಮತ್ತು
-
ನಿರ್ಭಯ ಆಚಾರ್ಯ ಶ್ರೀಲ ಸರಸ್ವತಿ ಠಾಕುರ

ಶ್ರೀಲ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ ಆಧ್ಯಾತ್ಮಿಕ ಗುರು ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ ಅವರು ಫೆಬ್ರವರಿ 6, 1874 ರಂದು ಜಗನ್ನಾಥ ಪುರಿಯಲ್ಲಿ ಜನಿಸಿದರು. ಅವರ ತಂದೆ ಶ್ರೀಲ ಭಕ್ತಿವಿನೋದ ಠಾಕುರರು, ದೊಡ್ಡ ಸರ್ಕಾರಿ ಅಧಿಕಾರಿಯಾಗಿದ್ದರು. ಅಂದರೆ ಮ್ಯಾಜಿಸ್ಟ್ರೇಟರಾಗಿದ್ದರು. ಅದು ಗೌರ್ನರ್ ನಂತರದ ಸ್ಥಾನ. ಭಕ್ತಿವಿನೋದ ಠಾಕುರರು ಜಗನ್ನಾಥ ಮಂದಿರದ ನಿರ್ವಹಣೆಯನ್ನೂ ವಹಿಸಿಕೊಂಡಿದ್ದರು. ಆಗ ಅವರ ಹೆಸರು ಕೇದಾರನಾಥ ದತ್ತ, ಕೆ.ಎನ್. ದತ್ತ. ಭಕ್ತಿವಿನೋದ ಠಾಕುರರಿಗೆ ಅನೇಕ ಗಂಡು ಮಕ್ಕಳಿದ್ದರು ಮತ್ತು ಸರಸ್ವತಿಯವರು ಐದನೆಯವರು. ಅವರು ಅಖಂಡ
-
ಶಿಕ್ಷಾಮೃತ

“ಕೃಪಣ”ರಾಗದೆ ಕೃಷ್ಣಪ್ರಜ್ಞಾವಂತರಾಗಿ ಪ್ರಭುಪಾದರನ್ನು ತಾವು ಮೊದಲು ಸಲ ಕಂಡ ಬಗೆಗೆ ಮಹಾಬುದ್ಧಿದಾಸರು ಆಗಾಗ ಹೇಳುತ್ತಿರುತ್ತಾರೆ. ದಾಸರ ಆಗಿನ ಹೆಸರು ರ್ಯಾಂಡಿ ಎಂಬುದಾಗಿದ್ದಿತು. ಆಗ ಅವರು ಕೆಂಚು ಬಣ್ಣದ ನೀಳಕೇಶಿಯಾಗಿದ್ದರು. ರ್ಯಾಂಡಿ ಸ್ಯಾನ್ ಡೈಗೋ ಸಂಸ್ಥಾನದ ವಿಶ್ವವಿದ್ಯಾಲಯದ ಫುಟ್‌ಬಾಲ್ ತಂಡದ ಸದಸ್ಯರಾಗಿದ್ದರು, ವಿದ್ಯಾರ್ಥಿಗಳ ಆಡಳಿತ ಮಂಡಳಿಯ ನಾಯಕರಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಶ್ರೀಮಂತ ತಂದೆ ತಾಯಿಗಳ ಪುತ್ರರಾಗಿದ್ದರು ಈ ರ್ಯಾಂಡಿ. ಒಂದು ದಿನ ಈತ ಲಾಸ್ ಏಂಜಲೀಸ್‌ನ ದೇವಾಲಯದಲ್ಲಿ ನಡೆಯುತ್ತಿದ್ದ ಸಾಮೂಹಿಕ ಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡುತ್ತಿದ್ದಾಗ, ಪ್ರಭುಪಾದರಿದ್ದ ಮೇಲಿನ
-
ಸುಭಾಷಿತ

-
ಸನಾತನ ಧರ್ಮ ಏಕೆ? ಏನು?

ಪ್ರಶ್ನೋತ್ತರ ರೂಪದಲ್ಲಿರುವ ಶ್ರೀಲ ಪ್ರಭುಪಾದರ “ಸನಾತನ ಧರ್ಮ ಏಕೆ? ಏನು?” ಎಂಬ ಪುಸ್ತಕದಲ್ಲಿ ಸನಾತನ ಧರ್ಮದ ಸುಂದರವಾದ ಪರಿಚಯವನ್ನು ಮಾಡಿಕೊಡಲಾಗಿದೆ. ಅದರ ಅಗತ್ಯವನ್ನು ಮತ್ತು ಅದರ ಪ್ರಸ್ತುತತೆಯನ್ನು ಪ್ರಸ್ತುತಪಡಿಸಲಾಗಿದೆ. ಸನಾತನ ಧರ್ಮ ಎಂದರೆ ಹಿಂದೂ ಧರ್ಮವಲ್ಲ! ಅದು ವಿಶ್ವಧರ್ಮ, ಸಕಲ ಮಾನವರಿಗೆ ಲೇಸನ್ನು ಬಯಸುವ ಧರ್ಮ; ಮಾನವನು ಹುಟ್ಟಿನಿಂದ ದೊಡ್ಡವನಾಗುವುದಿಲ್ಲ! ಹುಟ್ಟಿದಾಗ ಎಲ್ಲರೂ ಶೂದ್ರರೇ! ಶಿಕ್ಷಣದಿಂದ, ಸಂಸ್ಕೃತಿಯಿಂದ ತಪಸ್ಸಿನಿಂದ ಹಾಗೂ ಸೇವೆಯಿಂದ ಕೀಳು ಕುಲದಲ್ಲಿ ಹುಟ್ಟಿದವನೂ ಶ್ರೇಷ್ಠನಾಗುತ್ತಾನೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ. “ಬ್ರಹ್ಮ ಸಂಪ್ರದಾಯ”ಕ್ಕೆ “ರುದ್ರ ಸಂಪ್ರದಾಯ”
-
ಕೃಷ್ಣಪಾಕಶಾಲೆ

ವಿಧ ವಿಧದ ಹಲ್ವಾಗಳು…
-
ನೈಜ ಜ್ಞಾನ

ಶ್ರೀಲ ಪ್ರಭುಪಾದರು ಭಕ್ತರೊಬ್ಬರೊಡನೆ ನಡೆಸಿದ ಸಂವಾದ, ಸ್ಥಳ : ಮೆಲ್‌ಬೋರ್ನ್, ಆಸ್ಟ್ರೇಲಿಯಾ, ಮೇ 1975 ಭಕ್ತ: ಶ್ರೀಲ ಪ್ರಭುಪಾದರೆ, ಅನುಮಾನ ಎನ್ನಲಾಗುವ ಒಂದು ಪ್ರಕ್ರಿಯೆಯ ಮೂಲಕ ನಾವು ದೇವರ ಬಗೆಗೆ ತಿಳಿದುಕೊಳ್ಳಬಹುದೆಂದು ನಿಮ್ಮ ಒಂದು ಪುಸ್ತಕದಲ್ಲಿ ನಾನು ಓದಿದೆ. ಅನುಮಾನ ಎಂದರೇನು ? ಶ್ರೀಲ ಪ್ರಭುಪಾದ: ಅನುಮಾನ ಎಂದರೆ ತರ್ಕ. ಉದಾಹರಣೆಗೆ ಒಂದು ಯಂತ್ರ ನಮ್ಮ ಕಣ್ಣಿಗೆ ಬಿದ್ದ ಕೂಡಲೆ ಅದಕ್ಕೊಬ್ಬ ಚಾಲಕನೂ ಇರಬೇಕು ಎಂಬುದು ನಮಗೆ ಗೊತ್ತು. ಇದು ತರ್ಕ. ಒಬ್ಬ ಚಾಲಕನ ಸಹಾಯವಿಲ್ಲದೆ ಯಂತ್ರ
-
ಭಗವಾನ್ ವೇದವ್ಯಾಸರು

ಆಷಾಢ ಪೌರ್ಣಿಮೆ ವ್ಯಾಸಪೂರ್ಣಿಮೆ. ಜಗತ್ತಿನ ಜ್ಞಾನ ಭಂಡಾರದ ಕೀಲಿಕೈ ಎನ್ನಬಹುದಾದ ಸಾಹಿತ್ಯದ ನಿರ್ಮಾತೃ ವ್ಯಾಸರು. ವ್ಯಾಸಂ ವಸಿಷ್ಠನಪ್ತಾರಂ ಶಕ್ತೋಃಪೌತ್ರಮಕಲ್ಮಷಮ್ | ಪರಾಶರಾತ್ಮಜಂ ವಂದೇ ಶುಕಕಾತಂ ತಪೋನಿಧಿಮ್ || ಎಂಬ ಶ್ಲೋಕ ವ್ಯಾಸರ ಗೋತ್ರ ವಂಶಗಳನ್ನು ಹೇಳುತ್ತದೆ. ವೇದರಾಶಿಯನ್ನು ವಿಭಾಗ ಮಾಡಿ ವೇದಾಂತ ನ್ಯಾಯವನ್ನು ಸಮರ್ಥಿಸುವ ಬ್ರಹ್ಮಸೂತ್ರವನ್ನು ರಚಿಸಿದ್ದಲ್ಲದೆ ವೇದಾರ್ಥಗಳನ್ನು ವಿವರಿಸುವ ಪುರಾಣಗಳನ್ನು ರಚಿಸಿದವರು ಇವರೆ ಎಂದು ಸಂಪ್ರದಾಯ ಹೇಳುತ್ತದೆ. ಮಹಾಭಾರತದ ಕರ್ತೃ, ಸತ್ಯವತಿ ಪರಾಶರ ಪುತ್ರರಾದ ಕೃಷ್ಣದ್ವೈಪಾಯನರು ದ್ವೀಪದಲ್ಲಿ ಹುಟ್ಟಿದುದರಿಂದ ದ್ವೈಪಾಯನರೆಂದು ಪರಾಶರ ಪುತ್ರರಾದ್ದರಿಂದ ಪಾರಾಶರ್ಯರೆಂದು ವೇದಗಳನ್ನು
-
ಸೇವೆ, ಆತ್ಮ ಹಾಗೂ ಪರಮಾತ್ಮ ಈ ವಿಚಾರಗಳನ್ನು ಕುರಿತು

ಶ್ರೀಲ ಪ್ರಭುಪಾದರು ಒಬ್ಬ ಯಹೂದ್ಯ ಪಾದ್ರಿಯೊಡನೆ ನಡೆಸಿದ ಸಂವಾದ, ಸ್ಥಳ: ಮೆಲ್‌ಬೋರ್ನ್, ಮೇ 1975 ಪಾದ್ರಿ : ಧ್ಯಾನ ಸಮಾಧಿ ಎಂದು ಕರೆಯಬಹುದಾದುದರ ಬಗೆಗೆ ನಿಮಗೇನಾದರೂ ತರಬೇತಿ ಸಿಕ್ಕಿದೆಯೆ? ಶ್ರೀಲ ಪ್ರಭುಪಾದರು : ನಾವು ಒಂಬತ್ತು ವಿಧದಲ್ಲಿ ಭಗವಂತನನ್ನು ಪೂಜಿಸುತ್ತೇವೆ. ಅವುಗಳಲ್ಲಿ ಸ್ಮರಣಮ್, ಎಂದರೆ ಭಗವಂತನ ಕಾರ್ಯಗಳನ್ನು ಕುರಿತ ಚಿಂತನೆ ಒಂದು. ಅದೇ ಧ್ಯಾನ ಸಮಾಧಿ. ಪಾದ್ರಿ : ನಿಮಗೆ ತಿಳಿದೇ ಇರುತ್ತದೆ – ಕ್ರಿಶ್ಚಿಯನ್ನರ ಆಧ್ಯಾತ್ಮ ಯೋಗದಲ್ಲಿ ಧ್ಯಾನ ಸಮಾಧಿಯ ಒಂದು ಪ್ರಕ್ರಿಯೆ ಇದೆ. ಅದನ್ನು
-
ಶ್ರೀ ಶ್ಯಾಮಾನಂದ ಗೋಸ್ವಾಮಿ

ಕಲಿಯುಗದಲ್ಲಿ ಹರಿನಾಮವನ್ನು ಎಲ್ಲೆಡೆ ಪ್ರಚಾರ ಮಾಡಿ ಕೃಷ್ಣ ಪ್ರಜ್ಞೆಯ ಪುನರುಜ್ಜೀವನಕ್ಕೆ ಕಾರಣರಾದವರು ಶ್ರೀ ಚೈತನ್ಯ ಮಹಾಪ್ರಭುಗಳು. ಅವರು ದಿವ್ಯಜ್ಞಾನದ ಪುಂಜವನ್ನು ಹಿಡಿದು ಎಲ್ಲರ ಕಲುಶಿತ ಹೃದಯಗಳಲ್ಲಿ ಕೃಷ್ಣಪ್ರಜ್ಞೆಯ ಬೆಳಕನ್ನು ಚೆಲ್ಲಿದರು. ಅವರ ಪ್ರಚಾರ ಕಾರ್ಯದಿಂದಾಗಿ ಮಹಾನ್ ಶಿಷ್ಯರ ವೃಂದವೇ ಸೃಷ್ಟಿಯಾಯಿತು. ಪ್ರತಿಯೊಬ್ಬ ಶಿಷ್ಯನೂ ಸಹ ಹರಿನಾಮದ ಪ್ರಚಾರದಲ್ಲಿ ತೊಡಗಿ ಎಲ್ಲೆಡೆ ದೊಡ್ಡ ಕ್ರಾಂತಿಯನ್ನೇ ಉಂಟುಮಾಡಿದನು. ಆರು ಜನ ಗೋಸ್ವಾಮಿಗಳೆಂದೇ ಪ್ರಖ್ಯಾತರಾದ ಶ್ರೀರೂಪ, ಶ್ರೀ ಸನಾತನ, ಶ್ರೀಜೀವ, ಶ್ರೀಗೋಪಾಲಭಟ್ಟ, ಶ್ರೀರಘುನಾಥ ಮತ್ತು ಶ್ರೀರಘುನಾಥ ಭಟ್ಟರು ಶಿಷ್ಯ ವೃಂದದಲ್ಲಿ ಪ್ರಮುಖರು.
-
ಯಯಾತಿಯ ಮೋಹ ಮುಕುತಿ

ನೈಮಿಷಾರಣ್ಯದಲ್ಲಿ ಇನ್ನೊಂದು ಬೆಳಗು ! ಸೂತಮುನಿಗಳು ತಮ್ಮ ವಿವರಣೆ ಮುಂದುವರಿಸಿದರು. ಅವರು ಶುಕಮುನಿಗಳು ಹಾಗೂ ಪರೀಕ್ಷಿತನ ಸಂವಾದವನ್ನು ಉಲ್ಲೇಖಿಸುತ್ತ ತಮ್ಮ ಕಥೆ ಮುಂದುವರಿಸಿದರು. ‘ಈ ದಿನ ಮಹಾಪುರುಷನಾದ ನಹುಷನ ಕಥೆಯನ್ನು ಹೇಳುತ್ತೇನೆ. ಶ್ರೀಮದ್ಭಾಗವತದ ಸ್ಕಂಧ 9ರ ಅಧ್ಯಾಯ 18 ಮತ್ತು 19 ರಲ್ಲಿ ನಹುಷನಿಗಿಂತಲೂ ಅವನ ಮಗ ಯಯಾತಿಯ ಕಥೆಯೇ ಮುಖ್ಯವಾಗಿ ಕಾಣಿಸುತ್ತದೆ. ನಹುಷರಾಜ ಅತ್ಯಂತ ಶಕ್ತಿಶಾಲಿ. ತನ್ನ ಶಕ್ತಿ ಸಾಮರ್ಥ್ಯಗಳ ಫಲವಾಗಿ ಅವನು ದೇವೇಂದ್ರನನ್ನೂ ಲೆಕ್ಕಿಸಲಿಲ್ಲ. ಸ್ವರ್ಗ ಲೋಕವನ್ನು ಆಕ್ರಮಿಸಿಕೊಂಡ. ದೇವೇಂದ್ರ ಪರಾರಿಯಾದ. ಆಗಲೇ ನಹುಷನ
