ಮಕ್ಕಳ ಕಥೆ


  • ಗಡಿಗೆಯೊಳಗಿನ ಗುಮ್ಮ!

    ಗಡಿಗೆಯೊಳಗಿನ ಗುಮ್ಮ!

    -ಶ್ರೀಮತಿ ಪದ್ಮಿನಿ ಬಾಲು ಪೂರ್ವ ದಿಗಂತದಲ್ಲಿ ಸೂರ್ಯನು ಇಣುಕಿ ನೋಡುವ ಸನ್ನಾಹ ನಡೆಸುತ್ತಿದ್ದ. ಅರುಣ ಕಿರಣಗಳು ಭೂಮಿಯ ಮೇಲಿನ ಅಚರ ಚರಾದಿ ವಸ್ತುಗಳಿಗೆಲ್ಲ ಚಿನ್ನದ ಮೆರುಗನ್ನು ಲೇಪಿಸುತ್ತಿದ್ದವು. ಒಂಟಿಕಾಲಿನಲ್ಲಿ ನಿಂತು ಕಣ್ಣುಮುಚ್ಚಿ ತಪೋನಿರತರಾದ ಋಷಿಗಳನ್ನು ನೆನಪಿಸುತ್ತಿದ್ದ ಕೋಳಿಗಳು ಕೋ, ಕ್ಕೋ ಎಂದವು. ನಂದಗೋಕುಲದಲ್ಲಿ ಗೋಪಿಯರು ನಿದ್ದೆಯಿಂದೆದ್ದು ಮೈಮುರಿದು, ಆಕಳಿಸಿ ಕೃಷ್ಣಾ ಎಂದು ಕೈಮುಗಿದರು. ತಮ್ಮ ಪ್ರಾತರ್ವಿಧಿಗಳನ್ನು ಮುಗಿಸಿ ಮಿಂದು ನೀರು ತರಲೆಂದು ಕೊಡಗಳನ್ನೆತ್ತಿಕೊಂಡು ಮನೆಯಿಂದ ಹೊರಬಂದರು. ಗೋಪಾಲಕರು ಹೊದಿಕೆಯನ್ನು ಕೆಡವಿ ಎದ್ದು ತಮ್ಮ ತಾಯಂದಿರಿಗೂ ಮಿಗಿಲಾದ ಗೋಮಾತೆಯ…


  • ಪೂತನಿಯ ವಧೆ

    ಪೂತನಿಯ ವಧೆ

    ತನ್ನನ್ನು ಸಂಹರಸಲೆಂದೇ ಹುಟ್ಟಿರುವ ಕೃಷ್ಣ ಗೋಕುಲದಲ್ಲಿ ಬೆಳೆಯುತ್ತಿದ್ದಾನೆಂಬುದು ದುರುಳ ಕಂಸನಿಗೆ ಹೇಗೋ ತಿಳಿಯಿತು. ಬಾಲಕ‍ ಕೃಷ್ಣನನ್ನು ಕೊಲ್ಲಲು ಆತ ಬಗೆ ಬಗೆಯ ತಂತ್ರಗಳನ್ನು ಹೂಡಿದ. ಒಂದು ಸಲ ಪೂತನಿ ಎನ್ನುವ ರಾಕ್ಷಸಿಯೊಬ್ಬಳನ್ನು ಕರೆದು, ನಗರಗಳಲ್ಲಿ, ಹಳ್ಳಿಗಳಲ್ಲಿ, ಹುಲ್ಲುಗಾವಲುಗಳಲ್ಲಿ ಇರುವ ಮಕ್ಕಳನ್ನೆಲ್ಲ ಕೊಲ್ಲುವಂತೆ ಆಜ್ಞೆಮಾಡಿದ. ಪೂತನಿ, ಗೋಕುಲಕ್ಕೆ ಬಂದು, ಯಾರ ಅನುಮತಿಯೂ ಇಲ್ಲದೆ, ನಂದ ಮಹಾರಾಜನ ಅರಮನೆಯನ್ನು ಪ್ರವೇಶಿಸಿದಳು. ತನ್ನನ್ನು ಮಾಯಾ ಶಕ್ತಿಯಿಂದ ಒಬ್ಬ ಸುಂದರ ಯುವತಿಯಾಗಿ ಮಾರ್ಪಡಿಸಿಕೊಂಡಳು. ಮೆಲ್ಲನೆ ತಾಯಿ ಯಶೋದಾಳ ಮನೆಯೊಳಗೆ ನುಸುಳಿದಳು. ಅವಳ ಅದ್ಭುತ…


  • ಜೀವನದ ಸಾರ್ಥಕತೆ

    ಜೀವನದ ಸಾರ್ಥಕತೆ

    ಪ್ರಭುಪಾದರು ಹೇಳಿದ ಕಥೆ ಒಂದೂರಿನಲ್ಲಿ ಒಬ್ಬ ಸಾಹುಕಾರನಿದ್ದ. ಆತನಿಗೊಬ್ಬ ಸೇವಕ. ಪ್ರತಿನಿತ್ಯ ದೂರದ ತೊರೆಯಿಂದ ಬಿಂದಿಗೆಗಳಲ್ಲಿ ನೀರು ತುಂಬಿ ತರುವುದು ಅವನ ಕೆಲಸ. ಅವನ ಬಳಿ ಮಾರುದ್ದದ ಒಂದು ದೊಣ್ಣೆ ಇತ್ತು. ಅದರ ಎರಡೂ ತುದಿಗಳಿಗೆ ಒಂದೊಂದು ಬಿಂದಿಗೆ ಕಟ್ಟಿಕೊಂಡು ನೀರು ತರುತ್ತಿದ್ದ. ಆ ಬಿಂದಿಗೆಗಳ ಪೈಕಿ ಒಂದು ಹಳತಾಗಿತ್ತು. ಅಲ್ಲಲ್ಲಿ ತೂತುಗಳಾಗಿದ್ದವು. ಹೀಗಾಗಿ ತೊರೆಯಿಂದ ನೀರು ತುಂಬಿಕೊಂಡು ಮನೆ ತಲುಪುವಷ್ಟರಲ್ಲಿ ಆ ಬಿಂದಿಗೆಯ ಅರ್ಧಕ್ಕರ್ಧ ನೀರು ಖಾಲಿಯಾಗಿರುತ್ತಿತ್ತು. ತನ್ನ ಈ ನ್ಯೂನತೆಗಾಗಿ ಆ ತೂತು ಬಿಂದಿಗೆ…


  • ಬ್ರಾಹ್ಮಣ ಮತ್ತು ಚಮ್ಮಾರ

    ಬ್ರಾಹ್ಮಣ ಮತ್ತು ಚಮ್ಮಾರ

    ಮೆಲ್ಬೋರ್ನ್‌ನಲ್ಲಿ 1976ರ ಏಪ್ರಿಲ್‌ 21 ರಂದು ಪ್ರಭುಪಾದರು ಹೇಳಿದ ಕಥೆ ದೇವರ್ಷಿ ನಾರದರ ಬಗ್ಗೆ ಗೊತ್ತಲ್ಲ? ದೇವೋತ್ತಮ ಪರಮ ಪುರುಷ ಶ್ರೀಕೃಷ್ಣ ಅರ್ಥಾತ್‌ ಶ್ರೀಮನ್ನಾರಾಯಣನ ಪರಮ ಭಕ್ತರು. ಅವರು ನಿತ್ಯವೂ ನಾರಾಯಣ ದರ್ಶನ ಪಡೆಯುತ್ತಾರೆ. ಒಮ್ಮೆ ನಾರದರು ಎಂದಿನಂತೆ ನಾರಾಯಣನ ದರ್ಶನಕ್ಕೆ ಹೋಗುತ್ತಿದ್ದರು. ದಾರಿಯಲ್ಲಿ ಅವರಿಗೊಬ್ಬ ಮಹಾಬ್ರಾಹ್ಮಣ ಎದುರಾದ. ಆತನಾದರೋ ನಿತ್ಯವೂ ವೇದಾಧ್ಯಯನ, ಪೂಜೆ-ಪುನಸ್ಕಾರಾದಿಗಳನ್ನು ಕಟ್ಟುನಿಟ್ಟಾಗಿ ಮಾಡುವ ಪರಮ ವ್ರತನಿಷ್ಟ. ನಾರದರು ಎದುರಾದ ತಕ್ಷಣ ಆತ ಪ್ರಶ್ನಿಸಿದ, “ಮಹಾಮುನಿಗಳಿಗೆ ಪ್ರಣಾಮಗಳು. ತಾವು ಶ್ರೀಕೃಷ್ಣನ ಬಳಿಗೆ ಹೋಗುತ್ತಿದ್ದೀರಲ್ಲವೆ? ಆತನ…


  • ಶ್ರೀ ಕೃಷ್ಣನ ಅವತಾರ

    ಶ್ರೀ ಕೃಷ್ಣನ ಅವತಾರ

    ಒಂದಾನೊಂದು ಕಾಲದಲ್ಲಿ ಈ ಪ್ರಪಂಚ, ಬೇರೆ ಬೇರೆ ರಾಜರ ಅತಿಯಾದ ಸೈನ್ಯದ ಸಂಖ್ಯೆಯಿಂದ ತುಂಬಿ ತುಳುಕುತ್ತಿತ್ತು. ಆಗ ಭೂಮಿ ಒಂದು ಹಸುವಿನ ರೂಪತಾಳಿ, ಕಣ್ಣೀರು ಸುರಿಸುತ್ತ ಬ್ರಹ್ಮದೇವನ ಮುಂದೆ ಬಂದು ನಿಂತಿತು. ಬ್ರಹ್ಮ, ಆಗಲೇ ಮಹಾವಿಷ್ಣು ವಾಸವಾಗಿರುವ ಕ್ಷೀರಸಮುದ್ರದ ಕಡೆಗೆ ಪರಶಿವ ಮತ್ತು ಅನೇಕ ಉಪದೇವತೆಗಳೊಂದಿಗೆ ಹೊರಟ್ಟಿದ್ದ. ಮಹಾವಿಷ್ಣುವಿನ  ಮೂಲಕ ಬ್ರಹ್ಮದೇವನಿಗೆ ಒಂದು ಸಂದೇಶ ಬಂದಿತು. ದೇವೋತ್ತಮ ಪರಮ ಪುರಷ ಸದ್ಯದಲ್ಲೇ ಭೂಮಿಯಲ್ಲಿ ಅವತಾರ ತಾಳುತ್ತಾನೆ. ಆದ್ದರಿಂದ ಉಪದೇವತೆಗಳೆಲ್ಲ ಅಲ್ಲಿ ಯದುವಂಶದಲ್ಲಿ ಅವತರಿಸಬೇಕು ಎಂದು ಆಜ್ಞೆಯಾಗಿತ್ತು. ಒಂದು…


  • ದ್ರೋಣಪುತ್ರನಿಗೆ ಶಿಕ್ಷೆ

    ದ್ರೋಣಪುತ್ರನಿಗೆ ಶಿಕ್ಷೆ

    ಕುರುಕ್ಷೇತ್ರದಲ್ಲಿ ನಡೆದ ಹದಿನೆಂಟು ದಿನಗಳ ಕದನದಲ್ಲಿ ಪಾಂಡವರು ವಿಜಯ ಸಾಧಿಸಿದರು. ದ್ರೋಣಾಚಾರ್ಯರ ಪುತ್ರನಾದ ಅಶ್ವತ್ಥಾಮನು ಪಾಂಡವರ ಮೇಲೆ ಸೇಡು ತೀರಿಸಿಕೊಳ್ಳಬಯಸಿ ಅವರನ್ನು ಕೊಲ್ಲಲು ಒಂದು ಹೇಯ ಕಾರ್ಯತಂತ್ರವನ್ನು ರೂಪಿಸಿದನು. ಪಾಂಡವರಿಗೆ ತಾರುಣ್ಯಕ್ಕೆ ಬಂದಿದ್ದ ಐವರನ್ನು ಪುತ್ರರು ಇದ್ದರು. ಆ ಐವರು ಪಾಂಡವರೇ ಎಂದು ಭ್ರಮಿಸಿದ ಅಶ್ವತ್ಥಾಮನು ಅವರೆಲ್ಲರ ತಲೆಗಳನ್ನು ಕೊಚ್ಚಿಹಾಕಿದನು. ನಿದ್ರಿಸುತ್ತಿದ್ದ ತನ್ನ ಐವರು ಪುತ್ರರು ಕೊಲೆಯಾದ ಸಂಗತಿಯನ್ನು ಕೇಳಿದಾಗ ದ್ರೌಪದಿಯು ಪುತ್ರಶೋಕದ ಯಾತನೆಯಿಂದ ಕಣ್ಣೀರು ಹರಿಸಿದಳು. ಅವಳನ್ನು ಸಮಾಧಾನ ಪಡಿಸಲು ಯತ್ನಿಸುತ್ತಾ ಅರ್ಜುನನು, “ಹೇ ಕೋಮಲೆ,…


  • ಗೋವಿನ ಬಾಲ ಹಿಡಿದ ಕುರುಡ

    ಗೋವಿನ ಬಾಲ ಹಿಡಿದ ಕುರುಡ

    ಶ್ರೀಲ ಭಕ್ತಿಸಿದ್ಧಾಂತ ಸರಸ್ವತಿ ಠಾಕುರ, ಶ್ರೀಲ ಪ್ರಭುಪಾದರ ಗುರು, ಗೌಡಿಯ ಮಠದ ಸಂಸ್ಥಾಪಕ ಅವರು ಹೇಳಿದ ಕಥೆ. ಒಂದು ದಿನ ಕುರುಡ ತನ್ನ ಮಾವನ ಮನೆಗೆ ಹೋಗುತ್ತಿದ್ದ. ಕೈಯಲ್ಲಿ ಒಂದು ಊರುಗೋಲನ್ನು ಹಿಡಿದುಕೊಂಡು ಅದರ ಸಹಾಯದಿಂದ ಸಾಗುತ್ತಿದ್ದ. ಹೀಗೆ ಒಂದು ಹೊಲದ ಮೂಲಕ ಹಾದು ಹೋಗುವಾಗ ಆತನಿಗೆ ಗೋವುಗಳನ್ನು ಮೇಯಿಸುತ್ತಿದ್ದ ಗೋಪಾಲಕ ಎದುರಾದ. “ಅಣ್ಣಾ, ನನಗೆ ಮಾವನ ಮನೆಗೆ ಹೋಗಲು ಸಹಾಯ ಮಾಡುವೆಯಾ?” ಎಂದು ಆತ ಗೋಪಾಲಕನನ್ನು ಕೇಳಿದ. “ನನಗೆ ಪುರುಸೊತ್ತಿಲ್ಲ. ನಾನು ಇಷ್ಟೊಂದು ಗೋವುಗಳನ್ನು ನೋಡಿಕೊಳ್ಳಬೇಕು.…


  • ತೃಣಾವರ್ತನ ಮೋಕ್ಷ

    ತೃಣಾವರ್ತನ ಮೋಕ್ಷ

    ಕೃಷ್ಣ ಈಗ ಇನ್ನೂ ಸ್ವಲ್ಪ ದೊಡ್ಡವನಾದ. ಅವನು ಬೋರಲು ಬೀಳಲು ಪ್ರಾರಂಭಿಸಿದ. ಆದರೆ, ಬೆನ್ನುಮೇಲೆ ಮಾಡಿ ಮಲಗಿ ಅವನು ಸುಮ್ಮನಿರುತ್ತಿರಲಿಲ್ಲ. ಆ ಸಂದರ್ಭದಲ್ಲಿ ಸದಾ ಏನಾದರೂ ಚೇಷ್ಟೆಗಳನ್ನು ಮಾಡುತ್ತಲೇ ಇರುತ್ತಿದ್ದ. ಒಂದು ಕ್ಷಣವೂ ಒಂದು ಕಡೆ ಮಲಗಿರುತ್ತಿರಲಿಲ್ಲ. ಸರಸರನೆ ಈಜಿಕೊಂಡು ಹೋಗಿ ಕೈಗೆ ಸಿಕ್ಕಿದ್ದನ್ನೆಲ್ಲ ಎಳೆದು ಹಾಕುತ್ತಿದ್ದ. ಹೀಗೆ ತುಂಟ ಕೃಷ್ಣನಿಗೆ ಒಂದು ವರ್ಷ ತುಂಬಿತು. ಯಶೋದಾ ಮತ್ತು ನಂದ ಮಹಾರಾಜ ಇನ್ನೊಂದು ಸಮಾರಂಭವನ್ನು ಏರ್ಪಡಿಸಿದರು. ವೈದಿಕ ನಿಯಮಗಳನ್ನು ಅನುಸರಿಸುವ ಎಲ್ಲರೂ ಇಂದಿಗೂ ಆಚರಿಸುತ್ತ ಬಂದಿರುವ ಕೃಷ್ಣನ…


  • ದೇವರು ಇರುವನೇ?

    ದೇವರು ಇರುವನೇ?

    ಒಬ್ಬ ಸಜ್ಜನರು ಒಮ್ಮೆ ಕ್ಷೌರ ಮಾಡಿಸಿಕೊಳ್ಳಲು ಕ್ಷೌರಿಕನ ಅಂಗಡಿಗೆ ಹೋದರು. ಕ್ಷೌರಿಕನೋ ಮಾತಿನ ಮಲ್ಲ. ಹಾಗಾಗಿ…


  • ರಾಜನಿಗೆ 4 ಪತ್ನಿಯರು! ನಮಗೆ?

    ರಾಜನಿಗೆ 4 ಪತ್ನಿಯರು! ನಮಗೆ?

    ಇಲ್ಲೊಂದು ಸ್ವಾರಸ್ವವಾದ ಕಥೆ ಇದೆ. ಆಲೋಚಿಸಿ. ರಾಜನಂತೆ ಪ್ರತಿಯೊಬ್ಬರಿಗೂ 4 ಪತ್ನಿಯರು!…